ಉಡುಪಿ: ದೇಶಾದ್ಯಂತ ಕೋರೊನಾ ಸೋಂಕು ಹಬ್ಬುತ್ತಿರುವಾಗಲೇ ಹ್ಯಾಕರ್ಸ್ ಗಳು ತಲೆಯೆತ್ತಿದ್ದಾರೆ. ಗ್ರಾಹಕರ ಫೋನ್ ನಂಬರನ್ನು ಪಡೆದುಕೊಂಡು ವಂಚಿಸಲು ಶುರು ಮಾಡಿದ್ದಾರೆ.
ಕೇಂದ್ರ ಸರ್ಕಾರದಿಂದ ಧನಸಹಾಯ ಬಂದಿದೆ. ಈಗ ನಿಮ್ಮ ಮೊಬೈಲಿಗೆ ಬಂದಿರೋ ಓಟಿಪಿ ಕೊಡಿ ಎಂದು ಕರೆ ಮಾಡಿ ಕೇಳುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬ್ಯಾಂಕ್ ಖಾತೆ ಹ್ಯಾಕರ್ಸ್ ಗಳ ಸಂಖ್ಯೆ ಜಾಸ್ತಿಯಾಗಿದ್ದು, ಗ್ರಾಹಕರು ಎಚ್ಚೆತ್ತುಕೊಳ್ಳಿ ಎಂದು ಬ್ಯಾಂಕ್ ಮ್ಯಾನೇಜರ್ ಗಳು ಕರೆ ಕೊಟ್ಟಿದ್ದಾರೆ.
Advertisement
Advertisement
ಎಲ್ಲಾ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಮೆಸೇಜ್ ಹಾಕಿದ್ದಾರೆ. ಪ್ರಕಟಣೆ ಮೂಲಕ, ನಮ್ಮ ಬ್ಯಾಂಕ್ ಮೂಲಕ ಯಾವುದೇ ಪರಿಹಾರ ನಿಧಿಯನ್ನು ಪಡೆದುಕೊಳ್ಳುವುದಿಲ್ಲ. ಯಾರ ಕರೆಗೂ ಸ್ಪಂದಿಸಬೇಡಿ. ಓಟಿಪಿ- ಪಿನ್ ಅಕೌಂಟ್ ನಂಬರ್ ಗಳನ್ನು ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಸರ್ಕಾರ ಗ್ರಾಹಕರ ಖಾತೆಗೆ ಕೊರೊನಾ ಪರಿಹಾರ ನಿಧಿ ಹಾಕುವ ಯೋಜನೆಗಳು ಯಾವುದೂ ಇಲ್ಲ ಎಂದು ಮಾಹಿತಿ ನೀಡಿದರು.
Advertisement
ನಿಮ್ಮ ಬ್ಯಾಂಕ್ ಯಾವುದೇ ಸಂದರ್ಭದಲ್ಲಿ ಓಟಿಪಿ ಪಿನ್ ಅಥವಾ ದಾಖಲೆಗಳನ್ನು ಕೇಳುವುದೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಬ್ಯಾಂಕ್ ಆಫ್ ಬರೋಡದ ಡಿಜಿಎಂ ರವೀಂದ್ರ ರೈ, ನೇರವಾಗಿ ನಿಮ್ಮ ಶಾಖೆಯನ್ನು ಸಂಪರ್ಕ ಮಾಡಿ. ಓಟಿಪಿ ಕೊಡುವ ಮಾಹಿತಿ ರವಾನೆ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.