ಬಿಗ್ ಬಾಸ್ ಓಟಿಟಿ ಪ್ರೇಕ್ಷಕರ ವಲಯದಲ್ಲಿ ಸಖತ್ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಸೀಸನ್ 9ಗೆ ದಿನಗಣನೆ ಕೂಡ ಶುರುವಾಗಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ರಂಗು ಹೆಚ್ಚುತ್ತಿದೆ. ಈ ನಡುವೆ ಸ್ಪರ್ಧಿ ಉದಯ್ ಸೂರ್ಯ ಮೇಲೆ ಮಹಿಳಾ ಸ್ಪರ್ಧಿಗಳಿಂದ ಆರೋಪ ಕೇಳಿ ಬರುತ್ತಿದೆ. ಸದ್ಯ ಮನೆಯಲ್ಲಿ ಈ ಕುರಿತು ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.
Advertisement
ದೊಡ್ಮನೆ ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಟಾಸ್ಕ್ ಇದ್ದೇ ಇರುತ್ತದೆ. ಎಂದಿನಂತೆ ಅಕ್ಷತಾ ಅವರು ಒಂದು ಫಿಸಿಕಲ್ ಟಾಸ್ಕ್ ಮುಗಿಸಿ ಆಗತಾನೇ ಬಂದಿದ್ದರು. ಈ ವೇಳೆ ಅವರನ್ನು ಉದಯ್ ಸೂರ್ಯ ಹಿಂಬದಿಯಿಂದ ಹಗ್ ಮಾಡಿದ್ದಾರೆ. ಬಳಿಕ ಕಿವಿಯ ಬಳಿ ಕಿಸ್ ಮಾಡಿದರು. ಈ ಘಟನೆ ಬಗ್ಗೆ ಅಕ್ಷತಾ ಕೊಂಚ ಸಮಯ ಬಿಟ್ಟು ಉದಯ್ ಬಳಿ ಮಾತನಾಡಿದ್ದಾರೆ. ನೀವು ಆ ರೀತಿ ಹಗ್ ಮಾಡಬೇಡಿ. ನೋಡುವವರಿಗೆ ಅದು ಬೇರೆಯ ರೀತಿ ಕಾಣುತ್ತದೆ. ಇನ್ಮುಂದೆ ಆ ರೀತಿ ಮಾಡಬೇಡಿ ಎಂದು ಹೇಳಿದ್ದರು. ಈ ವೇಳೆ ಉದಯ್ ಕೊಂಚ ಸೈಲೆಂಟ್ ಆದರು. ಇದನ್ನೂ ಓದಿ:ರಾಜ್ಯಪಾಲರಾಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?
Advertisement
Advertisement
ಇನ್ನು ಸಾನ್ಯಾ ಅಯ್ಯರ್ ಮತ್ತು ನಂದು ಮಧ್ಯೆಯೂ ಇದೇ ವಿಚಾರ ಚರ್ಚೆ ಮಾಡಿದ್ದಾರೆ. ಉದಯ್ ಹಿಂದಿನಿಂದ ಬಂದು ಹಗ್ ಮಾಡಿ, ಕಿವಿಗೆ ಕಿಸ್ ಮಾಡುತ್ತಾರೆ. ಹಾಗೆ ಮಾಡಿದಾಗ ಎಷ್ಟು ಅನ್ ಕಂಪರ್ಟೆಬಲ್ ಫೀಲ್ ಆಗುತ್ತದೆ. ನನಗೆ ಮೊನ್ನೆ ಕೋಪವೇ ಬಂತು. ಎಲ್ಲರೂ ಇದ್ದಾರೆ ಎಂದು ನಾನು ರಿಯಾಕ್ಟ್ ಮಾಡಲಿಲ್ಲ ಎಂದು ಸಾನ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನಂದು ಕೂಡ ಸಾಥ್ ನೀಡಿದರು ಅವನು ನನಗೂ ಮೊನ್ನೆ ಅದೇ ರೀತಿ ಮಾಡಿದ್ದ. ಜಶ್ವಂತ್ ಎದುರೇ ಆ ರೀತಿ ಮಾಡಿದ ಎಂದರು ನಂದು ಕೂಡ ದೂರಿದರು. ಉದಯ್ ಸೂರ್ಯ ಅವರು ಮನೆಯ ಮಹಿಳಾ ಸ್ಪರ್ಧಿಗಳ ಜತೆ ನಡೆದುಕೊಳ್ಳುವ ರೀತಿಗೆ ವಿರೋಧ ವ್ಯಕ್ತವಾಗಿದೆ. ಇನ್ನು ಈ ಸಂಚಿಕೆ ಶನಿವಾರದಂದು ಪ್ರಸಾರವಾಗಲಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯಲ್ಲಿ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.