ಬೆಂಗಳೂರು: ಸನಾತನ ಧರ್ಮದ ಬಗ್ಗೆ ಮಾತನಾಡಿ ತುಷ್ಟೀಕರಣ ರಾಜಕೀಯ ಮಾಡುವುದು ಐಎನ್‌ಡಿಐಎ (INDIA) ಒಕ್ಕೂಟದ ಉದ್ದೇಶ ಎಂದು ಮಾಜಿ ಸಿಎಂ ಬೊಮ್ಮಾಯಿ (Basavaraj Bommai) ಉದಯ್ ಸ್ಟಾಲಿನ್ (Udhayanidhi Stalin) ಮತ್ತು ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯ್ ಸ್ಟಾಲಿನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಉದಯ್ ಸ್ಟಾಲಿನ್ ಹೇಳಿಕೆ ನೋಡಿದ್ದೇನೆ. ಸನಾತನ ಧರ್ಮದ ಬಗ್ಗೆ ಅವರ ಹೇಳಿಕೆ ಅವರ ಮನಸ್ಥಿತಿ ತೋರಿಸುತ್ತದೆ. ಸನಾತನ ಧರ್ಮದ ಬಗ್ಗೆ ಅವರು ಹೀಗೆ ಮಾತಾಡಿದ್ದು ಸರಿಯಲ್ಲ. ಸನಾತನ ಧರ್ಮ ಸರ್ವ ಜನ ಸುಖಿನೋ ಭವಂತು ಅನ್ನೋ ಮೂಲ ತತ್ವ ಒಳಗೊಂಡಿದೆ. ಸಕಲ ಜೀವಿಗಳಿಗೆ ಒಳ್ಳೆಯದು ಆಗಲಿ ಅನ್ನೋದು ಸನಾತನ ಧರ್ಮದ ಮೂಲ. ಇದನ್ನು ಅವರು ಜಾತಿಗೆ ಹೋಲಿಸಿ, ಸನಾತನ ಧರ್ಮ ಕಿತ್ತು ಹಾಕಬೇಕು ಅಂತ ಹೇಳಿದ್ದಾರೆ. ಇದು ಹಿಟ್ಲರ್ ಮೈಂಡ್‌ಸೆಟ್ ಎಂದು ಕಿಡಿಕಾರಿದರು.
Advertisement
Advertisement
ಈ ಹೇಳಿಕೆ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ. ಪ್ರಜಾಪ್ರಭುತ್ವದಲ್ಲಿ, ಸಂವಿಧಾನ ಪ್ರಕಾರವಾಗಿ ಯಾವುದೇ ಧರ್ಮ ವಿರೋಧ ಮಾಡುವ ಹಾಗೆ ಇಲ್ಲ. ಒಬ್ಬ ಸಚಿವನಾಗಿ ಹೀಗೆ ಮಾತಾಡೋದು ಸರಿಯಲ್ಲ. ಅವರನ್ನು ಕೂಡಲೇ ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು. ಇದನ್ನೂ ಓದಿ: ನಿಮಗೆ ತಾಕತ್, ಧಮ್ ಇದ್ರೆ ಇಸ್ಲಾಂ ಧರ್ಮದ ಬಗ್ಗೆ ಮಾತಾಡಿ: ಆಂದೋಲ ಶ್ರೀ
Advertisement
ಇಂಡಿಯಾ ಒಕ್ಕೂಟದ ಬಗ್ಗೆ ಕಿಡಿಕಾರಿದ ಅವರು, ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳಿಗೂ ಸ್ಪಷ್ಟತೆ ಇಲ್ಲ. ಭಾರತ ದೇಶದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಅಕ್ಕಪಕ್ಕ ಅನೇಕ ದೇಶಗಳು ಹುಟ್ಟಿಕೊಂಡಿವೆ. ಬೇರೆ ದೇಶಗಳಲ್ಲಿ ಧರ್ಮ ಸಂಘರ್ಷ ಇದೆ. ಆದರೆ ನಮ್ಮಲ್ಲಿ ಇಲ್ಲ. ಎಲ್ಲಾ ಧರ್ಮಗಳಿಗೂ ನಮ್ಮಲ್ಲಿ ಅವಕಾಶ ಇದೆ. ಇಂಡಿಯಾ ಒಕ್ಕೂಟ ಅಧಿಕಾರ ಹಿಡಿಯುವ ಸಲುವಾಗಿ ದೇಶದ ಅಖಂಡತೆ, ಏಕತೆ ಹಾಳಾದರೂ ಪರವಾಗಿಲ್ಲ ಅಂತ ಇದ್ದಾರೆ ಎಂದು ಕಿಡಿಕಾರಿದರು.
Advertisement
ಸಮಾನತೆಯ ಸಾಮರಸ್ಯದ ಸಮಾಜವನ್ನು ಕದಡಿ ತುಷ್ಟೀಕರಣ ರಾಜಕೀಯ ಮಾಡುವ ಸಲುವಾಗಿ, ಅಧಿಕಾರ ಹಿಡಿಯುವ ಕೆಲಸ ಮಾಡಲು ಮುಂದಾಗಿದ್ದಾರೆ. ಇಂತಹವರನ್ನು ಸಪೋರ್ಟ್ ಮಾಡುತ್ತಾರೆ. ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಭಾರತದ ಜನ ಇಂತಹದ್ದನ್ನು ಹಿಂದೆಲ್ಲಾ ನೋಡಿದ್ದಾರೆ. ಇದಕ್ಕೆಲ್ಲ ನಮ್ಮ ಜನ ಅವಕಾಶ ಕೊಡಲ್ಲ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ಇನ್ನೂ ಬಚ್ಚ – ಮುತಾಲಿಕ್ ಕಿಡಿ
Web Stories