ಉಡುಪಿ: ಮಾಲ್‍ಗಳನ್ನು ಬಂದ್ ಮಾಡ್ಬೇಕು ಅಂತ ರಾಜ್ಯ ಸರ್ಕಾರ ಖಡಕ್ ಸೂಚನೆ ಕೊಟ್ಟರೂ, ಉಡುಪಿಯಲ್ಲಿ ಕೆಲ ಮಾಲ್‍ಗಳು ಹಿಂಬದಿ ಬಾಗಿಲಲ್ಲಿ ಬ್ಯುಸಿನೆಸ್ ಮಾಡುತ್ತಿವೆ. ಇದರ ವಿರುದ್ಧ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್.ಪಿ ವಿಷ್ಣುವರ್ಧನ್ ಸಿಟಿ ರೌಂಡ್ಸ್ ಸಂದರ್ಭದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಉಡುಪಿಯ ತರಕಾರಿ ಮಾರುಕಟ್ಟೆ ಅಂಗಡಿಗಳು ಮಾಲ್‍ಗಳಿಗೆ ಡಿಸಿ, ಎಸ್.ಪಿ ತಹಶೀಲ್ದಾರ್, ದಿಢೀರ್ ದಾಳಿ ಮಾಡಿದರು. ಈ ಸಂದರ್ಭದಲ್ಲಿ ಬಿಗ್ ಬಜಾರ್ ಮ್ಯಾನೇಜರನ್ನು ಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊನ್ನೆಯಿಂದ ನಿಮ್ಮ ನಾಟಕ ನೋಡ್ತಿದ್ದೇನೆ. ಇವನನ್ನು ಒಳಗೆ ಹಾಕಿ. ನಾನೇ ಕಂಪ್ಲೇಂಟ್ ಕೊಡ್ತೇನೆ. ಅಂತ ತರಕಾರಿ ಬೆಲೆ ಏರಿಸಿದ್ದಕ್ಕೆ ಮೆನೇಜರ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಗ್ ಬಜಾರ್ ಎಸಿ ಹಾಕಿ ಎಗ್ಗಿಲ್ಲದೆ ವ್ಯಾಪಾರ ಮಾಡುತ್ತಿತ್ತು. ಇದರ ವಿರುದ್ಧ ಕೂಡ ಡಿಸಿ ಕೆಂಡಾಮಂಡಲರಾದರು.
ತರಕಾರಿ ಅಂಗಡಿ ಮಾಲೀಕನಿಗೆ ಪಾಠ:
ನಗರದ ತರಕಾರಿ ಅಂಗಡಿಗಳಿಗೆ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಸ್ವಚ್ಛತಾ ಕ್ರಮ ಅನುಸರಿಸದ ಕಾರಣ ತರಕಾರಿ ಶಾಪ್ ನಲ್ಲಿ ಸ್ಯಾನಿಟೈಸರ್ ಬಳಕೆ ಇಲ್ಲದ್ದನ್ನು ಕಂಡು ಕೋಪಗೊಂಡರು. ತರಕಾರಿ ವ್ಯಾಪಾರಿಗೆ ಜಿಲ್ಲಾಧಿಕಾರಿಯಿಂದ ಸ್ವಚ್ಚತೆಯ ಕ್ಲಾಸ್ ನಡೆಯಿತು.
ಕೆಮ್ಮು, ಸೀನು ಇದ್ದವರಿಗೆ ತರಕಾರಿ ಕೊಡಬೇಡಿ. ಕೈಗೆ ಗ್ಲೌಸ್ ಮುಖಕ್ಕೆ ಮಾಸ್ಕ್ ಧರಿಸದೇ ನೀವು ಅಂಗಡಿಗೆ ಬರಲೇಬೇಡಿ. ನಿಮಗೆ ವ್ಯಾಪಾರ ಮುಖ್ಯವೋ ನಿಮ್ಮ ಆರೋಗ್ಯ ಮುಖ್ಯವೋ ಎಂದರು. ಅಂತರ ಕಾಯ್ದುಕೊಂಡು ವ್ಯಾಪಾರ ಮಾಡೋದಾದ್ರೆ ಮಾಡಿ. ತರಕಾರಿ ಅಂಗಡಿಗೆ ವಿನಾಯಿತಿ ಕೊಟ್ಟದ್ದನ್ನು ದುರುಪಯೋಗ ಮಾಡಬೇಡಿ ಎಂದರು.