ಉಡುಪಿ: ಕಡೆಗೋಲು ಶ್ರೀಕೃಷ್ಣನ ನಗರಿ ಉಡುಪಿಯಲ್ಲಿ ಈ ಬಾರಿ ಸರಳ ಕೃಷ್ಣಜನ್ಮಾಷ್ಟಮಿ ನಡೆಯುತ್ತಿದೆ. ಭಕ್ತರಿಗೆ ಮಠದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
Advertisement
ಕೋವಿಡ್ ಸಾಂಕ್ರಾಮಿಕ ಕಾರಣ ಮಠದ ರಥಬೀದಿಯಲ್ಲಿ ಜನಜಂಗುಳಿ ಇಲ್ಲ. ಮುದ್ದುಕೃಷ್ಣ ಸ್ಪರ್ಧೆ ಈ ಬಾರಿ ರದ್ದಾಗಿದೆ. ಉಡುಪಿಯ ಕಡೆಗೋಲು ಕೃಷ್ಣನಿಗೆ ಈ ಬಾರಿ ಪರ್ಯಾಯ ಅದಮಾರು ಈಶಪ್ರಿಯ ತೀರ್ಥ ಶ್ರೀಪಾದರು ಬಾಲಕೃಷ್ಣ ಅಲಂಕಾರ ಮಾಡಿದ್ದಾರೆ. ನಿಂತ ಭಂಗಿಯಲ್ಲಿರುವ ಉಡುಪಿಯ ಕೃಷ್ಣನ ಮೂರ್ತಿಯನ್ನು ಇಂದು ನೋಡಿದವರಿಗೆ, ಡೊಗ್ಗಲು ಕೃಷ್ಣನಾಗಿ ಕಣ್ತುಂಬಿಕೊಳ್ಳುವ ಅವಕಾಶ.
Advertisement
Advertisement
ರಾತ್ರಿ ಅರ್ಘ್ಯ ಪ್ರದಾನ ಕಾರ್ಯಕ್ರಮ ನಡೆಯಲಿದ್ದು ನಾಳೆ ಮಠದ ಸಿಬ್ಬಂದಿ ಮಾತ್ರ ಕೃಷ್ಣ ಲೀಲೋತ್ಸವದಲ್ಲಿ ಭಾಗಿಯಾಗುತ್ತಾರೆ. ವಿಟ್ಲಪಿಂಡಿ ಮಹೋತ್ಸವ ನಡೆಯುವ ಸಂದರ್ಭ ರಥಬೀದಿಗೆ ಭಕ್ತರಿಗೆ ಪ್ರವೇಶ ಇಲ್ಲ ಎಂದು ಪರ್ಯಾಯದ ಮಾರು ಮಠ ಆದೇಶ ಹೊರಡಿಸಿದೆ. ಇದನ್ನೂ ಓದಿ: ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು
Advertisement
ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಪರ್ಯಾಯ ಅದಮಾರು ಸ್ವಾಮಿಗಳು ಲಕ್ಷ ತುಳಸಿ ಅರ್ಚನೆ ಶ್ರೀಕೃಷ್ಣನಿಗೆ ಅರ್ಪಿಸಿದರು. ಅದಕ್ಕೂ ಮೊದಲು ದೇವರಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕವನ್ನು ಮಾಡಲಾಯಿತು. ಮಠದ ಸಿಬ್ಬಂದಿಗಳಿಗೆ ಇಂದು ಅಘ್ರ್ಯಪ್ರದಾನ ದಲ್ಲಿ ಪಾಲ್ಗೊಳ್ಳುವ ಅವಕಾಶ ಇದ್ದು 12.30 ನಂತರ ಭಕ್ತರಿಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ತಾಲಿಬಾನಿಗಳ ಹೊಸ ಆದೇಶ- ಹುಡುಗ, ಹುಡುಗಿ ಜೊತೆಯಾಗಿ ಓದುವಂತಿಲ್ಲ