ಭಾರತದ ಗೋಧಿ ರಫ್ತನ್ನು 4 ತಿಂಗಳು ಅಮಾನತುಗೊಳಿಸಿದ ಯುಎಇ

Public TV
1 Min Read
WHEAT EXPORT

ದುಬೈ: ಭಾರತದ ಗೋಧಿ ಮತ್ತು ಗೋಧಿ ಹಿಟ್ಟಿನ ರಫ್ತನ್ನು 4 ತಿಂಗಳು ಅಮಾನತುಗೊಳಿಸುವಂತೆ ಸಂಯುಕ್ತ ಅರಬ್‌ ಒಕ್ಕೂಟವು (ಯುಎಇ) ಆದೇಶಿಸಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ WAM ವರದಿ ಮಾಡಿದೆ.

ಗಲ್ಫ್‌ ರಾಷ್ಟ್ರಗಳ ಆರ್ಥಿಕ ಸಚಿವಾಲಯವು ಜಾಗತಿಕ ವ್ಯಾಪಾರಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಕ್ರಮವಹಿಸಿದೆ. ಆದರೆ ದೇಶೀಯ ಬಳಕೆಗಾಗಿ ಯುಎಇಗೆ ಗೋಧಿ ರಫ್ತನ್ನು ಭಾರತ ಅನುಮೋದಿಸಿದೆ. ಇದನ್ನೂ ಓದಿ: ಮಂಕಿಪಾಕ್ಸ್ ಹೆಸರು ಬದಲಾವಣೆಗೆ WHO ನಿರ್ಧಾರ

UAE 1

ಭಾರತವು ಮೇ 14 ರಂದು ಗೋಧಿ ರಫ್ತನ್ನು ನಿಷೇಧಿಸಿತ್ತು. ಈಗಾಗಲೇ ನೀಡಲಾದ ಸಾಲದ ಪತ್ರಗಳು (LC) ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬಯಸುವ ದೇಶಗಳಿಗೆ ಬೆಂಬಲ ನೀಡಿದೆ. ಅಂದಿನಿಂದ 4,69,202 ಟನ್ ಗೋಧಿಯ ಸಾಗಣೆಗೆ ಅನುಮತಿ ನೀಡಿದೆ.

ಭಾರತದ ಗೋಧಿ ರಫ್ತಿಗೆ ಅಮಾನತು ವಿಧಿಸಿದ ದಿನದ ಮೊದಲೇ ಯುಎಇಗೆ ಬಂದಿರುವ ಭಾರತೀಯ ಗೋಧಿಯನ್ನು ರಫ್ತು ಮಾಡಲು ಬಯಸುವ ಕಂಪನಿಗಳು ಮೊದಲು ಆರ್ಥಿಕ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ರಕ್ಷಣಾ ಒಪ್ಪಂದ ಬಲಪಡಿಸಲು ಆಸ್ಟ್ರೇಲಿಯಾ ಪ್ಲ್ಯಾನ್‌ – ಜೂನ್ 21, 22 ಭಾರತಕ್ಕೆ ಉಪ ಪ್ರಧಾನಿ ಪ್ರವಾಸ

ಯುಎಇ ಮತ್ತು ಭಾರತ ಫೆಬ್ರವರಿಯಲ್ಲಿ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ಪರಸ್ಪರರ ಸರಕುಗಳ ಮೇಲಿನ ಎಲ್ಲಾ ಸುಂಕಗಳನ್ನು ಕಡಿತಗೊಳಿಸಲು ಕ್ರಮವಹಿಸಲಾಗಿದೆ. ಜೊತೆಗೆ ಐದು ವರ್ಷಗಳಲ್ಲಿ ತಮ್ಮ ವಾರ್ಷಿಕ ವ್ಯಾಪಾರವನ್ನು 100 ಬಿಲಿಯನ್‌ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿವೆ.

Live Tv

Share This Article
Leave a Comment

Leave a Reply

Your email address will not be published. Required fields are marked *