LatestMain PostNational

ಶಿವಸೇನೆಯನ್ನು ನಾಶಕ್ಕೆ ಮಾಡಿದ ಎಲ್ಲಾ ಪ್ರಯತ್ನವು ವಿಫಲ: ಉದ್ಧವ್ ಠಾಕ್ರೆ

ಮುಂಬೈ: ಶಿವಸೇನೆಯನ್ನು ನಾಶ ಮಾಡಲು ಹಲವು ಪ್ರಯತ್ನಗಳನ್ನು ಮಾಡಲಾಯಿತು. ಆದರೆ ಅವೆಲ್ಲವೂ ವ್ಯರ್ಥವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆಯನ್ನು ನಾಶ ಮಾಡಲು ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಪ್ರಯತ್ನಿಸಿದವರೇ ಮುಗಿದಿದ್ದಾರೆ. ಶಿವಸೇನೆಯನ್ನು ನಾಶಮಾಡಲು ಅಸಾಧ್ಯ ಎಂದರು.

ಪಕ್ಷವನ್ನು ಸದೃಢವಾಗಿಡಲು ನಿಷ್ಠಾವಂತ ಶಿವಸೈನಿಕರ ಶ್ರಮ ಮತ್ತು ತ್ಯಾಗವನ್ನು ಶ್ಲಾಘಿಸಿದರು. ಇದರಿಂದಾಗಿ ಶಿವಸೇನೆಯ ಉದಯವನ್ನು ಎತ್ತಿ ತೋರಿಸುತ್ತದೆ ಮತ್ತು ಸಾಮಾನ್ಯ ಶಿವಸೈನಿಕರಿಗೆ ನಿಷ್ಠೆ ಎಂದರೆ ಏನು ಎಂಬುದು ಎಲ್ಲರಿಗೂ ತಿಳಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾವು ಮತ್ತೆ ಅಧಿಕಾರಕ್ಕೆ ಬಂದ್ರೆ 7 ಕೆಜಿ ಅಲ್ಲ, ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ: ಸಿದ್ದು

ಶಿವಸೇನೆಯ ಥಾಣೆ ಜಿಲ್ಲಾ ಘಟಕದ ಮುಖ್ಯಸ್ಥರಾಗಿದ್ದ ದಿಘೆ ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ತಳಮಟ್ಟದ ನಾಯಕರಾಗಿದ್ದರು. ಅವರು ಧರ್ಮವೀರ್ ಎಂದು ಜನಪ್ರಿಯರಾಗಿದ್ದರು ಎಂದು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು. ಇದನ್ನೂ ಓದಿ: ಸೀರೆ ಹಂಚಿಕೆವಾಗ ನುಕುನುಗ್ಗಲು: ಮಗುವನ್ನು ಎತ್ತಿಕೊಂಡು ಕಾಪಾಡಿ ಎಂದು ಕಿರುಚಾಡಿದ ಮಹಿಳೆ

Leave a Reply

Your email address will not be published.

Back to top button