ಉಡುಪಿ: ನೀನು ಉಜಿರೆಯಲ್ಲಿ (Mangaluru) ಇದ್ದದ್ದಕ್ಕೆ ಬಚಾವಾದೆ, ಉಡುಪಿಯಲ್ಲಿ ಇದ್ದಿದ್ರೆ ಮಲ್ಪೆ ಬೀಚಿನಲ್ಲಿ ಫುಟ್ಬಾಲ್ ಆಡಿಸುತ್ತಿದ್ದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ಯೂಟ್ಯೂಬರ್ ಸಮೀರ್‌ಗೆ (Youtuber Sameer) ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಯೂಟ್ಯೂಬರ್ ಸಮೀರ್‌ಗೆ ನೇರ ಎಚ್ಚರಿಕೆ ಕೊಡುತ್ತೇನೆ. ನೀನು ಉಜಿರೆಯಲ್ಲಿ ಇದ್ದದ್ದಕ್ಕೆ ಬಚಾವಾದೆ. ಉಡುಪಿಯಲ್ಲಿ ಇರುತ್ತಿದ್ದರೆ ಮಲ್ಪೆ ಬೀಚಿನಲ್ಲಿ ಫುಟ್ಬಾಲ್ ಆಡಿಸುತ್ತಿದ್ದೆ. ನಿನ್ನನ್ನು ನಾವು ಫುಟ್ಬಾಲ್ ಮಾಡಿ ಆಡಿಸುತ್ತಿದ್ದೆವು. ಅಧಿವೇಶನ ಮುಗಿದ ಮೇಲೆ ಬರುತ್ತೇನೆ. ಸಮೀರ್ ಬಗ್ಗೆ ಒಳ್ಳೆಯ ಪ್ಲ್ಯಾನ್ ಮಾಡಿ, ಆತನನ್ನು ರಾಜ್ಯದಿಂದ ಓಡಿಸುತ್ತೇವೆ. ಕಾಂಗ್ರೆಸ್ ಹೈಕಮಾಂಡ್‌ನ ಒತ್ತಡದಿಂದ ಆತ ಬಂಧನವಾಗಿಲ್ಲ. ನಮ್ಮ ಸರ್ಕಾರ ಇರಲಿ, ಇರದೇ ಇರಲಿ. ನಮ್ಮದು ಹಿಂದೂ ಸಮಾಜದ ಪರ ವಾದ. ನಮ್ಮದು ಹಿಂದುತ್ವದ ಫ್ಯಾಕ್ಟರಿ, ಹಿಂದು ಸಮಾಜವನ್ನು ಒಡೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಸುಜಾತಾ ಭಟ್‌ರನ್ನು ಮೊದಲು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸಬೇಕು: ವಾಸಂತಿ ಸಹೋದರ ಒತ್ತಾಯ
ಅಣ್ಣಪ್ಪ ಪಂಜುರ್ಲಿ ದೈವದ ಅನುಗ್ರಹವಾಗಿದೆ. ದೇವರ ಮಧ್ಯಸ್ಥಿಕೆಯಲ್ಲಿ ಎಲ್ಲ ಇತ್ಯರ್ಥ ಆಗುತ್ತದೆ. ಬಿಜೆಪಿ ಹೋರಾಟ ಒಂದು ಭಾಗ ಮಾತ್ರ. ಅಣ್ಣಪ್ಪ ಪಂಜುರ್ಲಿ ಎಲ್ಲರ ಮನೆಯ ದೇವರು. ಮೊಗವೀರ ಸಮುದಾಯದ ಪ್ರಾರ್ಥನೆ ಫಲ ಕೊಟ್ಟಿದೆ. ಕೋಟ್ಯಂತರ ದೈವಭಕ್ತರ ಪ್ರಾರ್ಥನೆ ಫಲಿಸಿದೆ. ಪರಶುರಾಮನ ಸೃಷ್ಟಿಯಲ್ಲಿ ಧರ್ಮಕ್ಕೆ ಗೆಲುವಾಗಿದೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಕಣ್ಣು ಬಿಟ್ಟಿದ್ದಾರೆ. ಉಡುಪಿ ಕೃಷ್ಣ ಮುಖ್ಯಪ್ರಾಣ ಅನ್ಯಾಯಕ್ಕೆ ಶಿಕ್ಷೆ ಕೊಟ್ಟಿದ್ದಾರೆ ಎಂದು ಹೇಳಿದರು.
ಹಿಂದೂ ಧರ್ಮದ ಷಡ್ಯಂತ್ರಕ್ಕೆ ಫಲಿತಾಂಶ ಹೊರಬೀಳಬೇಕಿದೆ. ಹಣಕಾಸಿನ ವಿಚಾರದಲ್ಲಿ ಧರ್ಮದ ಅವಹೇಳನಕ್ಕೆ ಶಿಕ್ಷೆ ಪ್ರಾಪ್ತಿಯಾಗಿದೆ. ಹಿಂದೂ ಧರ್ಮವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡವರು ಶಿಕ್ಷೆ ಅನುಭವಿಸುತ್ತಿದ್ದಾರೆ. ಹಿಂದೆ ಬ್ರಿಟಿಷರ ದಬ್ಬಾಳಿಕೆ ನಡೆಯುತ್ತಿತ್ತು. ಈಗ ಕಮ್ಯುನಿಸ್ಟರ ಮಾನಸಿಕತೆ ದಬ್ಬಾಳಿಕೆ ಮಾಡುತ್ತಿದೆ. ಮತಾಂತರದ ದೊಡ್ಡ ಷಡ್ಯಂತ್ರವಿದು, ಸಂಸದ ಶಶಿಕಾಂತ್ ಸೆಂಥಿಲ್ ವಿರುದ್ಧ ಸಹ ವಿಚಾರಣೆಯಾಗಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಬೆಂಗಳೂರು – ಸಿಗಂದೂರು ನಡುವೆ ಕೆಎಸ್ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ
 


 
		 
		 
		 
		 
		
 
		 
		 
		 
		