ಮುಂಬೈ: ಬಿಜೆಪಿ ಹಿಂದುತ್ವದ ಮೇಲೆ ಪೇಟೆಂಟ್ ಹೊಂದಿಲ್ಲ. ಅವರಿಗೆ ಕೇಸರಿ ಮತ್ತು ಹಿಂದುತ್ವವು ಅಧಿಕಾರವನ್ನು ಸಾಧಿಸಲು ಸಹಾಯ ಮಾಡುತ್ತಿದೆ ಎಂದು ಕೇಂದ್ರ ತೋರಿಸಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮನು ಹುಟ್ಟದಿದ್ದರೇ ಬಿಜೆಪಿ ಯಾವ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿತ್ತು ಎನ್ನುವುದು ನನಗೆ ಆಶ್ಚರ್ಯವಾಗುತ್ತದೆ ಎಂದ ಅವರು, ಬಿಜೆಪಿಯು ಸಮಸ್ಯೆಗಳಿಂದ ದೂರವಿರಲು ಧರ್ಮ, ಧರ್ಮಗಳ ಮಧ್ಯೆ ದ್ವೇಷವನ್ನು ಹರಡುವ ಬಗ್ಗೆ ಮಾತನಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಶಿವಸೇನಾ ಯಾವಾಗಲೂ ಕೇಸರಿ ಹಾಗೂ ಹಿಂದುತ್ವದ ಸಿದ್ಧಾಂತಕ್ಕೆ ಬದ್ಧವಾಗಿರುತ್ತದೆ ಎಂದ ಅವರು, ಬಿಜೆಪಿಗಿಂತ ಭಿನ್ನದ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಭಾರತೀಯ ಜನಸಂಘ ವಿಭಿನ್ನ ಯೋಚನೆಯನ್ನು ಹೊಂದಿದೆ ಎಂದರು. ಇದನ್ನೂ ಓದಿ: ದೆಹಲಿ ಜೆಎನ್‍ಯುನಲ್ಲಿ ಮತ್ತೆ ರಣಾಂಗಣ – ಮಾಂಸಾಹಾರ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ
ಕೇಸರಿ ಮತ್ತು ಹಿಂದುತ್ವವು ದೆಹಲಿಯವರೆಗೆ ಮುನ್ನಡೆಸುತ್ತದೆ ಎನ್ನುವುದನ್ನು ಬಿಜೆಪಿಗೆ ತೋರಿಸಿಕೊಟ್ಟವರು ಬಾಳ್ ಠಾಕ್ರೆಯಾಗಿದ್ದಾರೆ. ಬಾಳ್ ಠಾಕ್ರೆ ಅವರನ್ನು ಗೌರವಿಸುವುದಾಗಿ ಬಿಜೆಪಿ ಹೇಳಿಕೊಂಡರೆ, ಮುಂಬರುವ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿವಂಗತ ಶಿವಸೇನಾ ಸಂಸ್ಥಾಪಕರ ಹೆಸರಿಡುವ ಪ್ರಸ್ತಾಪವನ್ನು ಆ ಪಕ್ಷ ಏಕೆ ವಿರೋಧಿಸುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಏಪ್ರಿಲ್ 11ರಿಂದ ಕಲಬುರಗಿಯಲ್ಲಿ ನಾಲ್ಕು ದಿನ ಸಂವಿಧಾನ ನಾಟಕ ಪ್ರದರ್ಶನ