ನವದೆಹಲಿ: ಕೋಟಕ್ ಮಹೀಂದ್ರಾ ಬ್ಯಾಂಕ್‌ನ (Kotak Mahindra Bank) ಸಂಸ್ಥಾಪಕ ಮತ್ತು ಸಿಇಒ ಉದಯ್ ಕೋಟಕ್ (Uday Kotak) ಅವರ ಪುತ್ರ ಜೇ ಕೋಟಕ್ ಅವರು 2015ರ ಫೆಮಿನಾ ಮಿಸ್ ಇಂಡಿಯಾ ವಿಜೇತೆ ಅದಿತಿ ಆರ್ಯ (Aditi Arya) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Aditi, my fiancée, completed her MBA from Yale University today. Immensely proud of you @AryaAditi pic.twitter.com/xAdcRUFB0C
— Jay Kotak (@jay_kotakone) May 24, 2023
Advertisement
ಅದಿತಿ ಆರ್ಯ ಅವರು ಯೇಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಫೋಟೋವನ್ನ ಜೇ ಕೋಟಕ್ (Jay Kotak) ತಮ್ಮ ಟ್ವಿಟರ್ನಲ್ಲಿ ಹಂಚಿಕೊಳ್ಳವ ಮೂಲಕ ತಮ್ಮ ಸಂಬಂಧದ ಆರಂಭದ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ರಾಗಿಣಿ ಐಎಎಸ್ ವರ್ಸಸ್ ಐಪಿಎಸ್: ಇದು ನೈಜ ಘಟನೆಯ ಚಿತ್ರ
Advertisement
ಅದಿತಿ ಆರ್ಯ ಪದವಿ ಪಡೆದಿರುವ ಫೋಟೋ ಹಂಚಿಕೊಂಡು ಅವರಿಗೆ ಅಭಿನಂದಿಸಿದ್ದಾರೆ. ʻಅದಿತಿ, ನನ್ನ ಫಿಯಾನ್ಸಿ, ಯೇಲ್ ವಿಶ್ವವಿದ್ಯಾನಿಲಯದಿಂದ ತನ್ನ MBA ಪೂರ್ಣಗೊಳಿಸಿದ್ದಾಳೆ, ನಿಮ್ಮ ಬಗ್ಗೆ ಅಪಾರ ಹೆಮ್ಮೆʼ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಕಳೆದ ವರ್ಷ, ಅವರಿಬ್ಬರೂ ಪ್ಯಾರಿಸ್‌ನ ಐಫೆಲ್ ಟವರ್‌ನ ಹೊರಗೆ ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಅವರ ನಿಶ್ಚಿತಾರ್ಥದ ವದಂತಿ ಕಾರಣವಾಗಿತ್ತು. ಆದರೆ, ಇದುವರೆಗೂ ಅವರಿಬ್ಬರೂ ನಿಶ್ಚಿತಾರ್ಥದ ಖಚಿತಪಡಿಸಿರಲಿಲ್ಲ. ಇದನ್ನೂ ಓದಿ: ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ
ಅದಿತಿ ಆರ್ಯ ದೆಹಲಿ ವಿಶ್ವವಿದ್ಯಾಲಯದ ಶಾಹೀದ್ ಸುಖದೇವ್ ಕಾಲೇಜ್ ಆಫ್ ಬ್ಯುಸಿನೆಸ್ ಸ್ಟಡೀಸ್‌ನ ಪದವೀಧರರಾಗಿದ್ದು, ಅರ್ನ್ಸ್ಟ್ ಮತ್ತು ಯಂಗ್‌ನಲ್ಲಿ ಸಂಶೋಧನಾ ವಿಶ್ಲೇಷಕರಾಗಿದ್ದಾರೆ. 2015ರಲ್ಲಿ, ಅವರು ಸೌಂದರ್ಯ ಸ್ಪರ್ಧೆಯ 52ನೇ ಆವೃತ್ತಿಯಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟ ಪಡೆದಿದ್ದರು. ಯೇಲ್ ವಿಶ್ವವಿದ್ಯಾಲಯಕ್ಕೆ ಸೇರಲು ಯುಎಸ್‌ಗೆ ತೆರಳುವುದಕ್ಕೂ ಮುನ್ನ ಹಿಂದಿ ಹಾಗೂ ತೆಲುಗು ಚಲನಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು.
ಜೇ ಕೋಟಕ್ ಅವರು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಮಾಡಿದರು. ನಂತರ, ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ MBA ಮುಗಿಸಿ. ಪ್ರಸ್ತುತ ಕೋಟಕ್ನ 811 ನ ಉಪಾಧ್ಯಕ್ಷರಾಗಿದ್ದಾರೆ. ಇದು ಕೋಟನ್‌ನ ಮೊದಲ ಡಿಜಿಟಲ್ ಮೊಬೈಲ್ ಬ್ಯಾಂಕ್ ಆಗಿದೆ.