LatestMain PostNational

40 ತಲೆಯ ರಾವಣನು ರಾಮನ ಬಿಲ್ಲು, ಬಾಣ ಕಿತ್ತುಕೊಂಡ : ಶಿಂಧೆಗೆ ಉದ್ಧವ್ ಠಾಕ್ರೆ ತಿರುಗೇಟು

ಮುಂಬೈ: 40 ತಲೆಯ ರಾವಣನು ಶ್ರೀರಾಮನ ಧನಸ್ಸನ್ನು ಕಿತ್ತುಕೊಂಡಿದ್ದಾನೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ (Eknath Shinde) ವಿರುದ್ಧ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ (Uddhav Thackeray) ತಿರುಗೇಟು ನೀಡಿದರು.

ಮುಂಬರುವ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಶಿವಸೇನೆಯ (Shiv Sena) ಬಿಲ್ಲು ಬಾಣದ ಚಿಹ್ನೆಯನ್ನು ಪಕ್ಷದ ಎರಡೂ ಬಣಗಳು ಬಳಸದಂತೆ ಚುನಾವಣಾ ಆಯೋಗ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮರಾಠಿ ಜನರ ಕಲ್ಯಾಣಕ್ಕಾಗಿ ಮಹಾರಾಷ್ಟ್ರದ ಹಿತಾಸಕ್ತಿಯಿಂದ ಶಿವಸೇನೆಯನ್ನು ರಚಿಸಲಾಗಿದೆ. ಆದರೆ ನಾನು ಚುನಾವಣಾ ಆಯೋಗದಿಂದ ಈ ನಿರ್ಧಾರವನ್ನು ನಿರೀಕ್ಷಿಸಿರಲಿಲ್ಲ. ನಾನು ನ್ಯಾಯಾಂಗವನ್ನು ನಂಬುತ್ತೇನೆ. ನಮಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಇದೆ. ರಾವಣನು ಶ್ರೀರಾಮನ ಧನಸ್ಸನ್ನು ಕಿತ್ತುಕೊಂಡಿದ್ದಾನೆ ಎಂದರು.

ನಾನು ದುಃಖಿತನಾಗಿದ್ದರೂ ಕೋಪಗೊಂಡಿದ್ದೇನೆ. ಏಕೆಂದರೆ ನೀವು ನಿನ್ನ ತಾಯಿಯ ಎದೆಗೆ ಚಾಕುವಿನಿಂದ ಇರಿದಿದ್ದೀರಿ. ನಿಮಗೆ ಧೈರ್ಯವಿದ್ದರೆ ಬಾಳಾಸಾಹೇಬರ ಹೆಸರನ್ನು ಬಳಸಬೇಡಿ ಎಂದು ಶಿಂಧೆಗೆ ಸವಾಲು ಹಾಕಿದರು. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಕೊಡುಗೆ ನೆನೆಯದಿದ್ದರೆ ನರಕಕ್ಕೆ ಹೋಗ್ತೀರಾ: ಬಿ.ಎಲ್. ಸಂತೋಷ್‌

YouTube video

ಚುನಾವಣಾ ಆಯೋಗ ನೀಡುರುವ ಈ ಆದೇಶವು ಶಿಂಧೆ ಗುಂಪಿನವರಿಗಿಂತಲೂ ಅವರ ಹಿಂದಿರುವ ಶಕ್ತಿಗೆ ಹೆಚ್ಚು ಸಂತೋಷವಾಗಿರಬೇಕು ಎಂದ ಅವರು, ಶಿವಸೇನೆಯ ಒಗ್ಗಟ್ಟನ್ನು ಮುರಿದು ನಿಮಗೆ ಏನು ಸಿಕ್ಕಿತು? ಶಿವಸೇನೆ ಎಂಬ ಹೆಸರಿಗೂ ನಿಮಗೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಬಿಜೆಪಿ ಹೇಗೆ ಎನ್ನುವುದು ಶಿಂಧೆ ಬಣಕ್ಕೂ ಅರ್ಥವಾಗುತ್ತಿಲ್ಲ. ಬಿಜೆಪಿ ಶಿಂಧೆ ಬಣವನ್ನು ಬಳಸಿಕೊಳ್ಳುತ್ತಿದೆ. ಅವರ ಬಳಕೆ ಮುಗಿದ ನಂತರ ಅವರನ್ನು ಮದ್ಯದ ಖಾಲಿ ಬಾಟಲಿಯಂತೆ ಎಸೆಯುತ್ತವೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಪೋಸ್ಟ್‌ ಮಾಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು

Live Tv

Leave a Reply

Your email address will not be published. Required fields are marked *

Back to top button