– ಹ್ಯಾಂಡ್ ಸ್ಯಾನಿಟೈಸರ್ ನೋ ಸ್ಟಾಕ್
– ರಿಯಾಲಿಟಿ ಚೆಕ್‍ನಲ್ಲಿ ಸತ್ಯ ಬಯಲು
ಉಡುಪಿ: ರಾಜ್ಯದಲ್ಲಿ ಕೊರೊನಾ ವೈರಸ್‍ನ ಆತಂಕ ಹೆಚ್ಚಾಗಿದೆ. ಪರಿಸ್ಥಿತಿಯ ಲಾಭವನ್ನು ಮಾಸ್ಕ್ ತಯಾರಿಸುವ ಕಂಪನಿಗಳು ಪಡೆಯುತ್ತಿದೆ. ಒಂದೊಂದು ಮಾಸ್ಕ್ ನ ಬೆಲೆಯಲ್ಲೂ 100 ರೂ. ಹೆಚ್ಚಳ ಆಗಿದೆ.
ನಿಮ್ಮ ಪಬ್ಲಿಕ್ ಟಿವಿ ಉಡುಪಿ ನಗರದ ಮೆಡಿಕಲ್‍ಗಳಲ್ಲಿ ರಿಯಾಲಿಟಿ ಚೆಕ್ ಮಾಡಿದ್ದು, ಸಿಂಗಲ್ ಲೇಯರ್ ಮಾಸ್ಕ್ ಗಳು ಖಾಲಿಯಾಗಿದೆ. ಸಪ್ಲೈ ಕೂಡ ಇಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಟಿ95 ಮತ್ತು ತ್ರಿಪಲ್ ಲೇಯರ್ ಮಾಸ್ಕ್ ಗಳು ಮಾತ್ರ ಮೆಡಿಕಲ್‍ನಲ್ಲಿ ಲಭ್ಯವಿದೆ. ಕಳೆದ ಎರಡು ದಿನಗಳಿಂದ ಮಾಸ್ಕ್ ನ ಬೆಲೆ ನೂರು ರೂಪಾಯಿ ಹೆಚ್ಚಾಗಿದೆ. 95 ಮಾಸ್ಕ್ 150 ರೂ.ಗೆ ಈ ಹಿಂದೆ ಲಭ್ಯವಾಗುತ್ತಿತ್ತು. ಈಗ 270 ರೂ. ಆಗಿದೆ.
Advertisement
Advertisement
ತ್ರಿಪಲ್ ಲೇಯರ್ ಮಾಸ್ಕ್ ನ ಬೆಲೆ 70 ರೂ. ನಿಂದ 150 ರೂ.ಗೆ ಹೆಚ್ಚಳವಾಗಿದೆ. ಹ್ಯಾಂಡ್ ಸ್ಯಾನಿಟೈಸರ್ ಗೆ ವಿಪರೀತ ಬೇಡಿಕೆ ಬಂದಿದ್ದು ಮೆಡಿಕಲ್‍ಗಳಲ್ಲಿ ಸ್ಟಾಕ್ ಇಲ್ಲ. ಗ್ರಾಹಕ ಸುರೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುನ್ನೆಚ್ಚರಿಕಾ ಕ್ರಮವಾಗಿ ನಾಲ್ಕು ತ್ರಿಪಲ್ ಲೇಯರ್ ಮಾಸ್ಕ್ ಖರೀದಿ ಮಾಡಿದ್ದೇನೆ. ಬೆಲೆ ಜಾಸ್ತಿಯಾಗಿದೆ ಅಂತ ಖರೀದಿ ಮಾಡದಿದ್ದರೆ ಮುಂದೆ ಅಗತ್ಯ ಬಿದ್ದರೆ ಕಷ್ಟವಾಗುತ್ತದೆ ಎಂದರು.
Advertisement
ಡಿಎಚ್ ಒ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತುರ್ತು ಪರಿಸ್ಥಿತಿ ಇರುವಾಗ ಬೆಲೆ ಏರಿಕೆ ಮಾಡುವಂತಿಲ್ಲ. ಅಂತಹ ಘಟನೆ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.