ಉಡುಪಿ: ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ಹಾರೈಸಿ ಕೊಲ್ಲೂರು ದೇವಸ್ಥಾನದಲ್ಲಿ ಚಂಡಿಕಾಹೋಮ ನಡೆಸಲಾಗಿದೆ.
ಬೆಂಗಳೂರಿನ ಜ್ಯೋತಿಷಿ ಹಾಗೂ ವಾಸ್ತುಶಾಸ್ತ್ರಜ್ಞ ಡಾ.ಬಿ.ಪಿ ಆರಾಧ್ಯ ಈ ವಿಶೇಷ ಪೂಜೆ ಹಾಗೂ ಹೋಮ ನೆರವೇರಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಅಭಿಮಾನಿ ಹಾಗೂ ಜ್ಯೋತಿಷಿ ಆಗಿರುವ ಆರಾಧ್ಯ ಅವರು ಕುಟುಂಬ ಸಮೇತರಾಗಿ ಬಂದು ಈ ಪೂಜೆ ನಡೆಸಿದ್ದಾರೆ.
Advertisement
Advertisement
ಈ ಹಿಂದೆ ಡಿ.ಕೆ ಶಿವಕುಮಾರ್ ಜೈಲು ಸೇರಿದ್ದಾಗಲೂ ಶೀಘ್ರ ಬಿಡುಗಡೆಗೆ ಪ್ರಾರ್ಥಿಸಿ ಕೊಲ್ಲೂರಿನಲ್ಲಿ ಹೋಮ, ಪೂಜೆ ನಡೆಸಿದ್ದರು. ಪೂಜೆಯ ನಡೆದ ಬೆನ್ನಲ್ಲೇ ಶಿವಕುಮಾರ್ ಬಿಡುಗಡೆಯಾಗಿತ್ತಂತೆ. ಈ ಬಾರಿಯೂ ಶಿವಕುಮಾರ್ ಅವರ ರಾಜಕೀಯ ಏಳಿಗೆಗೆ ಪ್ರಾರ್ಥಿಸಿ ಈ ನವಚಂಡಿಕಾ ಹೋಮ ನಡೆಸಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಆರಾಧ್ಯ, ಪೂಜಾ ಪ್ರಸಾದವನ್ನು ಡಿ.ಕೆ ಶಿವಕುಮಾರ್ ಕುಟುಂಬಕ್ಕೆ ಕೊಡುತ್ತೇವೆ. ಅವರ ಜೊತೆ ನಮ್ಮ ಕುಟುಂಬಕ್ಕೆ ನಿರಂತರ ಸಂಪರ್ಕ ಇದೆ. ಅವರು ಅಧ್ಯಕ್ಷಗಾಗಬೇಕೆಂಬೂದು ನಮ್ಮ ಹಾರೈಕೆ ಎಂದರು.