ಉಡುಪಿ: ಶಿರೂರು ಮಠದ (Shiroor Math) ಪರ್ಯಾಯಕ್ಕೆ ಕ್ಷಣಗಣನೆ ಶುರುವಾಗಿದೆ. ಉಡುಪಿ (Udupi) ಕೃಷ್ಣದೇವರನ್ನು ಅನ್ನಬ್ರಹ್ಮ ಎಂದೇ ಕರೆಯುತ್ತಾರೆ. ಪರ್ಯಾಯ ಉತ್ಸವದ ಸಂದರ್ಭ ಹಾಗೂ ಮುಂದಿನ ಎರಡು ವರ್ಷಗಳ ಕಾಲ ಲಕ್ಷಾಂತರ ಜನರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಈ ಅನ್ನಬ್ರಹ್ಮನ ಆರಾಧನೆಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಹಾರ ವಸ್ತುಗಳು ಹೊರೆ ಕಾಣಿಕೆಯಾಗಿ ಸಮರ್ಪಿಸಲಾಗುತ್ತಿದೆ.
ಇದುವರೆಗೆ 5,000 ಕೆಜಿ ಅಕ್ಕಿ, 40,000 ಕೆಜಿ ಬೆಲ್ಲ ಸಂಗ್ರಹವಾಗಿದೆ. ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ಲಕ್ಷ ಜನರಿಗೆ ಅನ್ನಪ್ರಸಾದ ವಿನಿಯೋಗಿಸಲಾಗುವುದು. ಕಟೀಲು ಹಾಗೂ ಧರ್ಮಸ್ಥಳ ಕ್ಷೇತ್ರದಿಂದ ಬಂದಿರುವ ಹೊರೆ ಕಾಣಿಕೆ ಇದಾಗಿದೆ. ಇದನ್ನೂ ಓದಿ: ಡಿಕೆಶಿ ಡೆಲ್ಲಿ ಟೂರ್ ಗೇಮ್.. ಬೆಂಗಳೂರಲ್ಲೇ ಕುಳಿತು ಸಿದ್ದರಾಮಯ್ಯ ಚೆಕ್ ಮೇಟ್..! ರಾಹುಲ್ ಬಳಿ ಜಾರ್ಜ್ ಹೋಗಿದ್ದೇಕೆ..!?
ಉಡುಪಿ ಶ್ರೀಕೃಷ್ಣ ದೇವರ ಪೂಜಾಧಿಕಾರ ಶಿರೂರು ಮಠಕ್ಕೆ ಹಸ್ತಾಂತರಗೊಳ್ಳುವ ಸಂದರ್ಭ. ಈ ಹಿನ್ನೆಲೆಯಲ್ಲಿ ನಾಡಹಬ್ಬವಾಗಿ ಪರ್ಯಾಯ ಮಹೋತ್ಸವ ನಡೆಯುತ್ತಿದೆ. ಪ್ರತಿ ದಿನ ಮೆರವಣಿಗೆ ರೂಪದಲ್ಲಿ ಶಿರೂರು ಮಠಕ್ಕೆ ಹೊರೆ ಕಾಣಿಕೆ ಸಮರ್ಪಣೆ ಆಗುತ್ತಿದೆ.
ಮಠಕ್ಕೆ ಹೊರೆ ಕಾಣಿಕೆ ರೂಪದಲ್ಲಿ ಅಕ್ಕಿ, ಬೆಲ್ಲ, ಸಕ್ಕರೆ, ತೆಂಗಿನಕಾಯಿ, ಮೆಣಸು, ತರಕಾರಿ.. ಹೀಗೆ ದವಸ-ಧಾನ್ಯಗಳನ್ನು ಭಕ್ತರು ಕೊಡುತ್ತಿದ್ದಾರೆ. ಶ್ರೀಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಪ್ರಸಾದಕ್ಕೆ ಅವಕಾಶ ಕಲ್ಪಿಸಲು ಹೊರೆ ಕಾಣಿಕೆ ಸಮರ್ಪಿಸಲಾಗುತ್ತಿದೆ. ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರದಲ್ಲಿ ಮೂಗು ತೂರಿಸಲ್ಲ: ಹೆಚ್‌ಸಿ ಬಾಲಕೃಷ್ಣ

