ಬೆಂಗಳೂರು/ಉಡುಪಿ: ರಾಜ್ಯದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಉಡುಪಿ ಕಾಲೇಜಿನ (Udupi College) ವೀಡಿಯೋ ಚಿತ್ರೀಕರಣ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಾ ಇದೆ.
ವಿದ್ಯಾರ್ಥಿನಿಯರು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ (Mobile Video Recording) ಮಾಡಿದ್ದಾರೆ ಎನ್ನಲಾಗುತ್ತಿದೆಯಾದರೂ ಮೊಬೈಲ್‌ನಲ್ಲಿ ಯಾವುದೇ ವಿಡಿಯೋ, ಫೋಟೋಗಳು ಲಭ್ಯವಾಗಿಲ್ಲ.
- Advertisement
ಹೌದು. ಈಗಾಗಲೇ ಕಾಲೇಜು ಆಡಳಿತ ಮಂಡಳಿಯ ಮೂಲಗಳ ಪ್ರಕಾರ, ಮೊಬೈಲ್‌ನಲ್ಲಿ ವಿಡಿಯೋ ಡಿಲೀಟ್ ಮಾಡಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು ಎನ್ನಲಾಗ್ತಿದೆ. ಪೊಲೀಸರು ವಶಕ್ಕೆ ಪಡೆದಿರೋ ಮೊಬೈಲ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನೆ ಮಾಡಲಾಗಿದೆ. FSL ಮೊಬೈಲ್ ಅನ್ನು ರಿಟ್ರೀವ್ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ರಿಟ್ರೀವ್ ಆಗದೇ ಇದ್ದರೆ ಕ್ಲೌಡ್‌ನಿಂದ ಮಾಹಿತಿ ಕಲೆಹಾಕಬಹುದು. ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ವೀಡಿಯೋ ಶೂಟಿಂಗ್ ಯಾವ ರೀತಿ ಪ್ರ್ಯಾಂಕ್: ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್ ಪ್ರಶ್ನೆ
- Advertisement
ವಿದ್ಯಾರ್ಥಿನಿಯರು ಐ-ಫೋನ್ (iPhone) ಅಲ್ಲಿ ದೃಶ್ಯಾವಳಿ ಸೆರೆ ಹಿಡಿದಿದ್ರು ಎನ್ನಲಾಗಿದೆ. ಮೊಬೈಲ್‌ನಲ್ಲಿ ಡಿಲೀಟ್ ಮಾಡಿದ್ರೂ ಕೂಡ ಐ-ಕ್ಲೌಡ್‌ನಲ್ಲಿ ದೃಶ್ಯಾವಳಿ ಇರುತ್ತೆ. ಕೋರ್ಟ್ ನ ಅನುಮತಿ ಪಡೆದು, ಸಂಬಂಧ ಪಟ್ಟ ಮೊಬೈಲ್ ಕಂಪನಿಯಿಂದ ಮಾಹಿತಿ ಹೊರ ತೆಗೆಯಬಹುದು. ಸದ್ಯ ಮೊಬೈಲ್‌ನ ಎಫ್‌ಎಸ್‌ಎಲ್ ರಿಟ್ರೀವ್ ಮಾಡ್ತಾರಾ? ಮೊಬೈಲ್‌ನಲ್ಲಿ ದೃಶ್ಯಾವಳಿ ಇದ್ಯಾ? ಅನ್ನೋದು ತನಿಖೆಯ ಕುತೂಹಲ ಆಗಿದೆ. ಇದನ್ನೂ ಓದಿ: ಲೇಡಿಸ್ ಟಾಯ್ಲೆಟ್‌ನಲ್ಲಿ ಸ್ಪೈ ಕ್ಯಾಮೆರಾ ಇಟ್ಟಿಲ್ಲ, ಮೊಬೈಲ್‌ನಲ್ಲಿ ಫೋಟೋ-ವೀಡಿಯೋ ಸಿಕ್ಕಿಲ್ಲ: ಖುಷ್ಬು ಸುಂದರ್
ನಿನ್ನೆಯಷ್ಟೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ (Khusboo Sundar), ಲೇಡಿಸ್ ಟಾಯ್ಲೆಟ್‌ನಲ್ಲಿ ಯಾವುದೇ ಸ್ಪೈ ಕ್ಯಾಮೆರಾ ಇಟ್ಟಿಲ್ಲ. ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿ ಯಾವುದೇ ಫೋಟೋ, ವೀಡಿಯೋಗಳು ಸಿಕ್ಕಿಲ್ಲ. ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಫೇಕ್ ವೀಡಿಯೋ. ಇಂತಹ ಫೇಕ್ ವೀಡಿಯೋಗಳನ್ನ ಜನರು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದರು.
Web Stories