ಉಡುಪಿ ವೀಡಿಯೋ ಪ್ರಕರಣ – ಬೆಂಗಳೂರು, ಹೈದರಾಬಾದ್ ಬಳಿಕ ಅಹಮದಾಬಾದ್‍ನ ಎಫ್‍ಎಸ್‍ಎಲ್‍ಗೆ ಮೊಬೈಲ್ ರವಾನೆ

Public TV
2 Min Read
FSL

ಉಡುಪಿ: ಇಲ್ಲಿನ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ (Udupi College) ಹಿಂದೂ ಯುವತಿ ಟಾಯ್ಲೆಟ್‍ಗೆ ತೆರಳಿದ್ದಾಗ ಅನ್ಯಕೋಮಿನ ವಿದ್ಯಾರ್ಥಿನಿಯರು ವೀಡಿಯೋ ಮಾಡಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಮೊಬೈಲ್ ರಿಟ್ರೀವ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವೀಡಿಯೋ ಮಾಡಿದ್ದ ಮೊಬೈಲ್ ಬೆಂಗಳೂರು (Bengaluru) ಹಾಗೂ ಹೈದರಾಬಾದ್‍ನ ಎಫ್‍ಎಸ್‍ಎಲ್‍ನಲ್ಲಿ (FSL) ರಿಟ್ರೀವ್ ಆಗದ ಹಿನ್ನಲೆ ಮೊಬೈಲ್‍ನ್ನು ಅಹಮದಾಬಾದ್‍ಗೆ (Ahmedabad) ಕಳಿಸಲಾಗಿದೆ.

ಪ್ರಕರಣ ನಡೆದು ಅರ್ಧ ವರ್ಷ ಕಳೆದರೂ ಪೊಲೀಸರಿಗೆ ಈ ಪ್ರಕರಣದಲ್ಲಿ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಟಾಯ್ಲೆಟ್‍ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಿಸಿದ್ದ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿನಿಯರು ಮೊಬೈಲ್‍ನಲ್ಲಿದ್ದ ವೀಡಿಯೋವನ್ನು ತಕ್ಷಣವೇ ಡಿಲೀಟ್ ಮಾಡಿದ್ದಾಗಿ ತಿಳಿಸಿದ್ದರು. ಬಳಿಕ ಜಪ್ತಿ ಮಾಡಲಾಗಿದ್ದ ಮೊಬೈಲ್‍ನ್ನು ಹೈದರಾಬಾದ್ ಎಫ್‍ಎಸ್‍ಎಲ್ ಕಚೇರಿಗೆ ಕಳಿಸಲಾಗಿತ್ತು. ಈಗ ಅಲ್ಲಿ ರಿಟ್ರೀವ್ ಮಾಡಲು ಸಾಧ್ಯವಾಗಿಲ್ಲ. ಯುವತಿಯ ಮೊಬೈಲ್ ಐಫೋನ್ ಆಗಿದ್ದರಿಂದ ರಿಟ್ರೀವ್ ಮಾಡುವುದು ಸವಾಲಾಗಿ ಪರಿಣಮಿಸಿದೆ. ಇದನ್ನೂ ಓದಿ: ಬೆಂಗಳೂರು, ಮಹಾರಾಷ್ಟ್ರದಲ್ಲಿ ಎನ್‌ಐಎ ದಾಳಿ, 15 ಮಂದಿ ಅರೆಸ್ಟ್‌ – 51 ಹಮಾಸ್‌ ಧ್ವಜ, ಪಿಸ್ತೂಲ್‌, ಗನ್‌, ಮಾರಕಾಸ್ತ್ರಗಳು ಜಪ್ತಿ

ಅಹಮದಾಬಾದ್‍ನ ಎಫ್‍ಎಸ್‍ಎಲ್‍ನಲ್ಲಿ ಮೊಬೈಲ್ ರಿಟ್ರೀವ್ ಮಾಡುವ ವ್ಯವಸ್ಥೆ ಇದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಅದಕ್ಕಾಗಿ ಸಿಐಡಿ ತಂಡ ಜಪ್ತಿ ಮಾಡಿದ್ದ ಮೊಬೈಲ್‍ನ್ನು ಅಲ್ಲಿಗೆ ಕೊಂಡೊಯ್ದಿದೆ. ಮೊಬೈನಲ್ಲಿದ್ದ ವೀಡಿಯೋ ಮಾತ್ರ ಅಲ್ಲದೇ ಸ್ನೇಹಿತೆಯರಿಗೆ ಕಳಿಸಿದ ಮೆಸೇಜ್‍ಗಳು ಸಹ ಡಿಲೀಟ್ ಆಗಿದ್ದು, ಮೊಬೈಲ್‍ನ ಸಂಪೂರ್ಣ ಡೇಟಾ ರಿಟ್ರೀವ್ ರಿಪೋರ್ಟ್‌ನ್ನು  ಸಿಐಡಿ ಅಧಿಕಾರಿಗಳು ಕೇಳಿದ್ದಾರೆ.

ವಿಚಾರಣೆ ವೇಳೆ ವಿದ್ಯಾರ್ಥಿನಿಯರು ತಮಾಷೆಗಷ್ಟೇ ವೀಡಿಯೋ ಮಾಡಿದ್ದಾಗಿ ತಿಳಿಸಿದ್ದರು. ಅಲ್ಲದೇ ಆ ಕ್ಷಣವೇ ವೀಡಿಯೋವನ್ನು ಡಿಲಿಟ್ ಮಾಡಲಾಗಿದೆ. ಯಾವುದೇ ಬೇರೆ ಉದ್ದೇಶ ನಮಗೆ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಈ ವರ್ಷ ಜು.22ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಜೆಪಿ ದೊಡ್ಡ ಪ್ರತಿಭಟನೆ ನಡೆಸಿತ್ತು. ಅಲ್ಲದೇ ವೀಡಿಯೋ ಮಾಡಿ ಬೇರೆಯವರಿಗೆ ಕಳಿಸುತ್ತಿದ್ದಾರೆ ಎಂದು ಆರೋಪಿಸಿತ್ತು. ಈ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಸಹ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದನ್ನೂ ಓದಿ: ಕಾರು, ಟ್ರಕ್ ನಡುವೆ ಅಪಘಾತ – ಮದುವೆಗೆ ಹೊರಟಿದ್ದ ಎಂಟು ಮಂದಿ ಸಜೀವ ದಹನ

Share This Article