ಬೆಂಗಳೂರು: ಮೈಸೂರು ಉದಯಗಿರಿ ಪೊಲೀಸ್ ಠಾಣೆ (Udayagiri Police Station) ದಾಳಿ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಮೈಸೂರು ಡಿಸಿ, ಎಸ್ಪಿ ಹಾಗೂ ಮೈಸೂರು ಪೊಲೀಸ್ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ದಾರೆ.
Advertisement
ಡಿಜಿ, ಐಜಿ, ಡಿಸಿ, ಎಸ್ಪಿ ಹಾಗೂ ಕಮೀಷನರ್ ರಿಂದ ಇಡಿ ಘಟನೆಯ ಸಂಪೂರ್ಣ ಮಾಹಿತಿ ತಿಳಿದುಕೊಂಡು ಕೆಲವೊಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಇಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ. ಘಟನೆಯಲ್ಲಿ ಭಾಗಿ ಆದವರನ್ನು ಮುಲಾಜಿಲ್ಲದೇ ಬಂಧಿಸಿ ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಉದಯಗಿರಿ ಗಲಭೆ ಕೇಸ್ – ದಾಂಧಲೆ ಮಾಡುವವರ ವಿರುದ್ಧ ಬುಲ್ಡೋಜರ್ ಕ್ರಮ ಆಗುತ್ತಾ? – ಪರಮೇಶ್ವರ್ ಹೇಳಿದ್ದೇನು?
Advertisement
Advertisement
ಪೋಸ್ಟ್ ಮಾಡಿದ ವ್ಯಕ್ತಿ ಮೇಲೆ ಎಫ್‌ಐಆರ್ ದಾಖಲು ಮಾಡುವಾಗ ತಡವಾಗಿತ್ತು ಎಂಬ ವಿಚಾರದ ಬಗ್ಗೆಯೂ ಸಿಎಂ ವಿವರಣೆ ಕೇಳಿದ್ದಾರೆ. ಪೊಲೀಸ್ ಲೋಪ ಆಗಿದೆ ಎಂಬ ಆರೊಪದ ಬಗ್ಗೆಯೂ ವಿವರಣೆ ಕೇಳಿದ ಸಿಎಂ ಅದೆಲ್ಲದರ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ. ಇಲಾಖೆ ಮಟ್ಟದಲ್ಲಿ ಆಗಲಿ ಘಟನೆಗೆ ಕಾರಣ ಆದವರಾಗಲಿ ಯಾರು ತಪ್ಪು ಮಾಡಿದ್ದರು ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಉದಯಗಿರಿಯಲ್ಲಿ ಸಲ್ಪ ಯಾಮಾರಿದ್ರೂ ಬೀಳುತಿತ್ತು ಪೊಲೀಸರ ಹೆಣಗಳು – ಎಫ್‌ಐಆರ್‌ನಲ್ಲಿದೆ ಸ್ಫೋಟಕ ವಿಚಾರ
Advertisement
ಸಭೆಯಲ್ಲಿ ಸಿಎಂ ಸೂಚನೆಗಳು
* ತಪ್ಪುತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು.
* ಕಾನೂನು ಕೈಗೆ ಎತ್ತಿಕೊಂಡ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು.
* ಅಮಾಯಕರಿಗೆ ತೊಂದರೆ ಕೊಡಬಾರದು.
* ಮುಂದೆ ಇಂಥಾ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು.
* ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡಿದ ಎಲ್ಲರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು.
* ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರು, ಇದಕ್ಕೆ ಪ್ರಚೋದನೆ ನೀಡಿದ ಎಲ್ಲರನ್ನೂ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಿ.