ಉಡುಪಿ: ಕಳೆದ ಎರಡು ತಿಂಗಳಿನಿಂದ ಮುದ್ದು ನಾಯಿಮರಿಯೊಂದು ಎಲ್ಲರ ಪ್ರೀತಿಗಳಿಸಿತ್ತು. ಕಾಲೇಜಿನ ಕ್ಯಾಂಪಸ್ ನಲ್ಲೆಲ್ಲ ಓಡಾಡಿ ನೂರಾರು ವಿದ್ಯಾರ್ಥಿಗಳ ಅಕ್ಕರೆ ಗಳಿಸಿತ್ತು. ಆದರೆ ವರಾಂಡದಲ್ಲಿ ಓಡಾಡುತ್ತಿರೋದು ಆಡಳಿತ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿತ್ತು. ಮಾನವೀಯತೆ ಮರೆತ ವಾರ್ಡನ್ (College Warden) ಮಾಡಬಾರದ ಹೇಯ ಕೃತ್ಯ ಮಾಡಿ ಕೇಸು ಹಾಕಿಸಿಕೊಂಡಿದ್ದಾನೆ.
Advertisement
ಹೌದು. ಉಡುಪಿ (Udupi) ಯ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿ (Bantakal Engineering College) ನ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಬೀದಿ ನಾಯಿಯ ಜೊತೆ ಇಷ್ಟಪಟ್ಟು ಆಟವಾಡುತ್ತಿದ್ದಳು. ಹಲವರಿಗೆ ಈ ನಾಯಿ (Dog Murder) ಪ್ರಿಯವಾಗಿತ್ತು. ಹಾಸ್ಟೆಲ್ ಆವರಣದಲ್ಲಿ ನಾಯಿಯ ಓಡಾಟ ಅದ್ಯಾಕೋ ವಾರ್ಡನ್ ಗೆ ಸರಿ ಕಂಡು ಬರಲಿಲ್ಲ. ವಾರ್ಡನ್ ಗಳಿಬ್ಬರು ಸೇರಿ ದೊಣ್ಣೆ ಬಳಸಿ ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ. ಬಳಿಕ ಚೀಲದಲ್ಲಿ ನಾಯಿಯ ಕಳೆ ಬರವನ್ನು ತೆಗೆದುಕೊಂಡು ಎಸೆದಿದ್ದಾರೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ವೃದ್ಧ ಮಹಿಳೆಯರನ್ನೇ ರೇಪ್ ಮಾಡಿ, ಕೊಲೆ ಮಾಡ್ತಿದ್ದ 20ರ ಯುವಕ- ಸೈಕೋ ಕಿಲ್ಲರ್ ಅರೆಸ್ಟ್
Advertisement
Advertisement
ವಾರ್ಡನ್ ನಡೆಸಿದ ಈ ಅಮಾನುಷ ಕೃತ್ಯ ಕಾಲೇಜು ಅವರಣದಲ್ಲಿದ್ದ ಯಾವುದೋ ವಿದ್ಯಾರ್ಥಿ ಸೆರೆ ಹಿಡಿದಿದ್ದಾರೆ. ಸದ್ಯ ಆ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಕ್ರಮೇಣ ಈ ವಿಷಯ ಪ್ರಾಣಿ ಪ್ರಿಯರ ಗಮನಕ್ಕೂ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ಸ್ಥಳೀಯ ಶಿರ್ವ ಪೊಲೀಸ್ ಠಾಣೆ (Shirva Police Station) ಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ವಿಕೃತಿ ಮೆರೆದ ವಾರ್ಡನ್ ಅನ್ನು ರಾಜೇಶ್ ಎಂದು ಗುರುತಿಸಲಾಗಿದೆ. ನಾಗರಾಜ್ ಎಂಬಾತ ಈ ಕೃತ್ಯಕ್ಕೆ ಸಾಥ್ ನೀಡಿದ್ದಾನೆ.
Advertisement
ಮಂಜುಳಾ ಕರ್ಕೇರ ಶಿರ್ವ ಠಾಣೆಯಲ್ಲಿ ದೂರ ನೀಡಿದ್ದಾರೆ. ಉಡುಪಿಯ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ (Animal Care Trust) ಮುಖ್ಯಸ್ಥೆ ಬಬಿತಾ ಮಧ್ವರಾಜ್ ಇದನ್ನು ಒಂದು ಅಭಿಯಾನದ ರೀತಿಯಲ್ಲಿ ಮುಂದುವರಿಸಿದ್ದಾರೆ ಐಪಿಸಿ ಸೆಕ್ಷನ್ 428-29 ಮತ್ತು ಪಿಸಿಎ ಆಕ್ಟ್-11 ಪ್ರಕಾರ ದೂರು ದಾಖಲಾಗಿದೆ. ಇದೊಂದು ಅಮಾನವೀಯ ಮತ್ತು ಕ್ರೂರ ಕೃತ್ಯ.ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಈ ನಾಯಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸಂಸ್ಥೆ ತಾಂತ್ರಿಕ ಶಿಕ್ಷಣದ ಜೊತೆ ಮಾನವೀಯ ಮೌಲ್ಯ ಕಲಿಸಬೇಕು ಎಂದು ಅನಿಮಲ್ ಕೇರ್ ಟ್ರಸ್ಟ್ ಹೇಳಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k