ಉಡುಪಿ: ಮೂರು ಟ್ರಕ್‍ಗಳಲ್ಲಿ ಕೇರಳದ ವಯನಾಡಿನಿಂದ ಗೋಶಾಲೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಉಡುಪಿ ಜಿಲ್ಲೆ ಕಾಪುವಿನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾಖಲೆ ಯಾವುದೂ ಇಲ್ಲದೆ ಅಕ್ರಮ ಗೋವು ಸಾಗಾಟದ ಶಂಕೆಯಲ್ಲಿ ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರು ಕಾಪು ಠಾಣಾ ವ್ಯಾಪ್ತಿಯಲ್ಲಿ 3 ಟ್ರಕ್‍ನಲ್ಲಿದ್ದ ಜಾನುವಾರುಗಳನ್ನು ವಶ ಪಡಿಸಿಕೊಂಡಿದ್ದಾರೆ.
Advertisement
Advertisement
ಶಿರ್ವದಲ್ಲಿ ಹೊಸದಾಗಿ ಆರಂಭಿಸಿದ ಗೋ ಶಾಲೆಗೆ ಗೋವುಗಳನ್ನು ತರಲಾಗಿದೆ ಎಂದು ಗೋಶಾಲೆ ಮ್ಯಾನೇಜರ್ ಗಿರೀಶ ಅವರು ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಅಕ್ರಮ ಸಾಗಾಟದ ರೀತಿ ಕಂಡು ಬಂದಿದ್ದು ಆರ್.ಟಿ.ಓ ನಿಯಮ ಉಲ್ಲಂಘನೆ, ಅಕ್ರಮ ಸಾಗಾಟ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Advertisement
Advertisement
ಕೇರಳದಿಂದ ತಂದ ಜಾನುವಾರುಗಳನ್ನು ಗೋವು ಶಾಲೆಗೆ ರವಾನಿಸಲಾಗಿದೆ. ಸಾಗಾಟದ ಸಂದರ್ಭದಲ್ಲಿ ಒಂದು ಗೋವು ಸಾವನಪ್ಪಿರುವುದು ಕೂಡಾ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡಿದ್ದರು.