ಉಡುಪಿ: ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ. ದೇಶಾದ್ಯಂತ ಮದರಸಗಳಿಗೆ ಲಗಾಮು ಹಾಕಿದರೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್‍ರಂತಹ ದುಷ್ಕೃತ್ಯಗಳನ್ನು ತಡೆಯಬಹುದು. ಮುಸ್ಲಿಂ ಭಯೋತ್ಪಾದನೆ ಸೃಷ್ಟಿಯಾಗಿರುವ ಕೇಂದ್ರವಾಗಿ ಮದರಸಗಳು ಪರಿವರ್ತನೆಯಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಮದರಾಸಗಳ ವಿರುದ್ಧ ವಾಗ್ದಾಳಿ ನಡೆಸಿದೆ.
Advertisement
ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ, ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ಮಾಡಿದೆ. ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಸುಮಾರು ಎರಡು ಕಿಲೋಮೀಟರ್‌ಗಳ ಕಾಲ ನೂರಾರು ಹಿಂದೂ ಕಾರ್ಯಕರ್ತರು ಘಟನೆಯ ವಿರುದ್ಧ ಧಿಕ್ಕಾರ ಕೂಗುತ್ತಾ ಸಾಗಿದರು. ಬಿಜೆಪಿಯ ನೂಪುರ್ ಶರ್ಮ ಹೇಳಿಕೆಯನ್ನು ಬೆಂಬಲಿಸಿದ ಕಾರಣಕ್ಕೆ ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆಯಾಗಿದೆ. ಈ ಬೆಳವಣಿಗೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಕರಾವಳಿಯಲ್ಲಿ ಹಿಂದೂ ಜಾಗರಣ ವೇದಿಕೆ ಮುಂದಾಳತ್ವದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ಮಾಡುವ ಮೂಲಕ ಘಟನೆಯನ್ನು ಖಂಡಿಸಿದರು. ಇದನ್ನೂ ಓದಿ: ಕನ್ಹಯ್ಯಾ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ
Advertisement
Advertisement
ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಮಾತನಾಡಿ, ಇಸ್ಲಾಂನ ಭಯೋತ್ಪಾದನೆ ಮತ್ತು ಕ್ರೌರ್ಯತೆ ಮಿತಿಮೀರಿದ ಹಿನ್ನೆಲೆಯಲ್ಲಿ ನಡೆದ ಘಟನೆ ಇದು. ಹಿಂದೂ ಜಾಗರಣ ವೇದಿಕೆ ಇದನ್ನು ಖಂಡಿಸುತ್ತದೆ. ದೇಶಾದ್ಯಂತ ಮದರಸಗಳಿಗೆ ಲಗಾಮು ಹಾಕಿದರೆ ಇಂತಹ ದುಷ್ಕೃತ್ಯಗಳನ್ನು ತಡೆಯಬಹುದು. ಮುಸ್ಲಿಂ ಭಯೋತ್ಪಾದನೆ ಸೃಷ್ಟಿಯಾಗಿರುವ ಕೇಂದ್ರವಾಗಿ ಮದರಸಗಳು ಪರಿವರ್ತನೆಯಾಗಿದೆ. ಆ ಬಗ್ಗೆ ನಿಗಾವಹಿಸಬೇಕು. ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ, ಸಮಾಜದಲ್ಲಿ ಅನ್ಯಾಯ ಅಹಿತಕರ ಘಟನೆಗಳನ್ನು ಈ ಭಯೋತ್ಪಾದನಾ ಕೃತ್ಯವನ್ನು ತಡೆಗಟ್ಟಿ. ಸಾಧ್ಯವಾಗದಿದ್ದರೆ ಹಿಂದೂ ಸಮಾಜ ಇಂತಹ ದುಷ್ಟರನ್ನು ಮಟ್ಟಹಾಕುತ್ತದೆ. ಆರೋಪಿಗಳ ಬಂಧನ ಆಗಿದೆ. ಆದರೆ ಆರೋಪಿಗಳು ಎಲ್ಲದಕ್ಕೂ ಕೂಡ ಸಿದ್ಧತೆ ಮಾಡಿಕೊಂಡು ಈ ಕೃತ್ಯ ಎಸಗಿದ್ದು ಎಂಬುದು ಜಗಜ್ಜಾಹೀರಾಗಿದೆ. ಒಂದು ಕೊಲೆಯನ್ನು ಮೊಬೈಲ್ ಶೂಟಿಂಗ್ ಮಾಡಿ ಲೈವ್ ಮಾಡುವ ತನಕ ಮನಸ್ಥಿತಿ ಬಂದಿದೆ ಎಂದರೆ ಇದು ಭಯೋತ್ಪಾದನೆ ಹೊರತು ಮತ್ತೇನು ಅಲ್ಲ. ಕೊಲೆಯ ನಂತರ ಮತ್ತೊಂದು ವೀಡಿಯೋ ಮಾಡಿ ತಾವು ಮಾಡಿರುವ ಕೃತ್ಯವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇಬ್ಬರಿಗೆ ಮರಣದಂಡನೆ ಕೊಟ್ಟರು ಅದಕ್ಕೂ ಅವರು ಸಿದ್ಧರಾಗಿರುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ಗಲ್ಲು
Advertisement
ಉದಯಪುರದ ಇಬ್ಬರೂ ಭಯೋತ್ಪಾದಕರಂತೆ ದೇಶಾದ್ಯಂತ ಭಯೋತ್ಪಾದಕರು ಹುಟ್ಟಿದ್ದಾರೆ. ಆರಂಭಿಕ ಹಂತದಿಂದಲೇ ಇಂತಹದ್ದನ್ನು ಕಿತ್ತು ಹಾಕುವ ಕೆಲಸ ಆಗಬೇಕಾಗಿದೆ. ಇಸ್ಲಾಮ್‌ನ ಮುಖ ಏನು ಎಂಬುದನ್ನು ತೋರಿಸಲು ಅವರಿಬ್ಬರು ಹೊರಟಿದ್ದಾರೆ. ಕ್ರೌರ್ಯದ ಮುಖಾಂತರ ಭಯವನ್ನು ಹುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಮುಸಲ್ಮಾನರು ಮತ್ತು ಇಸ್ಲಾಮ್‌ನ ಬಗ್ಗೆ ಯಾರಾದರೂ ಮಾತನಾಡಿದರೆ ಇದೇ ಗತಿ ಎಂಬ ಸಂದೇಶವನ್ನು ಕೊಡಲು ಹೊರಟಿದ್ದಾರೆ. ಇಂತಹ ಘಟನೆಗಳು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಇದೆ. ಭಾರತದಲ್ಲಿ ಇದು ಪಸರಿಸಲು ಶುರುವಾಗಿದೆ. ಇಂತಹ ಶಕ್ತಿಗಳನ್ನು ಪ್ರಾರಂಭದಲ್ಲೇ ಮಟ್ಟಹಾಕಬೇಕು ಎಂದರು.
ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ ಅಜ್ಜರಕಾಡು ಹುತಾತ್ಮ ವೇದಿಕೆಯ ಬಳಿ ಸಮಾಪನಗೊಂಡಿತು ಸಭೆಯಲ್ಲಿ ಘಟನೆಯನ್ನು ಖಂಡಿಸಲಾಯಿತು. ಇಂತಹ ಘಟನೆ ಮರುಕಳಿಸುವಂತೆ ಕೇಂದ್ರ ಮತ್ತು ಆಯಾಯ ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.