ಮಸೀದಿಯ ಸಭಾಂಗಣದಲ್ಲೇ ಪ್ರತಿಯೊಬ್ರು ಮದ್ವೆಯಾಗ್ಬೇಕು- ಬಡ ಮುಸ್ಲಿಮರ ನಿದ್ದೆಗೆಡಿಸಿದ ಫತ್ವಾ

Public TV
1 Min Read
UDP 5

ಉಡುಪಿ: ಜಿಲ್ಲೆಯಲ್ಲಿರುವ ಕನ್ನಂಗಾರು ಮಸೀದಿ ರಾಜ್ಯದಲ್ಲೇ ಬಹಳ ಪ್ರಸಿದ್ಧಿ ಪಡೆದಿದೆ. ಈ ಮಸೀದಿ ವ್ಯಾಪ್ತಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮುಸ್ಲಿಮರೂ ಮಸೀದಿಯ ಸಭಾಂಗಣದಲ್ಲೇ ಮದುವೆಯಾಗಬೇಕು. ನಿಯಮ ಮೀರಿದರೆ ನಿಖಾ ರಿಜಿಸ್ಟರ್ ಆಗಲ್ಲ. ಇದೀಗ ಮಸಿದಿಯ ಈ ಫತ್ವಾ ಬಡ ಮುಸ್ಲಿಮರ ನಿದ್ದೆಗೆಡಿಸಿದೆ.

UDP

 ಫತ್ವಾ ಮೂಲಕ ಕನ್ನಂಗಾರು ಮಸೀದಿಯಲ್ಲಿರೋ ಹೈಬಾ ಸಭಾಂಗಣವೀಗ ವಿವಾದದ ಕೇಂದ್ರಬಿಂದುವಾಗಿದೆ. ಈ ಊರಲ್ಲಿ ಯಾವುದೇ ಮದುವೆಯಾದರೂ ಇಲ್ಲೇ ಆಗಬೇಕು ಎಂದು ಫತ್ವಾ ಹೊರಡಿಸಲಾಗಿದೆ. ಹೈಬಾ ಸಭಾಂಗಣ ಬಿಟ್ಟು ಬೇರೆ ಕಡೆ ಮದುವೆಯಾದರೆ 30 ಸಾವಿರ ರೂ. ದಂಡ ಕಟ್ಟಬೇಕು. ಒಂದು ವೇಳೆ ದಂಡ ಕಟ್ಟಿದರೂ ಆ ಮದುವೆಗೆ ಧರ್ಮಗುರುಗಳು ಬರಲೇಬೇಕು. ಇಲ್ಲದಿದ್ದರೆ ಮದುವೆ ರಿಜಿಸ್ಟರ್ ಗೆ ಮಸೀದಿ ಸತಾಯಿಸುತ್ತದೆ ಎಂದು ಕಾಪು ನಿವಾಸಿ ಹನೀಫ್  ದೂರಿದ್ದಾರೆ.

udpaa

ಈ ಮಸೀದಿಗೆ ಸರ್ಕಾರದಿಂದ 50 ಲಕ್ಷ ರೂಪಾಯಿ ಅನುದಾನ ಬಂದಿದೆ. ಬಡ ಮುಸ್ಲಿಮರಿಗಾಗಿ ವಕ್ಫ್ ಬೋರ್ಡ್‍ನಿಂದ ಸಮುದಾಯ ಭವನ ನಿರ್ಮಿಸಲಾಗಿದೆ. 5 ಲಕ್ಷ ರೂಪಾಯಿ ವಿನಿಯೋಗಿಸಿ ಹೈಬಾ ಆಡಿಟೋರಿಯಂ ನಿರ್ಮಿಸಲಾಗಿದೆ. ಈ ಮಸೀದಿಗೆ ಕಳೆದ 9 ವರ್ಷದಿಂದ ಮಂಗಳೂರು ಮೂಲದ ಎಚ್.ಪಿ.ಮೊಹಮ್ಮದ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ಮೊಹಮ್ಮದ್‍ಗೆ ಮಾಜಿ ಸಚಿವ ಯು.ಟಿ ಖಾದರ್, ಮಾಜಿ ಶಾಸಕ ಮೊಯ್ದೀನ್ ಬಾವಾ, ಎಂಎಲ್‍ಸಿ ಫಾರೂಕ್ ಬೆಂಬಲ ಇದೆ ಅನ್ನೋ ಆರೋಪ ಕೇಳಿಬಂದಿದೆ.

UDP 1 1

ಮಸೀದಿ ಸಭಾಂಗಣದಲ್ಲೇ ಮದುವೆಯಾಗಬೇಕು ಎಂಬ ಫರ್ಮಾನು ಸ್ಥಳೀಯ ಮುಸ್ಲಿಮರಿಗೆ ಕಷ್ಟವಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *