ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ (Krishna Janmastami) ಹಿನ್ನೆಲೆಯಲ್ಲಿ ಮುಂಜಾನೆಯಿಂದ ಭಕ್ತರ ದಂಡು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಹರಿದು ಬರುತ್ತಿದೆ.
ಕಳೆದ ರಾತ್ರಿ ಅರ್ಘ್ಯ ಪ್ರಧಾನದ ನಂತರ ಭಕ್ತರು ಉಪವಾಸ ತ್ಯಜಿಸಿದ್ದಾರೆ. ಇಂದು ಶ್ರೀ ಕೃಷ್ಣ ಲೀಲೋತ್ಸವ ನಡೆಯುತ್ತದೆ. ಉಡುಪಿ ಕೃಷ್ಣನಿಗೆ ವಜ್ರಕವಚದ ಅಲಂಕಾರ ಮಾಡಲಾಗಿದೆ. ದೇವರು ಹುಟ್ಟಿದ ಸಂಭ್ರಮದಲ್ಲಿ ಭಕ್ತ ಸಾಗರ ಮಿಂದೆದ್ದಿದೆ. ಇದನ್ನೂ ಓದಿ: ಉಡುಪಿಯಲ್ಲಿ ಧರೆಗಿಳಿದು ಬಂದ ಶ್ರೀಕೃಷ್ಣ- ರಾತ್ರಿ 11.42ಕ್ಕೆ ಅರ್ಘ್ಯ ಅರ್ಪಣೆ
ಮುಂಜಾನೆ ಆರು ಗಂಟೆಯಿಂದ ಜನ ನಿರಂತರವಾಗಿ ದೇವರ ದರ್ಶನ ಮಾಡುತ್ತಿದ್ದಾರೆ. ಕೃಷ್ಣ ಮಠದ ಗರ್ಭಗುಡಿ, ಅಷ್ಟಮಠವನ್ನು ವಿಶೇಷ ಹೂವುಗಳಿಂದ ಸಿಂಗಾರ ಮಾಡಲಾಗಿದೆ. ರಾತ್ರಿ ಯತನಕ ನಿರಂತರವಾಗಿ ಭಕ್ತರಿಗೆ ದೇವರ ದರ್ಶನ ಮಾಡುವ ಅವಕಾಶ ಇದೆ.
Web Stories