ಉಡುಪಿ: ಜಿಲ್ಲೆಯಲ್ಲಿ ಮತ್ತೊಮ್ಮೆ ಕೊರೊನಾ ವಾರಿಯರ್ಸ್ ಮೇಲೆ ಬೆದರಿಕೆ ಪ್ರಕರಣ ಮರುಕಳಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯನ್ನ ಬೆದರಿಸಿದ ಘಟನೆ ನಡೆದಿದೆ.
ಕೊರೊನಾ ಲಾಕ್‍ಡೌನ್ ನಡುವೆ ಬೆಂಗಳೂರಿಂದ ಬಂದಿರುವ ಯುವಕ ಸಂದೀಪ್ ಮೇಸ್ತ ಎಂಬಾತನಿಗೆ ಆಶಾ ಕಾರ್ಯಕರ್ತೆ ಲಕ್ಷ್ಮೀ ಹೋಂ ಕ್ವಾರಂಟೈನ್ ವಿಧಿಸಿದ್ದರು. ಆದರೆ ಸಂದೀಪ್ ಕ್ವಾರಂಟೈನ್ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿದ್ದ. ಹೀಗಾಗಿ ಸಂದೀಪ್ ನನ್ನ ಮನೆಯಲ್ಲಿರುವಂತೆ ಸೂಚನೆ ನೀಡಿದ್ದೇ ತಡ ಸಂದೀಪ್ ಹಾಗೂ ಆತನ ಗೆಳೆಯ ಮಹೇಶ್ ಖಾರ್ವಿ ಕೊಲೆ ಬೆದರಿಕೆ ಒಡ್ಡಿದ್ದಾರೆ.
Advertisement
Advertisement
ಕುಂದಾಪುರ ತಾಲೂಕಿನ ಮುದ್ದುಗಡ್ಡೆಯಲ್ಲಿ ಬದುಕಲು ಬಿಡಲ್ಲ ಎಂದು ಬೆದರಿಕೆ ಒಡ್ಡಲಾಗಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
Advertisement
ಕಳೆದ ಕೆಲ ದಿನದ ಹಿಂದೆ 22ರಂದು ಉಡುಪಿ ಜಿಲ್ಲೆಯ ಪಡುಬಿದ್ರಿ ತಾಲೂಕಿನ ಉಚ್ಚಿಲದಲ್ಲಿ ಆರೋಗ್ಯ ಸಹಾಯಕಿ ಶ್ಯಾಮಲಾ ಅವರ ಮೇಲೆ ಹಲ್ಲೆ ಯತ್ನ, ಜೀವ ಬೆದರಿಕೆ ಘಟನೆ ನಡೆದಿತ್ತು. ಮಾಸ್ಕ್ ಹಾಕಿ ಎನ್ನುವ ಬುದ್ಧಿ ಮಾತು ಹಾಗೂ ಹೊರ ಜಿಲ್ಲೆಯಿಂದ ಬರುವ ಬಗ್ಗೆ ಪ್ರಶ್ನಿಸಿದಕ್ಕೆ ಈ ಪ್ರಕರಣ ನಡೆದಿತ್ತು.
Advertisement
ವಾರಿಯರ್ಸ್ ಮೇಲೆ ಬೆದರಿಕೆ, ಹಲ್ಲೆ ನಡೆದರೆ ಕಠಿಣ ಶಿಕ್ಷೆಗೆ ಒಳಪಡಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮತ್ತೆ ಬೆದರಿಕೆ ಪ್ರಕರಣ ನಡೆದಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಸ್ತುವಾರಿ ಜಿಲ್ಲೆಯಲ್ಲಿ ಎರಡು ಘಟನೆಗಳು ನಡೆದು ಪ್ರಕರಣಗಳು ದಾಖಲಾಗಿದೆ.