ಬೆಂಗಳೂರು: ಜಲಸಂನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನೆಯ ಪಕ್ಕದಲ್ಲಿಯೇ ಬರೋಬ್ಬರಿ ನೂರು ಕೋಟಿ ರೂ. ವೆಚ್ಚದಲ್ಲಿ ಕಿಂಗ್‍ಪಿನ್ ಉದಯ್ ಗೌಡ ಬಂಗಲೆ ಕಟ್ಟಿಸುತ್ತಿದ್ದಾನೆ.
ಸಮ್ಮಿಶ್ರ ಸರ್ಕಾರ ಬುಡವನ್ನೇ ಅಲ್ಲಾಡಿಸುದಕ್ಕೆ ಯತ್ನ ಮಾಡಿದ ಆರೋಪದಲ್ಲಿ, ದೇಶಬಿಟ್ಟು ತಲೆಮರೆಸಿಕೊಂಡಿರುವ ಕಿಂಗ್‍ಪಿನ್ ಉದಯ್ ಗೌಡ ನನ್ನು ಹುಡುಕಲು ಪೊಲೀಸರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ದೋಸ್ತಿ ಸರ್ಕಾರದ ರೂವಾರಿ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರದ ಮನೆ ಪಕ್ಕದಲ್ಲೇ, ಕಿಂಗ್‍ಪಿನ್ ಉದಯ್‍ಗೌಡ ಐಷಾರಾಮಿ ಬಂಗಲೆ ನಿರ್ಮಾಣ ಮಾಡುತ್ತಿದ್ದಾನೆ. ಈ ಬಂಗಲೆಯ ಒಟ್ಟು ಪ್ಲಾನಿಂಗ್ ಬರೋಬ್ಬರಿ ನೂರು ಕೋಟಿಯಂತೆ. ಈ ಬಂಗಲೆಯ ಮೇಲೆ ಹೆಲಿಪ್ಯಾಡ್ ನಿರ್ಮಾಣದ ಕೆಲಸ ಕೂಡ ಬರದಿಂದ ಸಾಗಿದೆ.
Advertisement
Advertisement
ಬೆಂಗಳೂರಿನ ಮಲ್ಲೇಶ್ವರಂನ ಲಿಂಕ್ ರಸ್ತೆಯ ಬಳಿ ಗೀರಿಗೌಡ ಅನ್ನೋರ ಬಳಿ ಫೈನಾನ್ಸ್ ಆಫೀಸಿಗೆ ಅಂತ 2015 ರಲ್ಲಿ ಬಾಡಿಗೆ ಪಡೆದಿದ್ದನು. ತಿಂಗಳಿಗೆ 32 ಸಾವಿರ ಬಾಡಿಗೆ ಕೊಡಬೇಕಿದ್ದ ಉದಯ್ ಗೌಡ, ತನ್ನ ಹವಾ ಬೆಳೆದಂತೆಲ್ಲಾ ಬಿಲ್ಡಿಂಗ್ ಓನರ್ ಗಿರಿಗೌಡಗೆ ಬೆದರಿಕೆ ಹಾಕಲು ಶುರುಮಾಡಿದ್ದನು. ಒಂದು ದಿನ ಬಾಡಿಗೆ ಕೇಳುವುದಕ್ಕೆ ಹೋಗಿದ್ದ ಗಿರಿಗೌಡನ ಮೇಲೆಯೇ ತನ್ನ ಪಟಾಲಂನ ಬಿಟ್ಟು ಹಲ್ಲೆ ಮಾಡಿಸಿದ್ದನು.
Advertisement
Advertisement
ಅಷ್ಟೇ ಅಲ್ಲದೇ ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಬೆದರಿಸಿದ್ದನು. ಇದರಿಂದ ಬೆದರಿದ ನಾನು ತನ್ನ ಬಿಲ್ಡಿಂಗ್ ನಲ್ಲೇ ನಾನು ಜೀವ ಭಯದಿಂದ ಓಡಾಡುತ್ತಿದ್ದೇನೆ. ಈಗಲೂ ಕೂಡ ಉದಯ್ ಗೌಡನ ಗನ್‍ಮ್ಯಾನ್, ಕಾರ್ ಡ್ರೈವರ್, ಸೇರಿದಂತೆ ಹತ್ತಕ್ಕೂ ಹೆಚ್ಚು ಜನರು ಇದೇ ಬಿಲ್ಡಿಂಗ್‍ನಲ್ಲೇ ವಾಸವಾಗಿದ್ದಾರೆ. 2015 ರಿಂದ ಇಲ್ಲಿವರೆಗೂ 18 ಲಕ್ಷ ಹಣ ಬರಬೇಕಿದೆ, ಈಗ ವಿದೇಶದಲ್ಲಿದ್ದುಕೊಂಡೇ ವಾಟ್ಸಪ್ ನಲ್ಲಿ ಜೀವಬೆದರಿಕೆ ಹಾಕುತ್ತಿದ್ದಾನೆ. ಸದ್ಯಕ್ಕೆ ನಾನು ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಕಟ್ಟಡದ ಮಾಲೀಕ ಗಿರಿಗೌಡ ಅವರು ಹೇಳಿದ್ದಾರೆ.
ಇನ್ನು ತಾನು ವಾಸಿಸುವ ಅಪಾರ್ಟ್ ಮೆಂಟ್ ನಲ್ಲೂ ಅಕ್ಕಪಕ್ಕದವರ ಮೇಲೆ ಹಲ್ಲೆ ಮಾಡಿರುವ ಉದಯ್ ಗೌಡ, ಒಂದು ರೀತಿ ನಾನೇ ರಾಜ ನಾನೇ ಮಂತ್ರಿ ಅನ್ನೋ ರೀತಿ ವರ್ತಿಸಿಸುತ್ತನಂತೆ. ಇಷ್ಟೆಲ್ಲಾ ಆದರೂ ಕೂಡ ಯಾರೊಬ್ಬರು ಉದಯ್ ಗೌಡನ ಮೇಲೆ ದೂರು ಕೋಡುವ ಧೈರ್ಯ ಮಾಡಿರಲಿಲ್ಲ. ವಿಪರ್ಯಾಸ ಅಂದರೆ, ನಮ್ಮ ಸರ್ಕಾರವನ್ನು ಯಾರು ಬೀಳಿಸುದಕ್ಕೆ ಆಗಲ್ಲ ಅಂತ ಮಾಧ್ಯಮಗಳಿಗೆ ಹೇಳಿರುವ ಡಿಕೆಶಿ ಮನೆ ಪಕ್ಕದಲ್ಲೇ ಉದಯ್ ಗೌಡ ಈ ರೀತಿ ಐಷಾರಾಮಿ ಮನೆ ಮಾಡಿಕೊಳ್ಳುತ್ತಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv