ಉಡುಪಿ: ಉಡುಪಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿದೆ. ನಗರದ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ನ್ಯೂಇಯರ್ ಸೆಲೆಬ್ರೇಷನ್ ಶುರುವಾಗಿದೆ. ಗೋವಾದ ಡಿಜೆಗಳ ಅಬ್ಬರಕ್ಕೆ ಜನ ಹುಚ್ಚೆದ್ದು ಕುಣಿಯಲು ಶುರು ಮಾಡಿದ್ದಾರೆ.
ಹೊಸ ವರ್ಷಾಚರಣೆಗೆಂದೇ ಹೋಟೆಲ್ ನ್ಯೂಇಯರ್ ಪ್ಯಾಕೇಜ್ ಇಟ್ಟಿದ್ದು, ಜೋಡಿಗೆ 3,999 ರೂಪಾಯಿ ಫಿಕ್ಸ್ ಮಾಡಿದೆ. ಒಬ್ಬೊಬ್ಬರಿಗೆ 2,000 ರುಪಾಯಿ ಹಾಗೂ ಒಬ್ಬ ಯುವತಿಯ ಎಂಟ್ರಿಗೆ 1,500 ರೂಪಾಯಿ ನಿಗದಿಪಡಿಸಿದೆ.
Advertisement
ತಿಂಗಳ ಹಿಂದೆಯೇ ಬುಕ್ಕಿಂಗ್ ಆರಂಭವಾಗಿತ್ತು. ಕಡಿಮೆ ದರದಲ್ಲಿ ಹೆಚ್ಚು ಸಂಭ್ರಮ ಒದಗಿಸೋದು ನಮ್ಮ ಉದ್ದೇಶ, ಶುಚಿರುಚಿ ಫುಡ್ ಪ್ರಿಪರೇಷನ್ ಮಾಡಿದ್ದು, ಜನ ವೆಜ್ ಹಾಗೂ ನಾನ್ ವೆಜ್ ಇಷ್ಟಪಡುತ್ತಿದ್ದಾರೆ ಎಂದು ಹೋಟೆಲ್ ಜನರಲ್ ಮ್ಯಾನೇಜರ್ ಬಿಜು ವರ್ಗೀಸ್ ಹೇಳಿದ್ದಾರೆ.
Advertisement
ಚಿಕನ್ ಕೋಳಿವಡ, ಪ್ರಾನ್ಸ್ ಕಬಾಬ್, ಗೋಬಿ, ಹರಬರ ಕಬಾಬ್, ಚಿಲ್ಲಿ ಚಿಕನ್, ಟಿಕ್ಕ, ಬ್ರೀಜರ್, ಬಿಯರ್ ಸೇರಿದಂತೆ ಎಲ್ಲಾ ತರದ ಜೂಸ್ ಐಟಮ್‍ಗಳನ್ನು ಗ್ರಾಹಕರಿಗೆ ನೀಡಿದೆ.
Advertisement
Advertisement