ಉಡುಪಿ: ಕೊರೋನಾ ಪಾಸಿಟಿವ್ ಕೇಸ್‍ಗಳ ಸಂಖ್ಯೆಯನ್ನು ಹತೋಟಿಗೆ ತರಲು ಉಡುಪಿಯಲ್ಲಿ ವೀಕೆಂಡ್ ಕಫ್ರ್ಯೂ ಜಾರಿಗೆ ತರಲಾಗಿದೆ. ಕೊರೊನಾ ಆತಂಕದ ಜೊತೆಗೆ ನಿಯಮ ಕಟ್ಟುನಿಟ್ಟು ಇದ್ದರು. ಹೊರಜಿಲ್ಲೆ ಹೊರರಾಜ್ಯದ ಪ್ರವಾಸಿಗರು ಕ್ಯಾರೇ ಅನ್ನುತ್ತಿಲ್ಲ.
Advertisement
ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾದ ಪಾಸಿಟಿವಿಟಿ ರೇಟ್ ಇಳಿಕೆಯಾಗುತ್ತಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಪ್ರತಿದಿನ 100 ಆಸುಪಾಸಿನಲ್ಲಿ ಕೇಸುಗಳು ಕಾಣಿಸುತ್ತಿದೆ. ಸುಮ್ಮನೆ ಸುತ್ತಾಡುವ ಜನರಿಗೆ ಲಗಾಮು ಹಾಕುವ ದೇಶದಿಂದ ಉಡುಪಿ ಜಿಲ್ಲಾಡಳಿತ ವೀಕೆಂಡ್ ಕಳಿಸು ಜಾರಿಗೆ ತಂದಿದೆ. ಇದನ್ನೂ ಓದಿ: ವಿಶ್ವಾಸಕ್ಕೆ ತೆಗೆದುಕೊಂಡು ಬೊಮ್ಮಾಯಿ ಸರ್ಕಾರ ನಡೆಸುತ್ತಿದ್ದಾರೆ: ಎಸ್ ಟಿ ಸೋಮಶೇಖರ್
Advertisement
Advertisement
ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಅವಕಾಶ ಇಲ್ಲ ಎಂದು ಡಿಸಿಯ ಖಡಕ್ ಸೂಚನೆ ಇದ್ದರೂ, ನೂರಾರು ಪ್ರವಾಸಿಗರು ಮಲ್ಪೆ ಬೀಚ್‍ಗೆ ಇಳಿದಿದ್ದಾರೆ. ಮಲ್ಪೆ ಬೀಚ್ ನಿಂದ ಕೊಂಚ ದೂರದಲ್ಲಿ ಅಪಾಯಕಾರಿ ಎನಿಸುವ ಕಡಲತೀರದಲ್ಲಿ ಜನ ನೀರಿಗೆ ಈಜಾಡಿದ್ದಾರೆ. ಬೀಚ್ ಅಭಿವೃದ್ಧಿ ಸಮಿತಿ ನೇಮಿಸಿರುವ ಲೈಫ್ ಗಾರ್ಡ್ ಗಳು ಎಷ್ಟೇ ಸೂಚನೆ ಕೊಟ್ಟರೂ ಜನ ಅದನ್ನು ಪಾಲಿಸುತ್ತಿಲ್ಲ. ಇದನ್ನೂ ಓದಿ: ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್
Advertisement
ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮುದ್ರಕ್ಕಿಳಿದ ಪ್ರವಾಸಿಗರನ್ನು ವಾಪಸ್ ಕಳುಹಿಸುತ್ತಿದ್ದಾರೆ. ವಾರಾಂತ್ಯದಲ್ಲಿ ಬೀಚ್ ಆಸು-ಪಾಸಿನಲ್ಲಿ ಮೀನುಗಾರಿಕಾ ರಸ್ತೆಯಲ್ಲಿ ಜನ ಜಮಾಯಿಸಬಾರದು ಎಂದು ಹೈವೇ ಪ್ಯಾಟ್ರೋಲ್ ಪೊಲೀಸರು ಹೆಚ್ಚುವರಿ ಗಸ್ತು ತಿರುಗಿದ್ದಾರೆ. ಸಮುದ್ರದ ಸೌಂದರ್ಯ ಕಣ್ತುಂಬಿಕೊಳ್ಳಲು ಬಂದಿರುವ ಪ್ರವಾಸಿಗರ ಮನವೊಲಿಸಿ ಪ್ರವಾಸಿ ಕೇಂದ್ರದಿಂದ ಪೊಲೀಸರು ದೂರ ಕಳುಹಿಸುತ್ತಿದ್ದಾರೆ.
ಕಳೆದ ತಿಂಗಳು ಸಮುದ್ರದ ಅಬ್ಬರ ವಿಪರೀತ ಇರುವ ಸಂದರ್ಭ ಮೂರ್ನಾಲ್ಕು ಅವಘಡಗಳು ಮಲ್ಪೆ ಕಡಲತೀರದಲ್ಲಿ ನಡೆದಿದೆ. ಓರ್ವ ಯುವತಿ ಮೃತಪಟ್ಟ ನಂತರ ಸೆಪ್ಟಂಬರ್ 15ರ ತನಕ ಬೀಚಿಗೆ ಪ್ರವೇಶ ಇಲ್ಲ ಎಂಬ ಸೂಚನೆಯನ್ನ ಕಡ್ಡಾಯ ಮಾಡಲಾಗಿದೆ. ಆದರೂ ಹೊರಜಿಲ್ಲೆ ಹೊರರಾಜ್ಯದಿಂದ ಬಂದ ಜನ ಸಮುದ್ರದ ಮೇಲಿನ ಆಸೆಗೆ ನಿಯಮವನ್ನು ದಾಟುತ್ತಿದ್ದಾರೆ. ಬೀಚ್ ಬಳಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡುತ್ತೇವೆ. ನಮ್ಮ ಪ್ಯಾಟ್ರೋಲಿಂಗ್ ಹೆಚ್ಚು ಮಾಡುತ್ತೇವೆ ಎಂದು ಎಸ್ಪಿ ವಿಷ್ಣುವರ್ಧನ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.