ಉಡುಪಿ: ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ ದಾಖಲೆಯ ಮೇಲೆ ದಾಖಲೆಗಳು ನಡೆಯುತ್ತಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಅಶ್ವಥಪುರ ನಿವಾಸಿ ಶ್ರೀನಿವಾಸ ಗೌಡರನ್ನು ಈಗಾಗಲೇ ಕಂಬಳದ ಉಸೇನ್ ಬೋಲ್ಟ್ ಗೆ ಹೋಲಿಸಲಾಗಿದೆ. ಇದೀಗ ನಿಶಾಂತ್ ಶೆಟ್ಟಿ ಎಂಬವರು ಇವರನ್ನೂ ಮೀರಿಸಿದ್ದಾರೆ.
ಹೌದು. ಕಿನ್ನಿಗೋಳಿಯ ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ್ ಗೌಡ ಕಂಬಳದ ದಾಖಲೆ ಬರೆದಿದ್ದರು. ಆದರೆ ಇದೀಗ ಶ್ರೀನಿವಾಸಗೌಡರ ದಾಖಲೆಯನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೊಳಿ ನಿಶಾಂತ್ ಶೆಟ್ಟಿ ಮುರಿದಿದ್ದಾರೆ.
Advertisement
Advertisement
142.5 ಮೀಟರ್ ಕಂಬಳ ಗದ್ದೆಯನ್ನು ಕ್ರಮಿಸಲು ಶ್ರೀನಿವಾಸ ಗೌಡ 13.62 ಸೆಕೆಂಡ್ ತೆಗೆದುಕೊಂಡಿದ್ದರು. ಶ್ರೀನಿವಾಸಗೌಡ ಮಾಡಿದ ದಾಖಲೆಯನ್ನು ಒಂದೇ ವಾರದಲ್ಲಿ ನಿಶಾಂತ್ ಶೆಟ್ಟಿ ಮುರಿದಿದ್ದಾರೆ. ವೇಣೂರಿನಲ್ಲಿ ನಡೆದ ಕಂಬಳದಲ್ಲಿ ನಿಶಾಂತ್ ಶೆಟ್ಟಿ 143 ಮೀಟರನ್ನು 13.61 ಸೆಂಕೆಡಲ್ಲಿ ಓಡಿದ್ದಾರೆ. ಇದನ್ನೂ ಓದಿ: ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ
Advertisement
Advertisement
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಿಶಾಂತ್ ಶೆಟ್ಟಿ, ಇದರಲ್ಲಿ ನಮ್ಮ ಸಾಧನೆ ಏನೂ ಇಲ್ಲ. ಕೋಣಗಳು ಓಡಿದಾಗ ನಾವು ಬೆನ್ನತ್ತಿ ಓಡುತ್ತೇವೆ. ಶ್ರೀನಿವಾಸಗೌಡರ ಸಾಧನೆಯ ಮುಂದೆ ನಮ್ಮದೇನೂ ಇಲ್ಲ. ಅವರು 150ಕ್ಕಿಂತಲೂ ಹೆಚ್ಚು ಮೆಡಲ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೆಲವು ದಿನ ಕೆಲವು ಕೋಣಗಳು ಚೆನ್ನಾಗಿ ಓಡುತ್ತವೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಕ್ಕಿಂತಲೂ ಹೆಚ್ಚು ಉತ್ತಮ ಓಟಗಾರರು ಇದ್ದೇವೆ. ಕಂಬಳದ ಓಟಗಾರರಿಗೆ ಕರ್ನಾಟಕ ಸರ್ಕಾರ ವಿಮಾ ಸೌಲಭ್ಯವನ್ನು ಕೊಡಬೇಕು ಎಂದು ಮಾಧ್ಯಮಗಳ ಮೂಲಕ ನಿಶಾಂತ್ ಶೆಟ್ಟಿ ಒತ್ತಾಯಿಸಿದರು. ಇದನ್ನೂ ಓದಿ: ಕಂಬಳ ಹೀರೋಗೆ ಸಖತ್ ಡಿಮ್ಯಾಂಡ್- ಒಲಂಪಿಕ್ಸ್‌ಗೆ ಇಳಿಯೋ ಮುನ್ನವೇ ಶೂ ಕಂಪನಿಗಳಿಂದ ಕರೆ
ಶ್ರೀನಿವಾಸ ಗೌಡ ಅವರು ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದರು. ಇದು ಕಂಬಳ ಕ್ರೀಡೆಯಲ್ಲಿ ಇದೂವರೆಗಿನ ಅತ್ಯಂತ ವೇಗದ ದಾಖಲೆಯೆಂದು ಪರಿಗಣಿಸಲಾಗಿದೆ. ಶ್ರೀನಿವಾಸ್ ಗೌಡ ಅವರು ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿದರೆ 9.55 ಸೆಕೆಂಡ್‍ನಲ್ಲಿ ಓಟ ಪೂರ್ಣಗೊಳಿಸಿ ಬೋಲ್ಟ್ ದಾಖಲೆಯನ್ನು ಉಡಾಯಿಸಿದ್ದರು. ಇದನ್ನೂ ಓದಿ: ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಿ ಪೋಸ್‍ಕೊಟ್ಟ ಸಿಟಿ ರವಿ, ಹೆಬ್ಬಾರ್