ಉಡುಪಿ: ರಾಜ್ಯಾದ್ಯಂತ ಇಂದಿನಿಂದ ದ್ವಿತಿಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆ ಆರಂಭವಾಗಿದ್ದು, ಉಡುಪಿಯ ಹಿಜಬ್ ಹೋರಾಟಗಾರ್ತಿಯರಾದ ಆಲಿಯಾ ಅಸಾದಿ ಮತ್ತು ರೇಷಂ ಹಾಲ್ ಟಿಕೆಟ್ ಪಡೆದಿದ್ದಾರೆ.
ಮಹಿಳಾ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ಅಲ್ಮಾಸ್ ಎ ಹೆಚ್, ಹಜ್ರಾ ಶಿಫಾ, ಅಲಿಯಾ ಅಸಾದಿ, ಅಲಿಯಾ ಬಾನು ಮತ್ತು ರೇಷಂ ತರಗತಿಯಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಪ್ರತಿಭಟಿಸಿದ್ದರು. ಆರು ಮಂದಿ ಹಿಜಬ್ ಹೋರಾಟಗಾರ್ತಿಯರ ಪೈಕಿ ಇಬ್ಬರು ಪ್ರಥಮ ಪಿಯುಸಿ ಹಾಗೂ ಇನ್ನುಳಿದ ನಾಲ್ವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ.
Advertisement
Advertisement
ಇಂದು ದ್ವಿತೀಯ ಪಿಯುಸಿಯ ಕಾಮರ್ಸ್ ವಿಭಾಗದ ಪರೀಕ್ಷೆ ನಡೆದಿದ್ದು, ನಾಲ್ವರ ಪೈಕಿ ಇಬ್ಬರಿಗೆ ಪರೀಕ್ಷೆ ಇತ್ತು. ಇಂದು ಅಲಿಯಾ ಅಸಾದಿ ಮತ್ತು ರೇಷಂ ಪರೀಕ್ಷೆ ಇತ್ತು.ಇಂದು ಬೆಳಗ್ಗೆ ಕೊನೆ ಕ್ಷಣದಲ್ಲಿ ಕಾಲೇಜಿಗೆ ಆಗಮಿಸಿದ ಆಲಿಯಾ, ರೇಷಂ ಹಾಲ್ ಟಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಸೆಮಿಸ್ಟರ್ ಪರೀಕ್ಷೆಗೆ ಗೈರು
Advertisement
ಕಾಮರ್ಸ್ ವಿಭಾಗದ ಪರೀಕ್ಷೆ ಕೇಂದ್ರ ಉಡುಪಿ ವಿದ್ಯೋದಯ ಕಾಲೇಜಿನಲ್ಲಿದೆ. ಕಾಲೇಜಿನ ಒಳಗಡೆ ಪರೀಕ್ಷೆ ಬರೆಯುವಾಗ ಮಾತ್ರ ಹಿಜಬ್ ತೆಗೆಯಲು ಆದೇಶವಿದೆ. ಹೀಗಾಗಿ ಹಲವಾರು ಮುಸ್ಲಿಮ್ ವಿದ್ಯಾರ್ಥಿನಿಯರು ಕೇಂದ್ರಕ್ಕೆ ಬುರ್ಕಾ, ಹಿಜಬ್ ಧರಿಸಿಕೊಂಡು ಆಗಮಿಸಿದ್ದಾರೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ ಆಲಿಯಾ, ರೇಷಂ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದಾರೆ. ಪರೀಕ್ಷೆ ಬರೆಯುತ್ತಾರಾ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ.