ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶವನ್ನು ಯುಎಪಿಎ ಟ್ರಿಬ್ಯುನಲ್ ಎತ್ತಿ ಹಿಡಿದಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಪಿಎಫ್‍ಐ ಮೇಲೆ ವಿಧಿಸಿದ ನಿಷೇಧವನ್ನು ಪರಿಶೀಲಿಸಲು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅಧ್ಯಕ್ಷತೆಯಲ್ಲಿ ಟ್ರಿಬ್ಯುನಲ್ ರಚಿಸಲಾಗಿತ್ತು. ಪಿಎಫ್‍ಐ ಮೇಲೆ ನಿಷೇಧ ಹೇರಿದ ಕ್ರಮದ ಬಗ್ಗೆ ದೇಶದ ವಿವಿಧೆಡೆ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ, ಕೇಂದ್ರದ ಆದೇಶವನ್ನು ಎತ್ತಿ ಹಿಡಿದೆ.
Advertisement
ಕಳೆದ ವರ್ಷ ಸೆಪ್ಟೆಂಬರ್ 28 ರಂದು ಯುಎಪಿಎ ಸೆಕ್ಷನ್3 ರ ಅಡಿಯಲ್ಲಿ ಪಿಎಫ್‍ಐ ಮತ್ತು ಅದರ ಅನುಬಂಧ ಸಂಸ್ಥೆಗಳನ್ನು ಕಾನೂನುಬಾಹಿರ ಎಂದು ಗೃಹ ಸಚಿವಾಲಯ ಘೋಷಿಸಿತ್ತು. ಐದು ವರ್ಷ ನಿಷೇಧ ಹೇರಿತ್ತು. ಇದನ್ನೂ ಓದಿ: ದೆಹಲಿ ಹೊಸ ಮದ್ಯ ನೀತಿ ಹಗರಣ – ಕೆ. ಕವಿತಾ ಮೊಬೈಲ್ ವಶಕ್ಕೆ ಪಡೆದ ಇಡಿ