– ಗುಡಿಯಿಲ್ಲದೆ ಕಲದಲ್ಲಿ ನೆಲೆನಿಂತ ದೈವಕ್ಕಿದೆ ವಿಶೇಷ ಶಕ್ತಿ
– ಹರಕೆ ಹೇಳಿದ್ರೆ ಈಡೇರುತ್ತೆ ಅಂತಾರೆ ಭಕ್ತರು
– ಸಮಸ್ಯೆ ಎದುರಾದಾಗ ಕೊರಗಜ್ಜನ ಸನ್ನಿಧಿಗೆ ಬರುತ್ತಾರೆ ನಟರು
ಉಡುಪಿ: ಸ್ವಂತ ಟ್ಯಾಲೆಂಟ್ ಎಷ್ಟೇ ಇರಬಹುದು. ಆದರೆ ವ್ಯಕ್ತಿಯ ಹಿಂದೆ ಒಂದು ಶಕ್ತಿ ಇದ್ದೇ ಇರುತ್ತದೆ ಎಂಬ ಮಾತಿದೆ. ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಸ್ಯಾಂಡಲ್‍ವುಡ್‍ನಲ್ಲಿ ಸಕ್ಸಸ್‍ಫುಲ್ ಆ್ಯಕ್ಟರ್ ಕಂ ಡೈರೆಕ್ಟರ್ ಆಗಿದ್ದಾರೆ. ಈ ನಟರ ಹಿಂದೆ ಒಂದು ಶಕ್ತಿ ಬೆನ್ನೆಲುಬಾಗಿ ನಿಂತಿದೆ. ಆ ದೈವಶಕ್ತಿಯೇ ಅವರನ್ನು ಕಾಪಾಡಿದ್ದು, ಎತ್ತರಕ್ಕೆ ಕೊಂಡೊಯ್ದಿದೆ ಎನ್ನುವ ಮಾತು ಈಗ ಕೇಳಿಬಂದಿದೆ.
ಒಂದೊಂದು ಕಾಲಕ್ಕೆ, ಒಂದೊಂದು ಭಾಗಕ್ಕೆ ಜನರ ನಂಬಿಕೆಗಳು ಆಚರಣೆಗಳು ಬದಲಾಗುತ್ತಾ ಹೋಗುತ್ತವೆ. ಕರಾವಳಿ ತೀರದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವರ ಜೊತೆ ದೈವಗಳನ್ನು ಬಹಳ ನಂಬಿಕೆಯಿಂದ ಆರಾಧಿಸಲಾಗುತ್ತದೆ. ಸಮುದ್ರ ತೀರಕ್ಕೆ ಅಂಟಿಕೊಂಡಿರುವ ಊರುಗಳಲ್ಲಿ ಕೊರಗಜ್ಜ ದೈವದ ಪವಾಡಗಳು ಅಲ್ಲಲ್ಲಿ ನಡೆಯುತ್ತಿದೆ. ನಂಬಿಕೆ ಮತ್ತು ಶ್ರದ್ಧಾಪೂರ್ವಕವಾಗಿ ಕೊರಗಜ್ಜ ದೈವಕ್ಕೆ ಹರಕೆ ಹೇಳಿದರೆ ಕೇಳಿದ್ದೆಲ್ಲ ಆಗುತ್ತೆ ಎಂಬ ವಿಶ್ವಾಸ ಜನರಲ್ಲಿದೆ.
Advertisement
Advertisement
ಕೊರಗಜ್ಜ ಕರಾವಳಿಯ ಪವರ್ ಫುಲ್ ದೈವ. ನಂಬಿದವರಿಗೆ ಸದಾ ಒಳ್ಳೆಯದನ್ನೇ ಮಾಡುವ ದೈವಕ್ಕೆ ಹರಕೆ ಹೇಳಿ ಒಳ್ಳೆಯ ಮನಸ್ಸಿನಲ್ಲಿ ಕೇಳಿಕೊಂಡರೆ ಅದನ್ನು ದೈವ ಕೈಗೂಡಿಸಿಕೊಡುತ್ತದೆ. ಚಲನಚಿತ್ರ, ರಾಜಕೀಯ ಸಾಮಾನ್ಯ ಜನರೂ ಕೊರಗಜ್ಜ ದೈವವನ್ನು ನಂಬಿಕೊಂಡು ಬರುತ್ತಾರೆ. ಬೈಲೂರು ದೈವಸ್ಥಾನದಲ್ಲಿ ಗುಡಿ ಬಿಟ್ಟು ಕಲದಲ್ಲಿ ನೆಲೆಯಾಗಿರುವ ದೈವ ಬಹಳ ಶಕ್ತಿಯುತ ಎನ್ನುವ ನಂಬಿಕೆ ಭಕ್ತರಲ್ಲಿದೆ.
Advertisement
ಸ್ಯಾಂಡಲ್‍ವುಡ್ ನಟ ನಿರ್ದೇಶಕರಾದ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಬೈಲೂರಿನ ಕೊರಗಜ್ಜ ದೈವದ ಭಕ್ತರು. ತಮ್ಮ ಸಿನಿಮಾ ಭವಿಷ್ಯ ಆರಂಭದ ದಿನಗಳಿಂದ ಉಡುಪಿಯ ಬೈಲೂರಿನ ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ದೈವಸ್ಥಾನದ ಭಕ್ತರು. ಎಲ್ಲಾ ದೈವಸ್ಥಾನಗಳಲ್ಲಿ ಕೊರಗಜ್ಜ ದೇವರಿಗೆ ಕಟ್ಟೆ, ಗುಡಿ ಇರುತ್ತದೆ. ಆದರೆ ಬೈಲೂರಿನಲ್ಲಿ ಪ್ರಾಕೃತಿಕವಾಗಿ ಮರದಡಿಯಲ್ಲಿದೆ. ಕೊರಗಜ್ಜನ ಕಲ ಇದೆ. ಪಕ್ಕದಲ್ಲೇ ನಾಗದೇವರ ಕಲವೂ ಇದೆ. ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ದೈವಸ್ಥಾನದ ವತಿಯಿಂದ ಮೂವತ್ತಕ್ಕೂ ಹೆಚ್ಚು ಹುಡುಗರು ಹುಲಿವೇಷ ಸೇವೆ ನೀಡಿದ್ದು ನಟ ರಕ್ಷಿತ್ ಶೆಟ್ಟಿಯೇ ಲೋಬಾನ ಹಾಕುವ ಪ್ರಕ್ರಿಯೆಗೆ ಬಂದಿದ್ದಾರೆ. ತಂಡದ ಜೊತೆ ಹೆಜ್ಜೆ ಹಾಕಿದ್ದಾರೆ. ಎರಡು ದಿನ ಹುಲಿವೇಷ ತಂಡದ ಜೊತೆಗೇ ಇದ್ದರು.
Advertisement
ಸ್ಥಳೀಯರಾದ ಅಶ್ವಥ್ ಮತ್ತು ಗಣೇಶ್ ಮಾತನಾಡಿ, ಉಳಿದವರು ಕಂಡಂತೆ ಚಿತ್ರದ ನಂತರ ನಮಗೆ ರಕ್ಷಿತ್ ತಂಡದ ಪರಿಚಯವಾಗಿದೆ. ಎಲ್ಲಾ ಚಿತ್ರಕ್ಕೂ ನಮ್ಮ ಹುಲಿವೇಷ ತಂಡದ ಯುವಕರು ನಟಿಸುತ್ತಾರೆ. ಆರ್ಥಿಕವಾಗಿಯೂ ದೈವಸ್ಥಾನಕ್ಕೆ ಸಹಾಯ ಮಾಡಿದ್ದಾರೆ ಎಂದರು. ಹುಲಿವೇಷದ ಕಲೆಯೂ ಈ ಕ್ಷೇತ್ರದಿಂದಲೇ ಇವರಿಗೆ ಸಿದ್ಧಿಸಿದ್ಯಂತೆ.
ಫಿಲ್ಮ್ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದ ರಿಷಬ್ ಶೆಟ್ಟಿ ಅಷ್ಟಮಿ ಮುಗಿದು ಎರಡನೇ ದಿನಕ್ಕೆ ಬೈಲೂರಿಗೆ ಬಂದಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿ ಹೋಗಿದ್ದಾರೆ. ಕೃಷ್ಣಜನ್ಮಾಷ್ಟಮಿಗೆ ಬರಬೇಕಿತ್ತು. ಚಿತ್ರದ ಆದರೆ ಒತ್ತಡದಲ್ಲಿ ಸಾಧ್ಯವಾಗಿಲ್ಲ. ಕೊರಗಜ್ಜನ ಕ್ಷೇತ್ರಕ್ಕೆ ಬಂದ ಮೇಲೆ ಮನಸ್ಸಿಗೆ ನೆಮ್ಮದಿಯಾಗಿದೆ ಎಂದು ಹೇಳಿದರು.
ಸಿನಿಮಾ ಚಿತ್ರೀಕರಣದ ನಡುವೆ ಸಮಸ್ಯೆಗಳಾದಗ, ವಿಘ್ನಗಳು ಬಂದಾಗ ರಕ್ಷಿತ್ ಮತ್ತು ರಿಷಬ್ ಬೈಲೂರು ಕೊರಗಜ್ಜ ದೈವಸ್ಥಾನಕ್ಕೆ ಹರಕೆ ಹೇಳಿ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದಾರೆ. ವಿಜ್ಞಾನ ಶಿಕ್ಷಣ ಎಷ್ಟೇ ಮುಂದೆ ಹೋಗಲಿ ತಂತ್ರಜ್ಞಾನ ಎಷ್ಟೇ ಬೆಳೆಯಲಿ, ನಂಬಿಕೆ ಎನ್ನುವುದು ಆಯಾಯ ಕಾಲಕ್ಕೆ ಎಷ್ಟೆಷ್ಟು ಬೇಕೋ ಅಷ್ಟಷ್ಟು ಉಳಿದುಕೊಂಡು ಬಂದಿದೆ ಎನ್ನುವುದಕ್ಕೆ ಇಂತಹ ಸಾಕಷ್ಟು ಸಾಕ್ಷಿಗಳು ಸಿಗುತ್ತವೆ.