ಉಡುಪಿ: ಅಮೆರಿಕ ಹಾಗೂ ಕುವೈತ್‍ನಿಂದ ಬಂದಿರುವ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳ ಕೊರೊನಾದ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಆತಂಕದಲ್ಲಿದ್ದ ಮಣಿಪಾಲ ವಿವಿ ಸದ್ಯ ನಿರಾಳವಾಗಿದೆ.
ಶಂಕಿತ ಕೊರೊನಾ ವೈರಸ್ ಸೋಂಕಿನ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿಯ ಪ್ರತ್ಯೇಕಿತ ವಾರ್ಡ್ ಗೆ ದಾಖಲಾಗಿದ್ದ ಮಣಿಪಾಲ ಕೆಎಂಸಿಯ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಿಲ್ಲ. ಆ ಇಬ್ಬರು ಆಂಧ್ರ ಪ್ರದೇಶ ಹಾಗೂ ಕೇರಳ ಮೂಲದವರಾಗಿದ್ದು, ಅಮೆರಿಕ ಹಾಗೂ ಕುವೈಟ್ ಪ್ರವಾಸ ಮಾಡಿ ಬಂದಿದ್ದಾಗ ಜ್ವರ, ಶೀತ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಕೊರೊನಾ ವೈರಸ್‍ಗೆ ದೇಶದಲ್ಲಿ ಎರಡನೇ ಬಲಿ
Advertisement
Advertisement
ಕೊರೊನಾದ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಶಿವಮೊಗ್ಗಕ್ಕೆ ಕಳುಹಿಸಲಾದ ಅವರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯ ಪರೀಕ್ಷೆ ಇಂದು ಕೈಸೇರಿದ್ದು, ಅದರಲ್ಲಿ ಸೋಂಕು ಇಲ್ಲ ಎಂದು ಖಚಿತವಾಗಿದೆ ಅಂತ ಡಿಎಚ್‍ಒ ಡಾ.ಸುಧೀರ್‍ಚಂದ್ರ ಸೂಡ ತಿಳಿಸಿದರು. ಇದನ್ನೂ ಓದಿ: ಜಪಾನ್ ಹಡಗಿನಲ್ಲಿದ್ದ ವ್ಯಕ್ತಿಗೆ ಕೊರೊನಾ ಶಂಕೆ- ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲು
Advertisement
ಇಂದು ದಾಖಲಾದ ಮತ್ತೊಬ್ಬ ಕೆಎಂಸಿಯ ವಿದ್ಯಾರ್ಥಿ ಮೂಲತಃ ದುಬೈನವ. ಆತ ಮಲೇಷ್ಯಾಕ್ಕೆ ಹೋಗಿ ಮಣಿಪಾಲಕ್ಕೆ ಬಂದಿದ್ದ. ಆತನ ಮಾದರಿಗಳನ್ನು ಪರೀಕ್ಷೆಗಾಗಿ ಇಂದು ಕಳುಹಿಸಲಾಗಿದ್ದು ವರದಿ ನಾಳೆ ಬರಲಿದೆ. ವಿವಿಯಲ್ಲಿ 60 ದೇಶದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸೋಂಕು ಇತರರಿಗೂ ಹರಡುವ ಸಾಧ್ಯತೆ ಬಗ್ಗೆ ವಿವಿಗೆ ಆತಂಕವಾಗಿತ್ತು. ಇಬ್ಬರು ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿರುವುದರಿಂದ ವಿವಿ ವಿದ್ಯಾರ್ಥಿಗಳು, ಆಡಳಿತ ವಿಭಾಗ ನೆಮ್ಮದಿಯಾಗಿದೆ.