– ಕೃಷ್ಣನ ಪೂಜಾಧಿಕಾರ ವಹಿಸಿಕೊಳ್ಳಲು ದಿನಗಣನೆ
ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಅದಮಾರು ಮಠದ ಕಿರಿಯ ಸ್ವಾಮೀಜಿ ಪುರಪ್ರವೇಶ ಮಾಡಿದ್ದಾರೆ. ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಸರ್ವಜ್ಞ ಪೀಠ ಏರುವ ಸ್ವಾಮೀಜಿಯನ್ನು ಉಡುಪಿ ನಗರ ಆದರದಿಂದ ಬರಮಾಡಿಕೊಂಡಿದೆ. ಈಶಪ್ರಿಯ ತೀರ್ಥರ ಪುರಪ್ರವೇಶ ಮೆರವಣಿಗೆ ಹೊಸ ಇತಿಹಾಸ ನಿರ್ಮಿಸಿತು. ಟ್ಯಾಬ್ಲೋ ಏರದೆ ಕಾಲ್ನಡಿಗೆಯಲ್ಲೇ ಈಶಪ್ರೀಯ ತೀರ್ಥ ಸ್ವಾಮೀಜಿ ನಗರ ಪ್ರವೇಶಿಸಿದರು.
ಉಡುಪಿ ಪರ್ಯಾಯ ಹಲವು ವೈಶಿಷ್ಟ್ಯಗಳು ಆಗರ. ಯಾವುದೇ ಲಿಖಿತ ಸಂವಿಧಾನ ಇಲ್ಲದಿದ್ದರೂ ಎಂಟ್ನೂರು ವರ್ಷಗಳಿಂದ ಕೃಷ್ಣ ದೇವರ ಪೂಜಾಧಿಕಾರ ಹಸ್ತಾಂತರ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಯುತ್ತಿರುವುದೇ ಒಂದು ವಿಸ್ಮಯ.
Advertisement
Advertisement
ಪಲಿಮಾರು ಮಠದಿಂದ ಈ ಬಾರಿ ಅದಮಾರು ಮಠಕ್ಕೆ ಕೃಷ್ಣನ ಪೂಜಾಧಿಕಾರ ಹಸ್ತಾಂತರ ಆಗಲಿದೆ. ಜನವರಿ 18 ಬೆಳಗ್ಗೆ ಪಲಿಮಾರು ಸ್ವಾಮೀಜಿಯಿಂದ ಅದಮಾರು ಮಠದ ಈಶಪ್ರಿಯ ತೀರ್ಥರು ಅಧಿಕಾರ ಪಡೆಯುತ್ತಾರೆ. ಈ ಮಹೋತ್ಸವಕ್ಕೂ ಮುನ್ನ ಪುರಪ್ರವೇಶ ನಡೆಯಿತು.
Advertisement
ನಗರದ ಜೋಡುಕಟ್ಟೆಯಿಂದ ಕೃಷ್ಣಮಠದವರಗೆ ನಡೆದ ಮೆರವಣಿಗೆಯಲ್ಲಿ ಎಂಬತ್ತಕ್ಕೂ ಅಧಿಕ ಸಾಂಸ್ಕೃತಿಕ ತಂಡಗಳು ಭಾಗವಹಿಸಿದವು. ವಿವಿಧ ರಾಜ್ಯದ ಕಲಾಪ್ರಾಕಾರಗಳು ಗೊಂಬೆಯಾಟ, ಹುಲಿವೇಷ, ಕೇರಳ ಚಂಡೆ, ಕಂಗೀಲು, ಪಂಚವಾದ್ಯ, ಕೋಲಾಟ, ಗರ್ಭಾ, ಬಾಂಗ್ಡಾ ನೃತ್ಯ ತಂಡಗಳು ರಾಜಬೀದಿಯಲ್ಲಿ ಸಾಗಿ ಬಂದು ಜಾತ್ರೆಯ ವಾತಾವರಣ ಸೃಷ್ಟಿಸಿದವು.
Advertisement
ದೇಶದ ವಿವಿಧ ತೀರ್ಥ ಕ್ಷೇತ್ರಗಳ ಪ್ರವಾಸ ಪೂರೈಸಿ ಬಂದ ಸ್ವಾಮೀಜಿ ಸಾಂಪ್ರದಾಯಿಕವಾಗಿ ಪುರಪ್ರವೇಶ ಮಾಡಿದರು. ಸ್ವಾಮೀಜಿಗಳು ಟ್ಯಾಬ್ಲೋ ಮೂಲಕ ಮೆರವಣಿಗೆಯಲ್ಲಿ ಬರೋದು ಮಾಮೂಲು, ಈಶಪ್ರಿಯ ತೀರ್ಥರು ಕಾಲ್ನಡಿಗೆಯಲ್ಲೇ ಸಾಗಿ ಬಂದರು. ಉಡುಪಿಯ ರಥಬೀದಿಯನ್ನು ಪ್ರವೇಶ ಮಾಡಿ, ಕೃಷ್ಣಮಠ, ಅದಮಾರು ಮಠವನ್ನು ಕೂಡಾ ಪ್ರವೇಶಿಸಿದರು.
ಈಶಪ್ರಿಯ ತೀರ್ಥರಿಗೆ ಹಿರಿಯ ಸ್ವಾಮೀಜಿ ವಿಶ್ವಪ್ರಿಯರು ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಹಾಗಾಗಿ ಇದೇ ಮೊದಲಬಾರಿಗೆ ಈಶಪ್ರಿಯತೀರ್ಥರು ಸರ್ವಜ್ಞ ಪೀಠ ಏರುತ್ತಿದ್ದಾರೆ. ಈ ಬಾರಿಯ ಪುರಪ್ರವೇಶ ಮೆರವಣಿಗೆಯಲ್ಲಿ ಸಚಿವರುಗಳಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಸೋಮಣ್ಣ ಶೋಭಾ ಕರಂದ್ಲಾಜೆ ಭಾಗವಹಿಸಿದ್ದರು. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮೆರವಣಿಗೆಯುದ್ದಕ್ಕೂ ಯುವಕರ ಗಮನಸೆಳದರು.