ಉಡುಪಿ: ಹೈಕೋರ್ಟ್ ತ್ರೀ ಸದಸ್ಯ ಪೀಠದ ಹಿಜಬ್ ತೀರ್ಪು ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಪ್ರೆಸ್ ಮೀಟ್ ಮಾಡಿದೆ. ಹಿಜಬ್ ಅತ್ಯಗತ್ಯ ಭಾಗ ಅಲ್ಲ ಎಂದು ರಿಟ್ ಅರ್ಜಿ ವಜಾ ಮಾಡಲಾಗಿದೆ. ಈ ತೀರ್ಪಿನಿಂದ ವಿದ್ಯಾರ್ಥಿಗಳು ನಿರಾಶರಾಗಿದ್ದಾರೆ. ಹೈಕೋರ್ಟ್ ಧರ್ಮದ ವಿಚಾರ ತೀರ್ಮಾನ ಮಾಡುವುದು ಸರಿಯಲ್ಲ ಎಂದು ಧರ್ಮಗುರುಗಳ ತಂಡ ಖೇದ ವ್ಯಕ್ತಪಡಿಸಿದೆ.
ಇಸ್ಲಾಂ ಧರ್ಮದ ಪಠ್ಯದ ವಿವರಣೆಗೆ ಮಾನ್ಯತೆ ನೀಡಿಲ್ಲ. ನಮ್ಮ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕು ಕಸಿಯಲ್ಪಡಲಾಗಿದೆ ಎಂದು ಮಲ್ಪೆ ಜಾಮಿಯಾ ಮಸೀದಿ ಧರ್ಮಗುರು ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ ಹೇಳಿದರು. ಈ ತೀರ್ಪು ಅಂತಿಮ ಅಲ್ಲ, ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುತ್ತೇವೆ. ನ್ಯಾಯಾಲಯದಲ್ಲಿ ಕುರಾನ್ ಎಲ್ಲಾ ಸೂಕ್ತಗಳನ್ನು ಪರಿಗಣಿಸಿಲ್ಲ. ಕುರಾನ್ ಸೂಕ್ತಗಳನ್ನು ಕೋರ್ಟಲ್ಲಿ ಸರಿಯಾಗಿ ಚರ್ಚಿಸಿಲ್ಲ, ವಾದಿಸಿಲ್ಲ ಎಂದರು. ಇದನ್ನೂ ಓದಿ: ಉಡ್ತಾ ಪಂಜಾಬ್ ಅಲ್ಲ, ಪ್ರಗತಿಪರ ಪಂಜಾಬ್: ಭಗವಂತ್ ಮಾನ್
Advertisement
Advertisement
ಕರ್ನಾಟಕ ಬಂದ್ ಬಗ್ಗೆ ಚಿಂತಿಸಿಲ್ಲ: ಕರ್ನಾಟಕ ಬಂದ್‍ಗೆ ನಾವು ನಿಲುವು ತೆಗೆದುಕೊಂಡಿಲ್ಲ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ನಮಗೆ ಯಾವುದೇ ಹಠದ ಮನೋಭಾವನೆ ಇಲ್ಲ. ಧರ್ಮಗುರುಗಳಾಗಿ ಧರ್ಮ, ದೇವರ ಭಯವನ್ನು ತಿಳಿಯಪಡಿಸೋದು ನಮ್ಮ ಕರ್ತವ್ಯ. ದೇವರ ಭಯ ಇದ್ದರೆ ಮಾತ್ರ ಧರ್ಮ ನಿಷ್ಠರಾಗಬಹುದು ಎಂದು ಮೌಲಾನಾ ಇಮ್ರಾನುಲ್ಲ ಖಾನ್ ಮನ್ಸೂರಿ ಹೇಳಿದರು.
Advertisement
ನಮ್ಮ ವಿದ್ಯಾರ್ಥಿನೀಯರು ಬಹಳ ಎಜುಕೇಟೆಡ್ ಇದ್ದಾರೆ. ಅವರು ಬುದ್ಧಿವಂತರಾಗಿರುವುದಕ್ಕೆ ಸಂವಿಧಾನ ಹಕ್ಕು ಕೇಳುತ್ತಿದ್ದಾರೆ. ಶಿಕ್ಷಣ ವಿದ್ಯಾನಿಲಯಕ್ಕೂ ಬಹಳ ಜವಾಬ್ಧಾರಿ ಇದೆ. ಶಿಕ್ಷಣ ಸಂಸ್ಥೆಗಳು ಕೂಡಾ ಚಿಂತನೆ ನಡೆಸಬಹುದಿತ್ತು. ಯಾವುದಾದರೂ ವ್ಯವಸ್ಥೆ ಮಾಡಿದರೆ ವಿವಾದ ಇಷ್ಟು ದೊಡ್ಡದು ಆಗುತ್ತಿರಲಿಲ್ಲ. ಕಾಲೇಜಿನ ಒಳಗೆ ಬಗೆಹರಿಯುತ್ತಿತ್ತು ಎಂದರು.