ಉಡುಪಿ: ವಿಡಿಯೋ ಪ್ರಕರಣಕ್ಕೆ (Udupi College Video Row) ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ (Khushbu Sundar) ಉಡುಪಿ ಭೇಟಿ ವೇಳೆ ಅವರ ಜೊತೆಗಿದ್ದ ಕಾಂಗ್ರೆಸ್ ಪಕ್ಷದ ದಿವಂಗತ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಸಂಬಂಧಿ, ಉಡುಪಿಯ ಹಿರಿಯ ವಕೀಲೆ ಮೇರಿ ಶ್ರೇಷ್ಠ (Meri Shreshtha) ಉಪಸ್ಥಿತಿ ಬಗ್ಗೆ ಬಿಜೆಪಿ ನಾಯಕರು (BJP Leaders) ತಗಾದೆ ಎತ್ತಿದ್ದಾರೆ.
ಖುಷ್ಬು ಜೊತೆ ಮೇರಿ ಶ್ರೇಷ್ಠ ಯಾಕೆ ಇದ್ದರು? ಅವರ ಪಾತ್ರ ಏನು? ಇದರ ಹಿಂದೆ ಏನಾದರೂ ಸಂಚು ಇದೆಯಾ? ಅವರು ಆರೋಪಿ ವಿದ್ಯಾರ್ಥಿನಿಯರ ಪರವಾಗಿದ್ದಾರೆಯೋ? ಅವರು ಪ್ರಕರಣ ಮುಚ್ಚಿ ಹಾಕಲು ಯತ್ನಿಸ್ತಿದ್ದಾರಾ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಕುಯ್ಲಾಡಿ (Kuilady Suresh Nayak) ಪ್ರಶ್ನಿಸಿದ್ದಾರೆ. ಈ ಮೂಲಕ ಖುಷ್ಬು ಹೇಳಿಕೆಯಲ್ಲಿ ಮೇರಿಶ್ರೇಷ್ಠ ಪ್ರಭಾವ ಇದ್ದಂತೆ ಕಾಣಿಸುತ್ತಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Udupi College Video Row – ತನಿಖೆ ಶುರು ಮಾಡಿದ ಕುಂದಾಪುರ ಡಿವೈಎಸ್ಪಿ
Advertisement
Advertisement
ಇದಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕಿ ಸುನಿತಾ ಶೆಟ್ಟಿ ತಿರುಗೇಟು ನೀಡಿದ್ದಾರೆ. ಮೇರಿ ಶ್ರೇಷ್ಠ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ, ಅವರು ಪಕ್ಷಕ್ಕೆ ಸೀಮಿತವಾದ ಮಹಿಳೆ ಅಲ್ಲ. ತನಿಖೆ ವೇಳೆ ಹಾಜರು ಇರಬೇಕೆಂಬ ನೋಟಿಸ್ ಬಂದ ಹಿನ್ನೆಲೆಯಲ್ಲಿ ಅವರು ಹೋಗಿದ್ದಾರೆ ಅಷ್ಟೇ ಎಂದಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಜೊತೆಗೆ ಸುಳ್ಯದ ಶಾಸಕಿ ಭಾಗೀರಥಿ ಮರುಳ್ಯ (Bhagirathi Murulya) ಕೂಡ ಇದ್ದರೇಕೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.
Advertisement
ಖುಷ್ಬು ಹೇಳಿಕೆಯಿಂದ ಬಿಜೆಪಿಗರು ಚಿಂತೆಗೀಡಾಗಿದ್ದಾರೆ.ಅದಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಸುನಿತಾ ಶೆಟ್ಟಿ ಟಾಂಗ್ ಕೊಟ್ಟಿದ್ದಾರೆ. ಈ ಮಧ್ಯೆ ಉಡುಪಿ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ವಹಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ಪರಮೇಶ್ವರ್ ಸಭೆ ನಡೆಸಿದ್ದಾರೆ.
Advertisement
Web Stories