ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಏಳು ಮಂದಿ ಮೀನುಗಾರರು ನಾಪತ್ತೆಯಾಗಿ 29 ದಿನ ಕಳೆದಿದೆ. ಸರ್ಕಾರ ಹುಡುಕಾಟ ನಡೆಸಿದರೂ ಕಣ್ಮರೆಯಾದವರು ಪತ್ತೆಯಾಗಿಲ್ಲ. ಹೀಗಾಗಿ ಮೊಗವೀರರು ಮಾಲ್ತಿದೇವಿಯ ಮೊರೆ ಹೋಗಿದ್ದಾರೆ.
ಬಾದರಘಡ ದ್ವೀಪದಲ್ಲಿರುವ ಮೀನುಗಾರ ಸಮಾಜದ ಆರಾಧ್ಯ ದೇವರು ಮಾಲ್ತಿದೇವಿಗೆ ಪೂಜೆ ಸಲ್ಲಿಸಿದ್ದಾರೆ. ಎಲ್ಲಾ ರೀತಿಯಲ್ಲೂ ಹುಡುಕಾಟ ನಡೆಸಿದರೂ ಈವರೆಗೆ ಮೀನುಗಾರರ ಸುಳಿವೇ ಇಲ್ಲ. ಈಗಾಗಲೇ ಕೊಸ್ಟ್ ಗಾರ್ಡ್ ಮತ್ತು ನೇವಿಯ ಸಹಾಯದಿಂದ ಹುಡುಕಾಟ ನಡೆಸಲಾಗಿದ್ದು, ಫಲಿತಾಂಶ ಮಾತ್ರ ಶೂನ್ಯ. ಹಾಗಾಗಿ ಇನ್ನು ನಮಗೆ ದೇವರೇ ಗತಿ ಎಂದು ಭಾವಿಸಿರುವ ಕಡಲಮಕ್ಕಳು ದೇವರ ಮೊರೆ ಹೋಗಿ ಅರ್ಚನೆ ಸಲ್ಲಿಸಿದ್ದಾರೆ.
Advertisement
Advertisement
ಆಳಸಮುದ್ರ ಮೀನುಗಾರಿಕಾ ಬೋಟ್ ಚಾಲಕ ಸಂಘದ ಅಧ್ಯಕ್ಷ ರವಿರಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಮ್ಮ ಕಡೆಯಿಂದ ಎಲ್ಲಾ ಪ್ರಯತ್ನ ಮಾಡಿದ್ದೇವೆ. ಸರ್ಕಾರವನ್ನು ಸಂಪರ್ಕಿಸುವ ಎಲ್ಲಾ ಕೆಲಸ ಮಾಡಿದ್ದೇವೆ. ನಾವು ಆರಾಧಿಸುವ ಬೊಬ್ಬರ್ಯ ದೈವದ ಮೊರೆಯೂ ಹೋಗಿದ್ದೇವೆ. ದಿಕ್ಕು ತೋಚದಿದ್ದಾಗ ನಮಗೆ ದೇವರೇ ಗತಿ ಎಂದು ಅನ್ನಿಸುತ್ತದೆ. ನಮ್ಮ ಕೈಲಾದ ಎಲ್ಲಾ ಸೇವೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಇದನ್ನೂ ಓದಿ: ನಾಪತ್ತೆಯಾದ ಮೀನುಗಾರರನ್ನು ಹುಡುಕಲು ನಾವೇನು ಸಮುದ್ರಕ್ಕೆ ಹಾರ್ಬೇಕಾ- ಸಚಿವ ನಾಡಗೌಡ ಪ್ರಶ್ನೆ
Advertisement
Advertisement
ಸಮುದ್ರದ ನಡುವೆ ಇರುವ ಮೀನುಗಾರ ಸಮುದಾಯದ ಆರಾಧ್ಯ ದೇವಿಗೆ ಶರಣಾಗಿದ್ದಾರೆ. ಮಾಲ್ತಿದೇವಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಮಾಲ್ತಿ ದ್ವೀಪದಲ್ಲಿ ಇರುವ ಪ್ರಾಕೃತಿಕ ವಾದ ದೇವಿಯ ಗುಡಿಯ ಬಳಿ ತಮ್ಮ ಪದ್ಧತಿಯಂತೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಕಾಣೆಯಾದ ಮೀನುಗಾರರ ಸಹಿತ ಬೋಟ್ ಪತ್ತೆಯಾಗುವಂತೆ ದೇವಿಗೆ ಹತ್ತು ಸಮಸ್ತರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ
ಇನ್ನೊಂದೆಡೆ ಪೊಲೀಸ್ ಇಲಾಖೆ ಕೂಡ ಎರಡು ತಂಡಗಳನ್ನು ಕೇರಳಕ್ಕೆ ಕಳುಹಿಸಿದೆ. ಮಹಾರಾಷ್ಟ್ರದ ಕಡಲತೀರದಲ್ಲೂ ಹುಡುಕಾಟ ಮುಂದುವರಿದಿದೆ. ಆದರೂ ಮೀನುಗಾರರ ಬಗ್ಗೆ ಮಹತ್ವದ ಸುಳಿವು ದೊರೆತಿಲ್ಲ. ವೈಜ್ಞಾನಿಕವಾಗಿ ಪೊಲೀಸ್ ಕಾರ್ಯಾಚರಣೆ ನಡೆಯುತ್ತಿದ್ದರೆ, ಮೊಗವೀರರು ಧಾರ್ಮಿಕ ಪ್ರಯತ್ನಗಳನ್ನು ಮೀನುಗಾರರು ಮುಂದುವರಿಸಿದ್ದಾರೆ. ಕಣ್ಮರೆಯಾದವರ ಪತ್ತೆಗಾಗಿ ಪದೇ ಪದೇ ದೇವರ ಮೊರೆ ಹೋಗುತ್ತಿದ್ದಾರೆ. ಇದನ್ನೂ ಓದಿ: ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv