ಹೈದರಾಬಾದ್: ಟೆಕ್ಕಿಯೊಬ್ಬಳು ಉಬರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಸ್ತಮೈಥುನ ಮಾಡಿಕೊಂಡ ಚಾಲಕನನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. 26 ವರ್ಷ ದಾದಿ ಪ್ರೇಮ್ ಕುಮಾರ್ ಬಂಧಿತ ಚಾಲಕ.
ಏನಾಗಿತ್ತು?: ದೆಹಲಿ ಮೂಲದ 25 ವರ್ಷದ ಟೆಕ್ಕಿಯೊಬ್ಬಳು ತನ್ನ ಕುಟುಂಬದವರ ಜೊತೆ ದೀಪಾವಳಿ ಆಚರಿಸಿಕೊಳ್ಳಲು ಹೊರಟಿದ್ದಳು. ಇದಕ್ಕಾಗಿ ಆಕೆ ಉಬರ್ ಟ್ಯಾಕ್ಸಿ ಬುಕ್ ಮಾಡಿದ್ದಳು. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಏರ್ ಪೋರ್ಟ್ ಗೆ ತೆರಳುತ್ತಿದ್ದ ಕಾರು ಹೊರ ವರ್ತುಲ ರಸ್ತೆಗೆ ಬರುತ್ತಿದ್ದಂತೆಯೇ ಚಾಲಕ ಪ್ರೇಮ್ ಕುಮಾರ್ ಕಾರಿನ ವೇಗಕ್ಕೆ ಕಡಿವಾಣ ಹಾಕಿದ್ದಾರೆ.
Advertisement
ಕಾರಿನ ವೇಗವನ್ನು ಇಳಿಸಿದ ಚಾಲಕ ಕಾರಿನಲ್ಲಿದ್ದ ರಿಯರ್ ಮಿರರ್ ನಲ್ಲಿ ಯುವತಿಯನ್ನು ನೋಡುತ್ತಾ ಹಸ್ತಮೈಥುನ ಆರಂಭಿಸಿದ್ದಾನೆ. ಚಾಲಕನ ಅಸಭ್ಯ ವರ್ತನೆಯಿಂದ ಸಿಟ್ಟಿಗೆದ್ದ ಯುವತಿ ಕಾರು ನಿಲ್ಲಿಸುವಂತೆ ಕೂಗಾಡುತ್ತಾಳೆ. ಆದರೂ ಆತ ಕಾರನ್ನು ನಿಲ್ಲಿಸದೆ ಮುಂದಕ್ಕೆ ಹೋಗುತ್ತಾನೆ. ಈ ವೇಳೆ ಯುವತಿ ಮೊಬೈಲ್ ನಲ್ಲಿ ಚಾಲಕನ ಫೋಟೋ ತೆಗೆಯುತ್ತಾಳೆ. ಬಳಿಕ ಅದನ್ನು ಫೇಸ್ ಬುಕ್ ನಲ್ಲಿ ಹಾಕುತ್ತಾಳೆ.
Advertisement
Advertisement
ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಯುವತಿ ದೂರು ನೀಡಲು ಮುಂದಾಗುತ್ತಾಳೆ. ಆದರೆ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದರಿಂದ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ತಕ್ಷಣ ಆಕೆ ಆನ್ ಲೈನ್ ಮೂಲಕ ದೂರು ದಾಖಲಿಸಿದ್ದಾಳೆ. ದೂರು ಸ್ವೀಕರಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರಿನ ಚಾಲಕ ಹಾಗೂ ಮಾಲೀಕನಾಗಿದ್ದ ಹಫೀಜ್ ಪೇಟೆಯ ದಾದಿ ಪ್ರೇಮ್ ಕುಮಾರ್ ನನ್ನು ಬಂಧಿಸಿದ್ದಾರೆ. ಕಾರಿನ ಚಾಲಕ ಅಂದು ರಜೆ ಹಾಕಿದ್ದರಿಂದ ಪ್ರೇಮ್ ಕುಮಾರನ್ನೇ ಅಂದು ಕಾರು ಚಾಲನೆ ಮಾಡಿದ್ದಾನೆ.
Advertisement
ಪೊಲೀಸರ ತನಿಖೆ ವೇಳೆ ಈ ಕಾರು ಉಬರ್ ಸಂಸ್ಥೆಯ ಜೊತೆ ನೋಂದಣಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೂ ಉಬರ್ ಈ ಕಾರಿಗೆ ಹೇಗೆ ಅವಕಾಶ ಕೊಟ್ಟಿತು ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಉಬರ್ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮಧಪುರ ಡಿಸಿಪಿ ವಿಶ್ವಪ್ರಸಾದ್ ಹೇಳಿದ್ದಾರೆ.