ಉಡುಪಿ: ಮೊಬೈಲ್ ಬ್ಯಾಕ್ ಕವರಿನ ಒಳಗಡೆ ಒಂದು ತುಳಸಿ ದಳ ಇಡುವುದರಿಂದ ರೇಡಿಯೇಶನ್ ದುಷ್ಪರಿಣಾಮ ತಪ್ಪಿಸಬಹುದು ಎಂದು ಯೋಗ ಗುರು ಬಾಬಾ ರಾಮ್ ದೇವ್ ಸಲಹೆ ನಿಡಿದ್ದಾರೆ.
ಉಡುಪಿ ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಪೀಠ ಟ್ರಸ್ಟ್ ಹರಿದ್ವಾರದ ನೇತೃತ್ವದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಅವರಿಂದ ನ.16ರಿಂದ 20ರವರೆಗೆ ಬೃಹತ್ ಯೋಗ ಶಿಬಿರಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಶನಿವಾರ ಚಾಲನೆ ನೀಡಿದ ಬಳಿಕ ಪ್ರಾತ್ಯಕ್ಷಿಕೆ ಮಾಡಿದರು.
Advertisement
Advertisement
ನಮ್ಮ ದೇಹಕ್ಕೆ ಅತೀ ಅಪಾಯಕಾರಿಯಾದ ಮೊಬೈಲ್ ಗಳ ವಿಕಿರಣಗಳ ದುಷ್ಪರಿಣಾಮಗಳನ್ನು ತಡೆಯಲು ಮೊಬೈಲಿನ ಹಿಂಬದಿಯ ಕವರಿನ ಒಳಗೆ ಒಂದು ತುಳಸಿ ದಳವನ್ನು ಇಡಿ. ತುಳಸಿ ಎಲೆಗೆ ಮೊಬೈಲ್ ಮಾತ್ರವಲ್ಲದೇ ನಾವು ಬಳಸುವ ಯಾವುದೇ ಇಲೆಕ್ಟ್ರಾನಿಕ್ ಉತ್ಪನ್ನಗಳ ವಿಕಿರಣ ದುಷ್ಪರಿಣಾಮಗಳನ್ನು ತಡೆಯುವ ಅದ್ಭುತ ಶಕ್ತಿ ಇದೆ. ಪ್ರತೀ ಮನೆ ಕಚೇರಿಗಳಲ್ಲಿ ಸಾಧ್ಯವಾದಷ್ಟು ತುಳಸಿ ಸಸಿಗಳನ್ನು ಬೆಳೆಸಿರಿ ಎಂದು ಬಾಬಾ ರಾಮ್ ದೇವ್ ಕರೆ ನೀಡಿದರು.
Advertisement
ಬಾಬಾ ರಾಮ್ ದೇವ್ ಅವರು ಉಡುಪಿಯ ಜನತೆಗೆ ಇಂದಿನಿಂದ ಯೋಗ ಶಿಬಿರ ಆಯೋಜಿಸಿದ್ದು, ಮುಂಜಾನೆಯಿಂದಲೇ ಸಾವಿರಾರು ಜನ ಯೋಗ ಶಿಬಿರದಲ್ಲಿ ಪಾಲ್ಗೊಂಡರು. ಬೆಳಗ್ಗೆ ಮೂರು ಗಂಟೆಗಳ ಕಾಲ ಯೋಗ ಶಿಬಿರ ನಡೆಸಿಕೊಟ್ಟ ಯೋಗ ಗುರು ಬಾಬಾ ರಾಮ್ ದೇವ್, ಇಂದಿನಿಂದ ಐದು ದಿನ ಉಡುಪಿಯಲ್ಲಿ ಯೋಗ ಮತ್ತು ಧ್ಯಾನ ಶಿಬಿರ ನಡೆಸಿ ಕೊಡಲಿದ್ದಾರೆ.
Advertisement
ಉಡುಪಿ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬೃಹತ್ ವೇದಿಕೆ ಹಾಕಿ ಶಿಬಿರ, ಧ್ಯಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂದು ವಾರ ಹಲವು ಕಾರ್ಯಕ್ರಮದಲ್ಲಿ ಬಾಬಾ ಭಾಗವಹಿಸುತ್ತಾರೆ. ಹಲವು ಕ್ಲಿಷ್ಟಕರ ಯೋಗ ಭಂಗಿಯನ್ನು ಹೇಳಿಕೊಡುತ್ತಿದ್ದಾರೆ.