ಹೈದರಬಾದ್: ಮಹಿಳೆಯ ಮುಂದೆಯೇ ಹಸ್ತಮೈಥುನ ಮಾಡಿಕೊಂಡಿದ್ದ ಉಬರ್ ಕ್ಯಾಬ್ ಡ್ರೈವರ್ ನನ್ನು ಸೈಬಾರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಕೊಂದಾಪುರ ಗಚಿಬೌಲಿ ಬಡಾವಣೆಯ ಮಹಿಳಾ ನಿವಾಸಿ, ಅಕ್ಟೋಬರ್ 19 ರಂದು ಬೆಳಗ್ಗೆ ದೆಹಲಿಗೆ ಹೊರಡಲು ಬುಕ್ ಮಾಡಿದ್ದ ಕಾರಿನಲ್ಲಿ ಡ್ರೈವರ್ ಈ ಕೃತ್ಯ ಎಸಗಿದ್ದ. ಈ ಕೃತ್ಯವನ್ನು ನೋಡಿದ್ದ ಮಹಿಳೆ ದೆಹಲಿಯ ಸಫರ್ ಜಂಗ್ ಠಾಣೆಯಲ್ಲಿ ದೂರು ನೀಡಿದ್ದರು.
Advertisement
ಏನಿದು ಪ್ರಕರಣ?
ಅಕ್ಟೋಬರ್ 19 ರಂದು ಹೈದರಬಾದ್ ವಿಮಾನ ನಿಲ್ದಾಣಕ್ಕೆ ತೆರಳಲು ಮಹಿಳೆಯೊಬ್ಬರು ಉಬರ್ ಕಾರನ್ನು ಬುಕ್ ಮಾಡಿದ್ದರು. ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಉಬರ್ ಡ್ರೈವರ್ ಕಾರಿನಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೇ ಕಾರನ್ನು ನಿಲ್ಲಿಸಿ ಹಸ್ತಮೈಥುನ ಮಾಡಿದ್ದ. ಈ ವೇಳೆ ಕೃತ್ಯವನ್ನು ಪೊಲೀಸರಿಗೆ ತಿಳಿಸುವುದಾಗಿ ಎಚ್ಚರಿಕೆ ನೀಡಿದ ಬಳಿಕ ಆತ ಮಹಿಳೆಯನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದ.
Advertisement
ಮಹಿಳೆಯು ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪುತ್ತಿದ್ದಂತೆ 1091 ಸಹಾಯವಾಣಿಗೆ ಕರೆ ಮಾಡಿ ಸಫರ್ ಜಂಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಕೇಸ್ ವರ್ಗಾವೆಣೆಯಾಗಿ ಸೈಬಾರಾಬಾದ್ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಡ್ರೈವರ್ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
Advertisement
ಡಿಸಿಪಿ ಮಧಪುರ್ ಅವರು ಡ್ರೈವರ್‍ನನ್ನು ಬಂಧಿಸಿಲು ಎರಡು ವಿಶೇಷ ತಂಡಗಳನ್ನು ರಚಿಸಿದ್ದರು. ಈಗ ಡ್ರೈವರ್ ನನ್ನು ಬಂಧಿಸಲಾಗಿದ್ದು, ಕಾರನ್ನು ವಶಕ್ಕೆ ಪಡೆಯಲಾಗಿದೆ. ಡ್ರೈವರ್‍ನನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
Advertisement
ತನಗಾದ ಅನ್ಯಾಯವನ್ನು ಮಹಿಳೆ ಫೇಸ್‍ಬುಕ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಮಹಿಳೆಯ ಆರೋಪದ ಅಡಿ ಉಬರ್ ಕ್ಯಾಬ್ ಸಂಸ್ಥೆಯು ಡ್ರೈವರ್ ನನ್ನು ವಜಾ ಮಾಡಿದೆ.
ಈ ಘಟನೆಯ ಬಳಿಕ ಡ್ರೈವರ್ ನನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಮತ್ತೆ ಡ್ರೈವರ್ ಕ್ಷಮೆಯಾಚಿಸಿದರೂ ಆತನನ್ನು ಸೇವೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಉಬರ್ ತಿಳಿಸಿದೆ.