ಬೆಂಗಳೂರು/ಉಡುಪಿ: ಇಲ್ಲಿನ ಖಾಸಗಿ ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣದಲ್ಲಿ (Udupi Video Case) ಪ್ರಮುಖ ಬೆಳವಣಿಗೆ ಕಂಡುಬಂದಿದೆ. ಆರೋಪಿ ಸ್ಥಾನದಲ್ಲಿರುವ ವಿದ್ಯಾರ್ಥಿನಿಯರ ಮೊಬೈಲ್ ಅನ್ನು ಗುಜರಾತ್‌ನ ವಿಧಿವಿಜ್ಞಾನ ಪ್ರಯೋಗಾಲಯ (FSL)ಗೆ ರವಾನೆ ಮಾಡಲಾಗಿದೆ.
ರಾಜ್ಯ ಎಫ್‌ಎಸ್‌ಎಲ್ ನಿಂದ ಮೊಬೈಲ್‌ನಲ್ಲಿ ಯಾವುದೇ ಫೋಟೋ ರಿಟ್ರೀವ್ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗುಜರಾತ್‌ನ ಪ್ರಯೋಗಾಲಯಕ್ಕೆ ಮೊಬೈಲ್‌ಗಳನ್ನ ತಲುಪಿಸಲಾಗಿದ್ದು, CID ತಂಡ ವರದಿಗಾಗಿ ಕಾದು ಕುಳಿತಿದೆ. ಇದನ್ನೂ ಓದಿ: ಲೇಡಿಸ್ ಟಾಯ್ಲೆಟ್‌ನಲ್ಲಿ ಸ್ಪೈ ಕ್ಯಾಮೆರಾ ಇಟ್ಟಿಲ್ಲ, ಮೊಬೈಲ್‌ನಲ್ಲಿ ಫೋಟೋ-ವೀಡಿಯೋ ಸಿಕ್ಕಿಲ್ಲ: ಖುಷ್ಬು ಸುಂದರ್
Advertisement
Advertisement
ಉಡುಪಿ ಖಾಸಗಿ ಕಾಲೇಜೊಂದರ ಲೇಡಿಸ್ ಟಾಯ್ಲೆಟ್‌ನಲ್ಲಿ ವಿದ್ಯಾರ್ಥಿನಿಯರು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿದ್ದು, ಮೊಬೈಲ್‌ನಲ್ಲಿ ಯಾವುದೇ ವಿಡಿಯೋ, ಫೋಟೋಗಳು ಲಭ್ಯವಾಗಿಲ್ಲ. ಪೊಲೀಸರು ವಶಕ್ಕೆ ಪಡೆದಿದ್ದ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನೆ ಮಾಡಲಾಗಿತ್ತು. ಆದ್ರೆ ಈವರೆಗೆ ಯಾವುದೇ ಫಲಿತಾಂಶ ಬಂದಿಲ್ಲ. ಹಾಗಾಗಿ ಗುಜರಾತ್‌ನ ಪ್ರಯೋಗಾಲಯಕ್ಕೆ ಮೊಬೈಲ್‌ಗಳನ್ನ ರವಾನಿಸಲಾಗಿದೆ. ಇದನ್ನೂ ಓದಿ: ಉಡುಪಿ ಕೇಸಲ್ಲಿ ಸಂತ್ರಸ್ತೆ, ಆರೋಪಿಗಳ ವಿಚಾರಣೆ- ಪ್ರಕರಣಕ್ಕೆ ಕೇರಳ ಲಿಂಕ್ ಕೊಟ್ಟು ಬಿಜೆಪಿ ಪ್ರತಿಭಟನೆ
Advertisement
Advertisement
ಈ ನಡುವೆ ವಿದ್ಯಾರ್ಥಿನಿಯರು ಐ-ಫೋನ್ (iPhone) ಅಲ್ಲಿ ದೃಶ್ಯಾವಳಿ ಸೆರೆ ಹಿಡಿದಿದ್ರು ಎಂದೂ ಹೇಳಲಾಗುತ್ತಿದೆ. ಮೊಬೈಲ್‌ನಲ್ಲಿ ಡಿಲೀಟ್ ಮಾಡಿದ್ದರೂ ಐ-ಕ್ಲೌಡ್‌ನಲ್ಲಿ ದೃಶ್ಯಾವಳಿ ಇರುತ್ತೆ. ಕೋರ್ಟ್ ನ ಅನುಮತಿ ಪಡೆದು, ಸಂಬಂಧಪಟ್ಟ ಮೊಬೈಲ್ ಕಂಪನಿಯಿಂದ ಮಾಹಿತಿ ಹೊರ ತೆಗೆಯಬಹುದು ಎಂದು ತಜ್ಞರು ಹೇಳಿದ್ದಾರೆ. ಸದ್ಯ ಮೊಬೈಲ್‌ನ ಎಫ್‌ಎಸ್‌ಎಲ್ ರಿಟ್ರೀವ್ ಮಾಡ್ತಾರಾ? ಮೊಬೈಲ್‌ನಲ್ಲಿ ದೃಶ್ಯಾವಳಿ ಇದ್ಯಾ? ಅನ್ನೋದು ತನಿಖೆಯ ಕುತೂಹಲ ಆಗಿದೆ. ಈಗಾಗಲೇ ಆರೋಪಿತ ಯುವತಿಯರಿಂದ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Web Stories