ನವದೆಹಲಿ: ಭಾರತೀಯ ಆಂಡ್ರಾಯ್ಡ್ ಗ್ರಾಹಕರು ಸರ್ಚ್ ಮಾಡಲು ಬಳಸುತ್ತಿದ್ದ ಯುಸಿ ಬ್ರೌಸರ್ ಅಪ್ಲಿಕೇಶನನ್ನು ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಕಿತ್ತು ಹಾಕಿದೆ.
ಯುಸಿ ಬ್ರೌಸರ್ ತೆಗೆದು ಹಾಕಿದ್ದರೂ ಯುಸಿ ಬ್ರೌಸರ್ ಮಿನಿ ಮತ್ತು ಯುಸಿ ನ್ಯೂಸ್ ಅಪ್ಲಿಕೇಶನ್ ಗಳು ಈಗಲೂ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.
Advertisement
ಚೀನಾದ ಅಲಿಬಾಬಾ ಕಂಪೆನಿ ಅಭಿವೃದ್ಧಿ ಪಡಿಸಿರುವ ಯುಸಿ ಬ್ರೌಸರ್ ಆ್ಯಪನ್ನು ಒಟ್ಟು 5 ಕೋಟಿಗೂ ಅಧಿಕ ಜನ ಡೌನ್ ಲೋಡ್ ಮಾಡಿದ್ದು, ಕಳೆದ ಒಂದೇ ತಿಂಗಳಿನಲ್ಲಿ 1 ಕೋಟಿ ಜನ ಡೌನ್ ಲೋಡ್ ಮಾಡಿದ್ದರು. ಆದರೆ ಇದಕ್ಕಿದ್ದಂತೆ ಗೂಗಲ್ ಯುಸಿ ಬ್ರೌಸರ್ ಅನ್ನು ಪ್ಲೇ ಸ್ಟೋರ್ ನಿಂದ ಕಿತ್ತು ಹಾಕಿದ್ದು ಯಾಕೆ ಎನ್ನುವುದಕ್ಕೆ ನಿಜವಾದ ಕಾರಣ ತಿಳಿದು ಬಂದಿಲ್ಲ.
Advertisement
ಯುಸಿ ಬ್ರೌಸರ್ ನಲ್ಲಿ ಕೆಲಸ ಮಾಡುತ್ತಿರುವ ಮೈಕ್ ರೋಸ್ ಎಂಬವರು ಈ ಬಗ್ಗೆ ಟ್ವೀಟ್ ಮಾಡಿದ್ದು, 30 ದಿನಗಳಲ್ಲಿ ತಪ್ಪು ಪ್ರಚಾರ ಮಾಡಿ ಡೌನ್ ಲೋಡ್ ಹೆಚ್ಚಳ ಮಾಡಿದೆ ಎನ್ನುವ ಆರೋಪಕ್ಕೆ ಪ್ಲೇ ಸ್ಟೋರ್ ತಾತ್ಕಾಲಿಕವಾಗಿ ಆ್ಯಪನ್ನು ತೆಗೆದು ಹಾಕಿದೆ. ಈ ವಿಚಾರದ ಬಗ್ಗೆ ನಾವು ಗೂಗಲ್ ಕಂಪೆನಿಯನ್ನು ಸಂಪರ್ಕಿಸಿದ್ದೇವೆ ಎಂದು ತಿಳಿಸಿದ್ದಾರೆ.
Advertisement
Advertisement
ಆಗಸ್ಟ್ ತಿಂಗಳಿನಲ್ಲಿ ಯುಸಿ ಬ್ರೌಸರ್ ಭಾರತೀಯ ಗ್ರಾಹಕರ ಡೇಟಾವನ್ನು ಚೀನಾದಲ್ಲಿ ಸರ್ವರ್ ಕಳುಹಿಸುತ್ತಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದಲ್ಲಿ ಚೀನಾದ ಬ್ರೌಸರ್ ಅನ್ನು ನಿಷೇಧಿಸಲಾಗುವುದು ಎಂದು ಭಾರತ ಸರ್ಕಾರ ಹೇಳಿತ್ತು.
ಡೇಟಾ ಸಂಸ್ಥೆ ಸ್ಟೇಟ್‍ಕೌಂಟರ್ ಪ್ರಕಾರ, ಭಾರತದಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಗಿಂತಲೂ ಯುಸಿ ಬ್ರೌಸರ್ ಹೆಚ್ಚು ಪ್ರಸಿದ್ಧವಾಗಿದೆ. ಶೇ.60 ರಷ್ಟು ಭಾರತೀಯ ಬಳಕೆದಾರರು ಯುಸಿ ಬ್ರೌಸರ್ ಬಳಸುತ್ತಿದ್ದಾರೆ ಎಂದು ಹೇಳಿತ್ತು.
ಪ್ಲೇಸ್ಟೋರ್ ನಿಂದ ಡಿಲೀಟ್ ಆಗಿದ್ದರೂ ಆ್ಯಪ್ ಬೇಕಿದ್ದಲ್ಲಿ ಆಂಡ್ರಾಯ್ಡ್ ಗ್ರಾಹಕರು ಯುಸಿ ಬ್ರೌಸರ್ ಸೈಟಿಗೆ ಹೋಗಿ ಡೌನ್ ಲೋಡ್ ಮಾಡಬಹುದಾಗಿದೆ.