ಉಡುಪಿ: ನವಶಕ್ತಿ ವೈಭವ ನೃತ್ಯ ಪ್ರದರ್ಶನದ ವೇಳೆ ಯುವತಿಯರು ಆವೇಶಗೊಂಡ ಘಟನೆ ಉಡುಪಿಯ ಮಲ್ಪೆ ಪಡುಕೆರೆಯಲ್ಲಿ ನಡೆದಿದೆ.
ಇಲ್ಲಿನ ಪಡುಕರೆಯಲ್ಲಿನ ಭಜನಾ ಮಂದಿರವೊಂದರ 25 ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸದ್ಯ ಯುವತಿಯರು ಆವೇಶಗೊಂಡು ನಂತರ ಸಾರ್ವಜನಿಕರ ಸಹಾಯದಿಂದ ನಿರ್ಗಮಿಸಿದ ವಿಡಿಯೋ ಮೊಬೈಲ್ ಗಳಲ್ಲಿ ವೈರಲ್ ಆಗಿದೆ.
Advertisement
ಸ್ಥಳೀಯ ಮಹಿಳಾ ಮಂಡಳಿಯ ಮಹಿಳೆಯರನ್ನು ಬಳಸಿಕೊಂಡು ನವಶಕ್ತಿ ವೈಭವ ನೃತ್ಯ ರೂಪಕ ಪ್ರದರ್ಶಿಲಾಗುತ್ತಿತ್ತು. ಮಹಿಷಾಸುರ, ಚಂಡ ಮುಂಡರು ಮುಂತಾದ ರಾಕ್ಷಸರನ್ನು, ದುಷ್ಟ ಅಸುರರನ್ನು ಸಂಹರಿಸುವ ದೃಶ್ಯದ ವೇಳೆ ಈ ಘಟನೆ ನಡೆದಿದೆ.
Advertisement
Advertisement
ಚೆಂಡೆ, ವಾದ್ಯ, ಸೇರಿದಂತೆ ಸಂಗೀತ ವಿಪರೀತವಾದಾದ ವೇಳೆ ಇಬ್ಬರು ಯುವತಿಯರು ಇದ್ದಕ್ಕಿದ್ದಂತೆ ಆವೇಶ ಬಂದವರಂತೆ ಬಿದ್ದಿದ್ದಾರೆ. ನಂತರ ಇನ್ನೊಬ್ಬ ನೃತ್ಯಗಾರ್ತಿ ಆವೇಶ ಬಂದಂತೆ ಕುಣಿದಿದ್ದಾರೆ. ಇದರಿಂದ ಸಹಕಲಾವಿದರು ಭಯಗೊಂಡಿದ್ದಾರೆ. ಪ್ರದರ್ಶನಕ್ಕೆ ಅಡ್ಡಿ ಆಗದಂತೆ ಇಬ್ಬರೂ ಕಲಾವಿದರನ್ನು ಕರೆದೊಯ್ಯಲಾಯ್ತು.
Advertisement
ಒಬ್ಬರು ಆವೇಶಭರಿತರಾದ್ರೆ ಪಕ್ಕದಲ್ಲಿರುವವರೆಲ್ಲಾ ಹಾಗೆ ವರ್ತಿಸೋದನ್ನು ಸಮೂಹ ಸನ್ನಿ ಅಂತ ಕರೆಯುತ್ತಾರೆ. ಇದೇ ರೀತಿಯಲ್ಲಿ ವ್ಯಾಪಿಸಿ ಇನ್ನೊಬ್ಬ ಅಸುರನ ಸಂಹರಿಸುವ ವೇಳೆ ಮತ್ತೋರ್ವ ಯುವತಿಯೂ ಅವೇಶಭರಿತವಾಗಿ ನರ್ತಿಸಲು ಆರಂಭಿಸಿದ್ದಾಳೆ. ಇದರಿಂದ ಅಲ್ಲಿ ನೆರೆದವರೆಲ್ಲಾ ಕೆಲಕಾಲ ಆತಂಕಗೊಂಡರು. ಸದ್ಯ ಈ ಎರಡೂ ವಿಡಿಯೋಗಳು ವೈರಲ್ ಆಗಿವೆ.
ಒಬ್ಬ ನೃತ್ಯಗಾರ್ತಿಗೆ ಫಿಟ್ಸ್ ಬಂದಿದೆ, ಮತ್ತೊಬ್ಬಾಕೆಗೆ ಆವೇಶ ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
https://www.facebook.com/UnitedTulunadu/videos/1822374257787277/