ಜೈಪುರ: ಮಂಗಳವಾರ ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಹತ್ಯೆ ಮಾಡಿದ ಇಬ್ಬರು ವ್ಯಕ್ತಿಗಳು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಲಾಗಿದೆ.
ಉದಯಪುರ ಹತ್ಯೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರ ಹೇಳಿಕೆಗಳನ್ನು ಬೆಂಬಲಿಸಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ ಹಿನ್ನೆಲೆ ಕನ್ಹಯ್ಯಾ ಲಾಲ್ ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳೇ ರಾಜಾರೋಷವಾಗಿ ಹೇಳಿಕೊಂಡಿದ್ದರು. ಕನ್ಹಯ್ಯಾ ಲಾಲ್ ಅವರನ್ನು ಕೊಂದ ಹಂತಕರು ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ನಾನು ಉದಯಪುರ ಘಟನೆಯನ್ನು ಖಂಡಿಸುತ್ತೇನೆ, ಆರೋಪಿಗಳ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಿ: ಓವೈಸಿ
Advertisement
Advertisement
ತನಿಖೆಯಲ್ಲಿ ತಿಳಿದಿದ್ದೇನು?
ಆರೋಪಿಗಳಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅಹ್ಮದ್ ಅವರನ್ನು ಮಂಗಳವಾರ ರಾತ್ರಿ ರಾಜ್‍ಸಮಂದ್ ಜಿಲ್ಲೆಯ ಭೀಮ್ ಪ್ರದೇಶದಲ್ಲಿ ಬಂಧಿಸಲಾಗಿದೆ.
Advertisement
ದಾವತ್-ಎ-ಇಸ್ಲಾಮಿಯೊಂದಿಗೆ ಸಂಬಂಧ
ಆರೋಪಿಗಳು ಖಂಜಿಪೀರ್‍ನ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಭಿಲ್ವಾರಾ ಮೂಲದ ರಿಯಾಜ್, ಉದಯಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಗೌಸ್ ಮೊಹಮ್ಮದ್ ರಾಜಸ್ಮಾಂಡ್‍ನ ಭೀಮಾದವನು. ಮೂಲಗಳ ಪ್ರಕಾರ, ಇಬ್ಬರೂ ಆರೋಪಿಗಳು ಪಾಕಿಸ್ತಾನ ಮೂಲದ ತೀವ್ರ ಮುಸ್ಲಿಂ ಮೂಲಭೂತವಾದಿ ಸಂಘಟನೆಯಾದ ದಾವತ್-ಎ-ಇಸ್ಲಾಮಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಟೈಲರ್ ಹತ್ಯೆ ಖಂಡಿಸಿ ಭುಗಿಲೆದ್ದ ಪ್ರತಿಭಟನೆ – ರಾಜಸ್ಥಾನದಲ್ಲಿ 1 ತಿಂಗಳು 144 ಸೆಕ್ಷನ್ ಜಾರಿ
Advertisement
ರಿಯಾಜ್ ಎಂಬಾತನ ಸೋದರಳಿಯ ಈ ಕುರಿತು ಮಾತನಾಡಿದ್ದು, ನನ್ನ ಚಿಕ್ಕಪ್ಪ ಮಾಡಿದ್ದು ಖಂಡನೀಯ. ಶಾಂತಿ ಕದಡಲು ಯತ್ನಿಸಿದರು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ.
ಆರೋಪಿಗಳಿಬ್ಬರೂ ಪ್ರಸ್ತುತ ರಾಜಸ್ಥಾನದ ರಾಜ್‍ಸಮಂದ್ ಜಿಲ್ಲೆಯ ಚಾರ್ಭುಜ ಪೊಲೀಸ್ ಠಾಣೆಯ ಲಾಕ್‍ಅಪ್‍ನಲ್ಲಿದ್ದಾರೆ. ಇದನ್ನೂ ಓದಿ: ಟೈಲರ್ ಹತ್ಯೆ ಬೆನ್ನಲ್ಲೆ ನವೀನ್ ಕುಮಾರ್ ಜಿಂದಾಲ್‌ಗೆ ಕೊಲೆ ಬೆದರಿಕೆ
ಮೋದಿಗೆ ಬೆದರಿಕೆ
ಹತ್ಯೆ ವೀಡಿಯೋ ನಂತರ ಮತ್ತೊಂದು ವೀಡಿಯೋ ಶೇರ್ ಮಾಡಿದ ಈ ಹಂತರು ಪ್ರಧಾನಿ ನರೇಂದ್ರ ಮೋದಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ವೀಡಿಯೋವನ್ನು ಜೂನ್ 17 ರಂದು ರೆಕಾರ್ಡ್ ಮಾಡಲಾಗಿದ್ದು, ಮಂಗಳವಾರ ಟೈಲರ್ ಕೊಲೆಯ ನಂತರ ರಿಲೀಸ್ ಮಾಡಿದ್ದಾರೆ. ಆ ವೀಡಿಯೋದಲ್ಲಿರುವ ಇಬ್ಬರಲ್ಲಿ ಒಬ್ಬ ಮಂಗಳವಾರ ಉದಯಪುರದಲ್ಲಿ ಮಾಡಿದ ಕೃತ್ಯದ ಕಾರಣವನ್ನು ವಿವರಿಸಿದ್ದಾನೆ.