ಕೋರ್ಟ್ ಬಳಿ ಉದಯಪುರ ಟೈಲರ್ ಹಂತಕರ ಬಟ್ಟೆ ಹರಿದು ಥಳಿಸಿದ ಪ್ರತಿಭಟನಾಕಾರರು

Advertisements

ಜೈಪುರ: ಟೈಲರ್ ಕನ್ಹಯ್ಯ ಲಾಲ್ ಅವರನ್ನು ಭೀಕರವಾಗಿ ಹತ್ಯೆಗೈದ ಹಂತಕರ ಮೇಲೆ ಜೈಪುರ ನ್ಯಾಯಾಲಯದ ಬಳಿ ದೊಡ್ಡ ಗುಂಪೊಂದು ಶನಿವಾರ ದಾಳಿ ನಡೆಸಿದೆ.

Advertisements

ಜೈಪುರ ನ್ಯಾಯಾಲಯದ ಹೊರಗೆ ಗುಂಪೊಂದು ಉದಯಪುರ ಟೈಲರ್ ಹಂತಕರ ಮೇಲೆ ಹಲ್ಲೆ ನಡೆಸಿ, ಬಟ್ಟೆಯನ್ನೆಲ್ಲಾ ಹರಿದು ಹಾಕಿದ್ದಾರೆ. ಪೊಲೀಸರು ತಕ್ಷಣ ಆರೋಪಿಗಳನ್ನು ಪೊಲೀಸ್ ವ್ಯಾನ್‌ಗೆ ಹತ್ತಿಸಿ, ಅವರನ್ನು ರಕ್ಷಿಸಿದ್ದಾರೆ.

Advertisements

ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಮಂಗಳವಾರ ಇಬ್ಬರು ಪಾತಕಿಗಳು ಭೀಕರವಾಗಿ ಹತ್ಯೆ ನಡೆಸಿ, ಅದರ ವೀಡಿಯೋವನ್ನೂ ಮಾಡಿದ್ದರು. ಬಳಿಕ ಅವರು ಹತ್ಯೆಗೆ ಬಳಸಿದ ಆಯುಧದಿಂದಲೇ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯನ್ನೂ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಆ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಇದನ್ನೂ ಓದಿ: ಜುಬೇರ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ – 14 ದಿನ ನ್ಯಾಯಾಂಗ ಬಂಧನ

ವೀಡಿಯೋ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ಬೆಚ್ಚಿ ಬಿದ್ದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಹಂತಕರಾದ ಅಖ್ತಾರಿ ಹಾಗೂ ಮೊಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದರು. ಹತ್ಯೆಯಲ್ಲಿ ಭಾಗಿಯಾಗಿದ್ದ ಹಾಗೂ ಸಂಚು ರೂಪಿಸಿದ್ದ ಆರೋಪದ ಮೇಲೆ ಪೊಲೀಸರು ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ.

Udaipur

ನಾಲ್ಕೂ ಆರೋಪಿಗಳನ್ನು ಇಂದು ಜೈಪುರದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೂ ಆರೋಪಿಗಳ ಮೇಲೆ ಸ್ಥಳದಲ್ಲಿ ನೆರೆದಿದ್ದ ಗುಂಪು ಹಲ್ಲೆ ನಡೆಸಲು ಮುಂದಾಗಿದೆ. ಇದರೊಂದಿಗೆ ಕನ್ಹಯ್ಯ ಹಂತಕರಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕರೊಂದಿಗೆ ಟೈಲರ್‌ ಹಂತಕರಿರೋ ಫೋಟೋ ವೈರಲ್‌ – BJPಗೂ ಹಂತಕರಿಗೂ ಇದ್ಯಾ ನಂಟು?

Advertisements

Live Tv

Advertisements
Exit mobile version