ಉಡುಪಿ: ಏಷ್ಯಾ ಕಪ್ ಎಂಬ ರಣರಂಗದಲ್ಲಿ ಇಂದು ಇಂಡಿಯಾ ಪಾಕಿಸ್ತಾನ ಕಾದಾಟ ಮಾಡಲಿದೆ. ಏಕದಿನ ಲೀಗ್ ಪಂದ್ಯವಾದ್ರೂ ಮ್ಯಾಚ್ ಫೈನಲ್ ನಷ್ಟೇ ಬಿಸಿಯನ್ನು ಪಡೆದುಕೊಂಡಿದೆ. ಕ್ರಿಕೆಟ್ ಪ್ರೇಮಿಗಳು ಹೈವೋಲ್ಟೇಜ್ ಮ್ಯಾಚ್ ನೋಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ದೀರ್ಘ ಸಮಯದ ಬಳಿಕ ಇಂಡೋ-ಪಾಕ್ ದುಬೈ ಮೈದಾನದಲ್ಲಿ ಎದುರಾಗುತ್ತಿದೆ. ಮ್ಯಾಚ್ ಬಗ್ಗೆ ಎರಡು ದೇಶದ ಕ್ರಿಕೆಟ್ ಪ್ರೇಮಿಗಳಿಗೂ ಬಹಳ ಕುತೂಹಲವಿದೆ. ಉಡುಪಿಯ ಕ್ರಿಕೆಟ್ ಆಸಕ್ತರಂತೂ ಸಿಕ್ಕಾಪಟ್ಟೆ ಕ್ರೇಜ್ ಆಗಿದ್ದಾರೆ. ಟೀಂ ಇಂಡಿಯಾ ಪಾಕ್ ಅನ್ನು ಬಗ್ಗು ಬಡಿಯೋದನ್ನು ನೋಡಲು ಕಾತರರಾಗಿದ್ದಾರೆ.
Advertisement
Advertisement
ನಗರದ ಎಂಜಿಎಂ ಮೈದಾನದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕ್ರಿಕೆಟ್ ಪ್ರೇಮಿಗಳು, ಇಂಡಿಯಾ ಇಂದಿನ ಫೇವರೇಟ್ ಅಂದ್ರು. ಕೂಲ್ ಕ್ಯಾಪ್ಟನ್ ರೋಹಿತ್ ಗೆ ಇದು ಚಾಲೆಂಜ್, ಧೋನಿಯ ಮಾರ್ಗದರ್ಶನ ಯಂಗ್ ಟೀಂ ನ ಅಗ್ರೆಸಿವ್ ನೆಸ್ ನಿಂದ ಟೀಂ ಇಂಟಿಯಾ ಗೆಲ್ಲುತ್ತೆ ಅಂತ ಹೇಳಿದ್ರು.
Advertisement
ಅಪ್ಪಟ ಕ್ರಿಕೆಟ್ ಅಭಿಮಾನಿ ಚಿರಂತ್ ಮಾತನಾಡಿ, ಕೋಹ್ಲಿ ಗ್ರೌಂಡಿಗೆ ಇಳಿಯುತ್ತಿಲ್ಲ. ಈ ಬಗ್ಗೆ ಬೇಸರವಿದೆ. ಆದ್ರೆ ಒಬ್ಬರ ಮೇಲೆ ಇಡೀ ಟೀಂ ಅವಲಂಬಿತವಾಗಬಾರದು. 100% ನಾವು ಗೆಲ್ಲುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.
Advertisement
ಏಷ್ಯಾ ಕಪ್ ನ ಲೀಗ್ ಮ್ಯಾಚ್ ನಲ್ಲಿ ಒಂದು ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ಯುವಕರಲ್ಲಿ ಮಾತ್ರ ಕ್ರೇಜ್ ಹುಟ್ಟಿಸಿಲ್ಲ. ಮಹಿಳೆಯರೂ ಮ್ಯಾಚ್ ನೋಡಲು ತಯಾರು ಮಾಡ್ಕೊಂಡಿದ್ದಾರೆ. ಇಂಡಿಯಾ ಮತ್ತು ಪಾಕಿಸ್ತಾನ ಇಂದು ಸಂಜೆ ಮುಖಾಮುಖಿಯಾಗಲಿದೆ. ಇದು ಮ್ಯಾಚ್ ಅಲ್ಲ ಬಿಗ್ ವಾರ್ ಅಂತ ಬಣ್ಣಿಸಿದರು. ಬೇಗ ಕೆಲಸ ಮುಗಿಸಿ ಟಿವಿ ಮುಂದೆ ಕೂತ್ಕೋತ್ತೇವೆ ಅಂತ ಸಿಮ್ರಾನ್ ಹೇಳಿದ್ರು.
ಇಂದಿನ ಮ್ಯಾಚ್ ಸಿಕ್ಕಾಪಟ್ಟೆ ಟೈಟ್ ಇದ್ದು ಏಷ್ಯಾ ಕಪ್ ನಲ್ಲಿ ಈವರೆಗೆ ನಡೆದ 12 ಪಂದ್ಯಗಳಲ್ಲಿ ಇಂಡಿಯಾ 6 ಮತ್ತು ಪಾಕ್ 5 ಪಂದ್ಯಗಳನ್ನು ಗೆದ್ದಿದೆ. . ತಂಡದ ನಾಯಕನಾಗಿರುವ ರೋಹಿತ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಇಂಡಿಯಾ-ಪಾಕ್ ಕ್ರಿಕೆಟ್ ಪ್ರೇಮಿಗಳು ಮಾತ್ರ ದುಬೈ ಕಡೆ ದೃಷ್ಟಿಯಿಟ್ಟಿಲ್ಲ. ವಿಶ್ವದ ಎಲ್ಲಾ ಕ್ರಿಕೆಟ್ ಆಸಕ್ತರು ಇಂದಿನ ಪಂದ್ಯವನ್ನು ಎದುರು ನೋಡುತ್ತಿದ್ದಾರೆ. ಭಾರತೀಯರು ಟೀಂ ಇಂಡಿಯಾ ಗೆಲ್ಲಲೇಬೇಕು ಅಂತ ಪ್ರಾರ್ಥನೆ ಮಾಡುತ್ತಿದ್ದಾರೆ. ಉಡುಪಿಯ ಕ್ರಿಕೆಟ್ ಪ್ರೇಮಿಗಳು ಟೀಂ ಇಂಡಿಯಾಕ್ಕೆ ಹೋಲ್ ಸೇಲಾಗಿ ವಿಷ್ ಮಾಡಿದ್ದಾರೆ. ನಮ್ಮ ಕಡೆಯಿಂದಲೂ ರೋಹಿತ್ ಆಂಡ್ ಟೀಂ ಗೆ ಆಲ್ ದಿ ಬೆಸ್ಟ್.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv