Maharashtra political crisis: ಉದ್ಧವ್‌ ಠಾಕ್ರೆ ಸರ್ಕಾರ ಮರುಸ್ಥಾಪಿಸಲು ಸಾಧ್ಯವಿಲ್ಲ – ಶಿಂಧೆ ಬಣಕ್ಕೆ ಸುಪ್ರೀಂ ರಿಲೀಫ್‌

Public TV
1 Min Read
Eknath Shinde Uddhav Thackeray

ನವದೆಹಲಿ: ಮಹಾರಾಷ್ಟ್ರ (Maharashtra Political Crisis) ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮತ್ತು ಅವರ ಬಣದ 15 ಶಾಸಕರನ್ನು ಅನರ್ಹತೆಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದೆ.  ಈ ತೀರ್ಪಿನಿಂದಾಗಿ ಸಿಎಂ ಶಿಂಧೆ ಬಣಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ.

ಠಾಕ್ರೆ ಅವರ ಸರ್ಕಾರವನ್ನು ಮರುಸ್ಥಾಪಿಸುವ ವಿನಂತಿಯನ್ನು ಸಹ ಸುಪ್ರೀಂ ತಿರಸ್ಕರಿಸಿದೆ. ಉದ್ದವ್ ಠಾಕ್ರೆ ಬಹುಮತ ಸಾಬೀತು ಪರೀಕ್ಷೆ ಎದುರಿಸಿಲ್ಲ. ಅವರು ರಾಜೀನಾಮೆ ನೀಡಿದ ಕಾರಣ ಯಥಾಸ್ಥಿತಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆಗೆ ಕರೆದಿರುವುದು ಸರಿಯಾಗಿದೆ ಎಂದು ಕೋರ್ಟ್‌ ತನ್ನತೀರ್ಪಿನಲ್ಲಿ ಹೇಳಿದೆ. ಓದಿ: Delhi Metro: ಮೆಟ್ರೋ ರೈಲಿನಲ್ಲಿ ಲಿಪ್‌ ಲಾಕ್‌ ಮಾಡಿದ ಪ್ರೇಮಿಗಳು – ವೀಡಿಯೋ ವೈರಲ್‌

supreme court verdict

ಆದಾಗ್ಯೂ, ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಪೀಕರ್‌ ನಡೆಗೆ ಸುಪ್ರೀಂ ಅಸಮಾಧಾನ ವ್ಯಕ್ತಪಡಿಸಿದೆ. ಉದ್ಧವ್‌ ಠಾಕ್ರೆ ಅವರು ಬಹುಪಾಲು ಶಾಸಕರ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎಂದು ತೀರ್ಮಾನಿಸುವಲ್ಲಿ ರಾಜ್ಯಪಾಲರು ತಪ್ಪು ಎಸಗಿದ್ದಾರೆ. ಶಿಂಧೆ ಬಣಕ್ಕೆ ಸಹಾಯ ಮಾಡುವ ನಿರ್ಧಾರಗಳನ್ನು ತೆಗೆದುಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ  ಸರಿಯಾಗಿ ನಡೆದುಕೊಂಡಿಲ್ಲ ಎಂದು ತಿಳಿಸಿದೆ.

ರಾಜಕೀಯ ಪಕ್ಷ ನೇಮಿಸುವ ವಿಪ್‌ಗೆ ಮಾತ್ರ ಸ್ಪೀಕರ್ ಮಾನ್ಯತೆ ನೀಡಬೇಕು. ಗೊಗವಾಲೆ (ಶಿಂಧೆ ಗುಂಪು) ಅವರನ್ನು ಶಿವಸೇನಾ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಿದ ಸ್ಪೀಕರ್ ನಿರ್ಧಾರ ಕಾನೂನುಬಾಹಿರ. ಪಕ್ಷದ ಆಂತರಿಕ ಸಮಸ್ಯೆ ಬಗೆಹರಿಸಲು ಬಹುಮತ ಸಾಬೀತುಪಡಿಸುವುದು ಮಾಧ್ಯಮವಾಗಿ ಬಳಸಬಾರದು. ಸಂವಿಧಾನ ಅಥವಾ ಕಾನೂನು ರಾಜ್ಯಪಾಲರಿಗೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಮತ್ತು ಅಂತರ್ ಪಕ್ಷ ಅಥವಾ ಪಕ್ಷದ ಆಂತರಿಕ ವಿವಾದಗಳಲ್ಲಿ ಪಾತ್ರ ವಹಿಸಲು ಅಧಿಕಾರ ನೀಡುವುದಿಲ್ಲ. ಮಹಾರಾಷ್ಟ್ರ ರಾಜ್ಯಪಾಲರ ವಿವೇಚನಾಧಿಕಾರವು ಸಂವಿಧಾನಿಕವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಇದನ್ನೂ ಓದಿ: ಶಾಲೆಯ ಬಳಿ ಗ್ಯಾಸ್ ಲೀಕ್ – ಹಲವು ಮಕ್ಕಳು ಅಸ್ವಸ್ಥ

 

ಮಹಾರಾಷ್ಟ್ರ ರಾಜ್ಯಪಾಲರ ವಿವೇಚನಾಧಿಕಾರವು ಭಾರತದ ಸಂವಿಧಾನಕ್ಕೆ ಅನುಗುಣವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

Share This Article