ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ನಡೆಯುತ್ತಿರೋ ಧರ್ಮ ಸಂಸದ್ ಕಾರ್ಯಕ್ರಮ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಕಾರ್ಯಕ್ರಮಕ್ಕೆ ಉಗ್ರರ ಭೀತಿ ಎದುರಾಗಿದೆ.
ಉಗ್ರರ ದಾಳಿ ಬಗ್ಗೆ ಗುಪ್ತಚರ ಇಲಾಖೆ ಈಗಾಗಲೇ ರಾಜ್ಯಕ್ಕೆ ಎಚ್ಚರಿಕೆ ನೀಡಿದೆ. ರಾಮಮಂದಿರ ನಿರ್ಮಾಣದ ಘೋಷಣೆ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
Advertisement
Advertisement
ಕರ್ನಾಟಕದ ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಮೌಖಿಕ ಆದೇಶ ನೀಡಲಾಗಿದ್ದು, ಕೋಮು ಸಂಘಟನೆಗಳ ಚಟುವಟಿಕೆ ಮೇಲೂ ಕಣ್ಣಿಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ. ಇನ್ನು ಇಂದು ನಡೆಯುವ ಸಭೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ.
Advertisement
2ನೇ ದಿನವಾದ ಇಂದು ಸಂವಾದ ಕಾರ್ಯಕ್ರಮಗಳು ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಸಾಮಾಜಿಕ ಸಾಮರಸ್ಯ ನಿರ್ಮಾಣಕ್ಕೆ ಮಾಡಬೇಕಾದ ಪ್ರಯತ್ನಗಳು, ಗೋ ಹತ್ಯೆ ನಿಷೇಧ ಕಾಯಿದೆ ಸೇರಿ ಹಲವು ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೆ ಮತಾಂತರ ತಡೆ ಹಾಗೂ ಪರಿವರ್ತನಾ ಪ್ರಯತ್ನಗಳು, ನಮ್ಮ ಸಂಸ್ಕೃತಿಯ ರಕ್ಷಣೆಗೆ ಯೋಜನೆಗಳು ಈ ವಿಚಾರದ ಕುರಿತಾಗಿ ವಿಚಾರಗೋಷ್ಠಿ ನಡೆಯಲಿದೆ. ವಿಶೇಷ ಅಂದ್ರೆ ಗೋಷ್ಠಿಯಲ್ಲಿ 1200 ಮಂದಿ ಸಂತರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.
Advertisement
2019ರೊಳಗೆ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ- ಮೋಹನ್ ಭಾಗವತ್ https://t.co/76viJP3bSR#RamaMandira #MohanBhagawat #Udupi #Dharmasamsad pic.twitter.com/t9rcLSab9b
— PublicTV (@publictvnews) November 24, 2017
ಸಂತರ ಸಹಾಯದಿಂದ ರಾಮಮಂದಿರ ನಿರ್ಮಾಣ ಖಚಿತ- ಶೋಭಾ ಕರಂದ್ಲಾಜೆ https://t.co/HLp0Xfg9G4#Udupi #Shobhakarandlaje #PejawaraShree #Ramamandir #DharmaSansad #VHP #Hindu pic.twitter.com/n9zhraIXKS
— PublicTV (@publictvnews) November 24, 2017
ರಾಮಮಂದಿರ ನಿರ್ಮಾಣಕ್ಕಾಗಿ ಗೌಪ್ಯ ಸಭೆ- ತಡರಾತ್ರಿ ಪೇಜಾವರ ಶ್ರೀ-ಭಾಗವತ್ ಮಾತುಕತೆ https://t.co/4FUgwPQclu#Udupi #PejawaraShree #MohanBhagavath #Ramamandir #DharmaSansad #VHP #Hindu pic.twitter.com/nkRxRYQOMs
— PublicTV (@publictvnews) November 24, 2017