ಮುಂಬೈ: ಪಕ್ಷದ ಸಂಸದರ ಒತ್ತಡಕ್ಕೆ ಮಣಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ.
ಉದ್ಧವ್ ಠಾಕ್ರೆ ಅವರ ‘ಮಾತೋಶ್ರೀ’ ನಿವಾಸಕ್ಕೆ ಶಿವಸೇನೆಯ ಸದಸ್ಯರು ಸೋಮವಾರ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಶಿವಸೇನೆಯ ಹಲವು ಸದಸ್ಯರು ಉದ್ಧವ್ ಅವರನ್ನು ಮುರ್ಮು ಅವರಿಗೆ ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ. ಈ ಹಿನ್ನೆಲೆ ಅವರು ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಒಂದು ವೇಳೆ ಇದು ನಿಜವಾದರೆ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧೆ ಮಾಡಿರುವ ಯಶವಂತ್ ಸಿನ್ಹಾ ಅವರಿಗೆ ಭಾರೀ ಹಿನ್ನಡೆಯಾಗಲಿದೆ. ಇದನ್ನೂ ಓದಿ: ಉದಯಪುರ ಹತ್ಯೆ ಬಗ್ಗೆ ಪೋಸ್ಟ್ – ಬಾಲಕಿಗೆ ಕೊಲೆ, ಅತ್ಯಾಚಾರ ಬೆದರಿಕೆ ಹಾಕಿದ ಜಮ್ಮು, ಕಾಶ್ಮೀರದ ವ್ಯಕ್ತಿ
Advertisement
Advertisement
ಸಭೆಯಲ್ಲಿ ನಡೆದಿದ್ದೇನು?
ಮಹಾರಾಷ್ಟ್ರದ ಶಿವಸೇನೆಯ 18 ಲೋಕಸಭಾ ಸಂಸದರಲ್ಲಿ 13 ಮಂದಿ ರಾಷ್ಟ್ರಪತಿ ಚುನಾವಣೆಯ ಪ್ರಮುಖ ಸಭೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ ಹೆಚ್ಚಿನವರು ಉನ್ನತ ಸಾಂವಿಧಾನಿಕ ಹುದ್ದೆಗೆ ಬಿಜೆಪಿ ನೇತೃತ್ವದ ಎನ್‍ಡಿಎ ಆಯ್ಕೆಯನ್ನು ಬೆಂಬಲಿಸಲು ಸಲಹೆ ನೀಡಿದರು. ಆದರೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರು ಯಶವಂತ್ ಸಿನ್ಹಾ ಅವರ ಬೆಂಬಲಿಸಬೇಕು ಎಂದು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
Advertisement
Advertisement
ಕೆಲವು ಪಕ್ಷದ ಶಾಸಕರು ಮತ್ತು ಮುಖಂಡರು ಅದರಲ್ಲಿಯೂ ವಿಶೇಷವಾಗಿ ಆದಿವಾಸಿ ಸಮುದಾಯದವರು ಮುರ್ಮು ಅವರನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.