ಉಡುಪಿ: ನಾವು ನಮ್ಮ ಹಿಜಬ್ ಹಕ್ಕಿಗಾಗಿ ಮುಂದಿನ ಹೋರಾಟ ಮಾಡುತ್ತೇವೆ. ನಮ್ಮ ಸಂವಿಧಾನ ಹಕ್ಕಿಗಾಗಿ ಹೋರಾಡುತ್ತೇವೆ. ಕುರಾನ್ ಅನ್ನು ಅನುಸರಿಸುತ್ತೇವೆ ಹೊರತು ಸರ್ಕಾರದ ಆದೇಶ ಅನುಸರಿಸಬೇಕಾಗಿಲ್ಲ ಎಂದು ವಿದ್ಯಾರ್ಥಿನಿ ಹಾಗೂ ಧಾರ್ಮಿಕ ಹಕ್ಕಿನ ಹೋರಾಟಗಾರ್ತಿ ಆಲಿಯಾ ಅಸ್ಸಾದಿ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿಜಬ್ ಹೈಕೋರ್ಟ್ ತೀರ್ಪು ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಆಲಿಯಾ ನಾವು ಹಿಜಬ್ ತೆಗೆದು ತರಗತಿ ಪ್ರವೇಶಿಸುವುದಿಲ್ಲ. ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಕುರಾನ್‌ನಲ್ಲಿ ದೇಹವನ್ನು ಮುಚ್ಚಬೇಕೆಂಬ ಉಲ್ಲೇಖ ಇದೆ. ಹಿಜಬ್ ಅವಶ್ಯಕತೆ ಇಲ್ಲದಿದ್ದರೆ ನಾವು ಹಿಜಬ್ ತೊಡುತ್ತಿರಲಿಲ್ಲ ಹಾಗೂ ಹೋರಾಟವನ್ನೂ ಮಾಡುತ್ತಿರಲಿಲ್ಲ ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರದ ಒತ್ತಡದಿಂದ ಬಂದಿರುವ ತೀರ್ಪು: ಉಡುಪಿ ವಿದ್ಯಾರ್ಥಿನಿಯರು
Advertisement
ನಾವು ನಮ್ಮ ನಿಲುವಿನಲ್ಲಿ ಕಾಂಪ್ರಮೈಸ್ ಮಾಡಲ್ಲ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಹಿಜಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿದೆವು. ಆದರೆ ನಮ್ಮ ನಿರೀಕ್ಷೆಗೆ ವಿರುದ್ಧ ತೀರ್ಪು ಬಂದಿದೆ. ಸರ್ಕಾರದ ವಸ್ತ್ರಸಂಹಿತೆ ಆದೇಶವನ್ನು ತೀರ್ಪಿನಲ್ಲೇ ಪ್ರಕಟಿಸಲಾಗಿದೆ ಎಂದರು. ಇದನ್ನೂ ಓದಿ: ಕೋರ್ಟ್‌ನಿಂದ ರಾಜಕೀಯ ಪ್ರೇರಿತ ಅಸಂವಿಧಾನಿಕ ತೀರ್ಪು: SDPI
Advertisement
ಸರ್ಕಾರದ ಮಧ್ಯಂತರ ಆದೇಶದ ಮೂಲಕ ಕೋರ್ಟ್ ಮೇಲೆ ಒತ್ತಡ ಹಾಕಲಾಗಿದೆ. ರಾಜ್ಯ ಸರ್ಕಾರ ಕೋರ್ಟ್ ತೀರ್ಪಿನ ಮೇಲೆ ಹಸ್ತಕ್ಷೇಪ ಮಾಡಿದೆ. ಹೀಗಾಗಿ ಇಂದು ಹಿಜಬ್ ವಿರುದ್ಧ ತೀರ್ಪು ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.