ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ, ಆರೋಪಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಿ: ಓವೈಸಿ

Public TV
2 Min Read
owaisi 1

ಭೋಪಾಲ್: ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿದ ಆರೋಪದ ಮೇಲೆ ಟೈಲರ್ ಹತ್ಯೆ ಮಾಡಿರುವುದನ್ನು ಖಂಡಿಸಿದ್ದಾರೆ.

ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯ ಪ್ರಚಾರದ ಭಾಗವಾಗಿ ಭೋಪಾಲ್‍ನ ಅಶೋಕ ಗಾರ್ಡನ್ ಪ್ರದೇಶದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ. ಯಾರನ್ನಾದರೂ ಕೊಲ್ಲಲು ಕಾನೂನಿನಲ್ಲಿ ಅವಕಾಶವಿಲ್ಲ. ಯಾರೂ ಇತರರನ್ನು ಕೊಲ್ಲಲು ಸಾಧ್ಯವಿಲ್ಲ. ನಾವು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ. ಇದೊಂದು ಅಪರಾಧ. ಆದರೆ ನೂಪುರ್ ಶರ್ಮಾ ಅವರನ್ನೂ ಬಂಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟೈಲರ್ ಹತ್ಯೆ ಭೀಕರವಾಗಿದೆ, ದಯವಿಟ್ಟು ವೀಕ್ಷಿಸಬೇಡಿ: ರಾಜಸ್ಥಾನ ಪೊಲೀಸರು ಮನವಿ

udaypura

ಟೈಲರ್ ಹತ್ಯೆಯನ್ನು ಘೋರ ಎಂದು ಬಣ್ಣಿಸಿದ ಅವರು, ಸರ್ಕಾರವು ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಹಿಂಸಾಚಾರವನ್ನು ವಿರೋಧಿಸುವುದು ಎಐಎಂಐಎಂ ಸ್ಥಿರವಾದ ನಿಲುವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಭಾಷಣದ ವೇಳೆ ಓವೈಸಿ ಅವರು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಟೀಕಿಸಿದ್ದು, ಈ ಘಟನೆಗೆ ಅವರ ಪರಸ್ಪರ ಹಗ್ಗಜಗ್ಗಾಟವೇ ಕಾರಣ ಎಂದು ಆರೋಪಿಸಿದ್ದಾರೆ.

ACCUSED

ನಡೆದಿದ್ದೇನು?
ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಮುಸ್ಲಿಂ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದರು. ಈ ಹಿನ್ನೆಲೆ ಹಲವು ಮುಸ್ಲಿಂ ಸಮುದಾಯದವರು ಆಕೆಯನ್ನು ವಿರೋಧಿಸಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಓವೈಸಿ ಅವರು ಸಹ ನೂಪುರ್ ಶರ್ಮಾ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಇತ್ತೀಚೆಗೆ ಹಿಂದೂ-ಮುಸ್ಲಿಂ ಜಗಳ, ಪ್ರತಿಭಟನೆಗಳು ಹಿಂಸಾಚಾರದ ರೂಪವನ್ನು ಪಡೆಯುತ್ತಿದೆ.

NUPUR OWAISI

ಟೈಲರ್ ಬರ್ಬರ ಹತ್ಯೆ
ಮೃತ ಟೈಲರ್ ಕನ್ಹಯ್ಯಾ ಲಾಲ್ ಅವರು ಉದಯಪುರದ ಜನನಿಬಿಡ ಮಾರುಕಟ್ಟೆಯಲ್ಲಿ ತಮ್ಮ ಅಂಗಡಿಯಲ್ಲಿದ್ದರು. ಕನ್ಹಯ್ಯ ನೂಪರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದ. ಇದರಿಂದ ಕೋಪಗೊಂಡ ಇಬ್ಬರು ಮುಸ್ಲಿಂ ಮೂಲಭೂತವಾದಿ ಯುವಕರು ಟೈಲರ್‌ನನ್ನು ಬರ್ಬರವಾಗಿ ಶಿರಚ್ಛೇದ ಮಾಡಿದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಂಗಳವಾರ ಮಧ್ಯಾಹ್ನ 2:30ರ ವೇಳೆಗೆ ಈ ಘಟನೆ ನಡೆದಿತ್ತು. ಸಂಜೆ ವೇಳೆಗೆ ಇಬ್ಬರೂ ಆರೋಪಿಗಳನ್ನು ರಾಜಾಸ್ಥಾನದಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಟೈಲರ್‌ ಶಿರಚ್ಛೇದನ ಮಾಡಿದ ಮುಸ್ಲಿಂ ಯುವಕರು ಕೆಲವೇ ಗಂಟೆಗಳಲ್ಲಿ ಅರೆಸ್ಟ್‌

Rajasthan 2 Muslim youths behead Hindu shopkeeper in broad daylight post video on social media threatening PM Modi

ವೀಡಿಯೋದಲ್ಲಿ ಏನಿದೆ?
ನಾನು ರಿಯಾಜ್ ಅಹ್ಮದ್. ಇವನು ನನ್ನಣ್ಣ ಮೊಹಮ್ಮದ್. ಉದಯಪುರದಲ್ಲಿರುವ ಮಾಲ್ಡಾಸ್ ಸ್ಟ್ರೀಟ್‍ನಲ್ಲಿರುವ ಹಿಂದೂ ವ್ಯಕ್ತಿಯ ತಲೆಯನ್ನು ಕತ್ತರಿಸಿದ್ದೇವೆ. ನಾವು ಬದುಕುತ್ತಿದ್ದೇವೆ ಪ್ರವಾದಿ ಸಲುವಾಗಿ. ಪ್ರವಾದಿಗಾಗಿ ಜೀವ ಬಿಡಲು ಸಿದ್ಧ. ಏಯ್ ನರೇಂದ್ರ ಮೋದಿ ಬೆಂಕಿ ಹಬ್ಬಿಸಿದ್ದು ನೀನು. ಅದನ್ನು ಆರಿಸುತ್ತೇವೆ ನಾವು. ನಾನು ಜೀವಂತವಿದ್ದರೆ ಈ ನನ್ನ ಕತ್ತಿ ನಿನ್ನ ಕುತ್ತಿಗೆ ತಲುಪಿ, ನಿನ್ನನ್ನು ಸಂಹಾರ ಮಾಡುತ್ತೇನೆ.

Live Tv

Share This Article
Leave a Comment

Leave a Reply

Your email address will not be published. Required fields are marked *