ಉಡುಪಿ: ಭಾರೀ ಮಳೆ ಹಾಗೂ ಗುಡ್ಡ ಕುಸಿತದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲ ಗ್ರಾಮದ ಮನೆಗಳು ಕೊಚ್ಚಿಹೋಗಿವೆ. ನದಿ ಪಾತ್ರದ ಮನೆಗಳು ಊರಿನ ಜೊತೆ ಸಂಪರ್ಕ ಕಳೆದುಕೊಂಡಿವೆ. ಇದೀಗ ಪ್ರವಾಹ ಹಾಗೂ ಮಳೆ ಅಬ್ಬರ ಕಡಿಮೆಯಾಗಿದ್ದು, ಊರನ್ನು ಕಟ್ಟುವ ಕೆಲಸ ನಡೆಯುತ್ತಿದೆ.
ಉಡುಪಿ ಜಿಲ್ಲೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಚಾರ್ಮಾಡಿ ಘಾಟ್ ಬಳಿಯ ಕಡಿರುದ್ಯಾವರ ಗ್ರಾಮಕ್ಕೆ ತೆರಳಿದ್ದಾರೆ. ಜೊತೆಗೆ ಕಾರ್ಕಳದ ನೂರು ಮಂದಿ ಬಿಜೆಪಿ ಕಾರ್ಯಕರ್ತರನ್ನು ಕರೆದೊಯ್ದಿದ್ದಾರೆ. ಕುಸಿದ ಮನೆಗಳ ತೆರವು, ಕೆಸರು ತುಂಬಿದ ಮನೆಗಳ ಸ್ವಚ್ಛತೆ, ಆಹಾರ ಪೂರೈಕೆಯ ಕೆಲಸವನ್ನು ಈ ತಂಡ ಮಾಡಿದೆ. ಮನೆಯ ಮೇಲ್ಛಾವಣಿ ಹಾರಿ ಹೋದಕಡೆ ರಿಪೇರಿ ಮಾಡಿ ಹೆಂಚು ಜೋಡಿಸಲು ಬಡಗಿಗಳನ್ನು ತಂಡದೊಂದಿಗೆ ಕರೆದೊಯ್ದು ಕೆಲಸ ಮಾಡಿಸಿದ್ದಾರೆ.
Advertisement
Advertisement
ಯುವಕರ ತಂಡವು ಕಾಲು ದಾರಿ ನಿರ್ಮಾಣ, ಹೊಂಡಗಳನ್ನು ಮುಚ್ಚುವ ಕೆಲಸ ಮಾಡಿದೆ. ಕಡಿರುದ್ಯಾವರ ಗ್ರಾಮದ ಬೆಳ್ಲಾರ್ ಬೈಲ್ ನಲ್ಲಿ ಸಂಪರ್ಕ ಕಡಿದುಕೊಂಡಿದ್ದ ಪ್ರದೇಶದಲ್ಲಿ ಶ್ರಮದಾನ ಮಾಡಿ ಐದಾರು ಮನೆಗಳಿಗೆ ಗ್ರಾಮದ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗುವಂತೆ ಮಾಡಿದ್ದಾರೆ.